ಮೈಸೂರು: ಸಿರಾಫಿಲ್ಸ್ ಮೀಡಿಯಾ ಅಂಡ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಸಣ್ಣ ಉದ್ಯಮಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಉದ್ಯಮಿಗಳಿಗೆ `ಮೈಸೂರು ಎಕ್ಸಲೆನ್ಸ್ ಆವಾರ್ಡ್’ ಪ್ರದಾನ ಸಮಾರಂಭವನ್ನು ಡಿ.16ರಂದು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಿಇಓ ದೀಪಕ್ ಟಾಟರ್ ಜೈನ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮೈಸೂರು ಮೂಲದ 35 ಸಣ್ಣ ಉದ್ಯಮಿಗಳಿಗೆ ವಿವಿಧ ವಿಭಾಗದಲ್ಲಿ ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ಭುಗತಗಳ್ಳಿಯ ಜಲ್ ಮಹಲ್ ರೆಸಾರ್ಟ್ ಅಂಡ್ ಸ್ಪಾದಲ್ಲಿ ಅಂದು ಸಂಜೆ 6ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಏಷಿಯನ್ ರ್ಯಾಲಿ ಕಪ್ ಚಾಂಪಿಯನ್ ಲೋಹಿತ್ ಅರಸ್ ಅತಿಥಿಯಾಗಿ ಪಾಲ್ಗೊ ಳ್ಳಲಿದ್ದಾರೆ. ಪ್ರಶಸ್ತಿಗೆ ಭಾಜನವಾದ ಉದ್ಯಮಗಳ ಹೆಸರುಗಳನ್ನು ಅಂದೇ ಪ್ರಕಟಿಸ ಲಾಗುವುದು ಎಂದರು. ಕಾರ್ಯಕ್ರಮ ಸಂಯೋಜಕರಾದ ರಿಮಾ ಡಿ’ಸೋಜ, ಮಮತಾ, ಗಾಯಿತ್ರಿ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.