ಎನ್.ಆರ್.ಕ್ಷೇತ್ರದಲ್ಲಿ 3 ಕೋವಿಡ್ ಕೇರ್ ಸೆಂಟರ್ ತೆರೆಯಲು ಸಿದ್ಧತೆ
ಮೈಸೂರು

ಎನ್.ಆರ್.ಕ್ಷೇತ್ರದಲ್ಲಿ 3 ಕೋವಿಡ್ ಕೇರ್ ಸೆಂಟರ್ ತೆರೆಯಲು ಸಿದ್ಧತೆ

July 17, 2020

ಮೈಸೂರು, ಜು. 16(ಆರ್‍ಕೆ)- ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದ್ದು, ಸಾವಿನ ಪ್ರಕರಣಗಳೂ ಹೆಚ್ಚುತ್ತಿರುವುದರಿಂದ ಜಿಲ್ಲಾಡಳಿತವು ನಿಯಂತ್ರಣಕ್ಕೆ ಹೆಣಗಾಡುತ್ತಿರುವುದನ್ನು ಮನಗಂಡ ಮುಸ್ಲಿಂ ಬಾಂಧ ವರು ಮೈಸೂರಿನ ಎನ್.ಆರ್. ವಿಧಾನಸಭಾ ಕ್ಷೇತ್ರ ದಲ್ಲಿ ಮೂರು ಕೋವಿಡ್ ಕೇರ್ ಕೇಂದ್ರ ತೆರೆಯಲು ಮುಂದಾಗಿದ್ದಾರೆ.

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಒಂದು ವಾರದ ಮಟ್ಟಿಗೆ ಎನ್. ಆರ್. ಕ್ಷೇತ್ರದ ಕೆಲ ಭಾಗ ಗಳನ್ನು ಮಿನಿ ಲಾಕ್‍ಡೌನ್ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮೇಯರ್ ಅಯೂಬ್ ಖಾನ್, ಪಾಲಿಕೆ ವಕ್ರ್ಸ್ ಕಮಿಟಿ ಅಧ್ಯಕ್ಷ ಅಸ್ರತ್‍ಉಲ್ಲಾ ಖಾನ್, ಕಾರ್ಪೋರೇಟರ್ ಶೌಕತ್ ಪಾಷಾ ಅವರು ಕ್ಯೂಬಾ ಕೋವಿಡ್ ಕೇರ್ ಸೆಂಟರ್ ತೆರೆದು ಸಹಕರಿ ಸುವುದಾಗಿ ಜಿಲ್ಲಾಧಿಕಾರಿಗಳಲ್ಲಿ ಪ್ರಸ್ತಾಪವಿಟ್ಟಿದ್ದಾರೆ.

ಮೈಸೂರಿನ ಉದಯಗಿರಿಯಲ್ಲಿರುವ ಫಾರೂ ಖಿಯಾ ಡಿಎಡ್ ಕಾಲೇಜು, ರಾಜೀವ್‍ನಗರದ ಆ್ಯಂಡೊಲಸ್ ಪಬ್ಲಿಕ್ ಶಾಲೆಯಲ್ಲಿ ತಲಾ 200 ಹಾಸಿಗೆ, ಅಜೀಜ್‍ಸೇಠ್ ನಗರದ ಕಾರ್ಮಿಕರ ಆಸ್ಪತ್ರೆಯಲ್ಲಿ 250 ಹಾಸಿಗೆ ಸಾಮಥ್ರ್ಯದ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಜುಲೈ 14ರಂದು ಕ್ಯೂಬಾ ಕೋವಿಡ್-19 ಸಹಾಯ ವಾಣಿ ಕೇಂದ್ರವನ್ನು ಉದಯಗಿರಿಯ ಕ್ಯೂಬಾ ಪಬ್ಲಿಕ್ ಶಾಲೆಯಲ್ಲಿ ಉದ್ಘಾಟಿಸಿದರು.

ರಿಫಾಹುಲ್ ಮುಸ್ಲಿಮೀನ್ ಎಜುಕೇಷನಲ್ ಟ್ರಸ್ಟ್(ಖಒಇಖಿ) ಗೌರವ ಕಾರ್ಯದರ್ಶಿ, ತಾಜ್‍ಮಹಮದ್ ಖಾನ್ ಅವರು ‘ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ಉದಯಗಿರಿಯಲ್ಲಿರುವ ತಮ್ಮ ಫಾರೂಖಿಯಾ ಡಿಇಡಿ ಕಾಲೇಜು ಕಟ್ಟಡ ವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬಳಸಿ ಕೊಳ್ಳಲು ನೀಡುತ್ತಿದ್ದೇವೆ ಎಂದು ತಿಳಿಸಿದರು.

ಈ ಸಂಬಂಧ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಮೇಯರ್ ಅಯೂಬ್‍ಖಾನ್, ಕೋವಿಡ್ ಸೋಂಕು ಹರಡದಂತೆ ನಿಯಂತ್ರಿಸಲು ತಾವು, ಕಾರ್ಪೋ ರೇಟರ್‍ಗಳಾದ ಶೌಕತ್ ಪಾಷಾ ಮತ್ತು ಅಸ್ರತ್‍ಉಲ್ಲಾ ಖಾನ್ ಅವರು ಎನ್.ಆರ್. ಕ್ಷೇತ್ರದಲ್ಲಿ 3 ಕಡೆ ಕೋವಿಡ್ ಕೇರ್ ಸೆಂಟರ್ ತೆರೆಯಲು ಮುಂದಾಗಿ ಜಿಲ್ಲಾಡಳಿತಕ್ಕೆ ಇಂಗಿತ ವ್ಯಕ್ತಪಡಿಸಿ, ಸ್ಥಳವನ್ನು ಗುರ್ತಿಸಿಕೊಟ್ಟಿದ್ದೇವೆ ಎಂದರು.

ಅದರಂತೆ ಜಿಲ್ಲಾಧಿಕಾರಿಗಳು ಆಸಕ್ತಿ ವಹಿಸಿ ಕಟ್ಟಡಗಳನ್ನು ಪರಿಶೀಲಿಸಿ ಕ್ಯೂಬಾ ಕೋವಿಡ್-19 ಸಹಾಯವಾಣಿಯನ್ನು ಉದ್ಘಾಟಿಸಿದ್ದಾರೆ. ಆ ಸಂದರ್ಭ ಮುಖಂಡರಾದ ಅಬ್ದುಲ್ ಅಜೀಜ್ ಚಾಂದ್, ಜಾಹಿರ್ ಉಲ್ಲಾ ಹಖ್, ಕಾರ್ಪೋರೇಟರ್‍ಗಳು, ಹಲವು ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು ಎಂದು ಅಯೂಬ್‍ಖಾನ್ ತಿಳಿಸಿದರು.

ಕೇಂದ್ರಗಳಿಗೆ ಹಾಸಿಗೆ, ದಿಂಬು, ಮಂಚ ಸೇರಿ ದಂತೆ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತ ಪೂರೈ ಸಲಿದ್ದು, ಇನ್ನೊಂದು ವಾರದೊಳಗಾಗಿ ಕೋವಿಡ್ ಕೇರ್ ಸೆಂಟರ್ ಕಾರ್ಯಾರಂಭ ಮಾಡುವುದಾಗಿ ಜಿಲ್ಲಾಧಿಕಾರಿಗಳು ಆ ವೇಳೆ ಹೇಳಿದ್ದಾರೆ ಎಂದು ಅಯೂಬ್‍ಖಾನ್ ತಿಳಿಸಿದರು.

Translate »