ದುಶ್ಚಟದಿಂದ ಆರೋಗ್ಯ, ಕುಟುಂಬದ ಗೌರವವೂ ಹಾಳು! ಡಾ. ಗುರುರಾಜ ಹೆಬ್ಬಾರ್ ಅಭಿಮತ
ಹಾಸನ

ದುಶ್ಚಟದಿಂದ ಆರೋಗ್ಯ, ಕುಟುಂಬದ ಗೌರವವೂ ಹಾಳು! ಡಾ. ಗುರುರಾಜ ಹೆಬ್ಬಾರ್ ಅಭಿಮತ

December 15, 2018

ಹಾಸನ: ಮನುಷ್ಯ ದುಶ್ಚಟ ಗಳಿಂದ ದೂರ ಉಳಿದು ಉತ್ತಮ ಬದುಕನ್ನು ಕಟ್ಟಿಕೊಂಡಾಗ ಮಾತ್ರ ಅವರನ್ನು ಸಮಾಜ ಗೌರವಿಸುತ್ತದೆ ಎಂದು ಹಿರಿಯ ವೈದ್ಯ ಹಾಗೂ ಸಮಾಜ ಸೇವಕ ಡಾ. ಗುರು ರಾಜ ಹೆಬ್ಬಾರ್ ಹೇಳಿದರು.

ನಗರದ ಹೊರವಲಯದ ಬೂವನ ಹಳ್ಳಿಯ ಚನ್ನಕೇಶವ ಸಮುದಾಯ ಭವನ ದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿರುವ 1302ನೇ ಮದ್ಯ ವರ್ಜನ ಶಿಬಿರದಲ್ಲಿ ಭಾಗ ವಹಿಸಿ ಅವರು ಮಾತನಾಡಿದರು.
ದುಶ್ಚಟಗಳನ್ನು ರೂಢಿಸಿಕೊಂಡ ಮನುಷ್ಯ ತನ್ನ ಆರೋಗ್ಯವನ್ನು ಹಾಳು ಮಾಡಿಕೊ ಳ್ಳುವುದರ ಜೊತೆಗೆ ತನ್ನ ಕುಟುಂಬದ ಗೌರವವನ್ನು ಹಾಳು ಮಾಡುತ್ತದೆ. ಹಾಗಾಗಿ ಮನುಷ್ಯ ಎಲ್ಲವನ್ನು ಅರಿತು ನಡೆಯುವ ಗುಣ ರೂಢಿಸಿಕೊಂಡರೆ ಒಳಿತು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಚ್.ಬಿ ಮದನಗೌಡ ಮಾತನಾಡಿ, ಯಾವುದೇ ದುಶ್ಚಟವಾದರೂ ಅತಿಯಾದರೇ ಅದು ಆರೋಗ್ಯಕ್ಕೆ ಮಾರಕ ಹಾಗಾಗಿ ದುಶ್ಚಟ ಗಳಿಂದ ದೂರ ಉಳಿದು ಆರೋಗ್ಯಯುತ ಬದುಕು ಕಟ್ಟಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಬಿ.ವಿ ಕರೀಗೌಡ ಮಾತ ನಾಡಿ, ಮದ್ಯವರ್ಜನ ಶಿಬಿರಗಳು ಗ್ರಾಮೀಣ ಭಾಗದಲ್ಲಿ ಉತ್ತಮ ವಾತಾವರಣ ರೂಪಿ ಸಲು ಸಹಕಾರಿಯಾಗಲಿದೆ.ವ್ಯಸನಕ್ಕೆ ತುತ್ತಾಗಿ ಕುಟುಂಬವನ್ನು ಬೀದಿ ಪಾಲು ಮಾಡುವುದ ಲ್ಲದೇ ಇಡೀ ಸಮುದಾಯದಲ್ಲಿ ನಿರ್ಲಕ್ಷ್ಯಕ್ಕೆ ಒಳಪಡುವ ವ್ಯಸನಿಗಳು ಶಿಬಿರದಲ್ಲಿ ಪಾಲ್ಗೊಂಡು ಒಳ್ಳೆಯ ಬದುಕು ರೂಪಿಸಿಕೊಳ್ಳ ಬಹುದಾಗಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಸಾಪ ಗೌರವಾ ಧ್ಯಕ್ಷ ರವಿ ನಾಕಲಗೂಡು ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣವಾಗ ಬೇಕೆಂದರೆ ಅದರ ಬಗೆಗೆ ಅರಿವು ಅಗತ್ಯ. ಆ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಹತ್ವದ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬಡಾವಣೆ ಠಾಣೆ ಆರಕ್ಷಕ ನಿರೀಕ್ಷಕ ಸುರೇಶ್ ಮಾತನಾಡಿ ದರು. ಜನ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಉದಯಕುಮಾರ್,ಕಾರ್ಯದರ್ಶಿ ಕೆ.ಜಿ ಸುರೇಶ್, ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೆರಗೋಡು ಮಹೇಶ್, ತಾಲೂಕು ಪಂಚಾಯಿತಿ ಸದಸ್ಯ ಬಿ.ಇ ಜಯರಾಂ, ಗ್ರಾಪಂ ಮಾಜಿ ಅಧ್ಯಕ್ಷ ಬೋರೇಗೌಡ, ತುಳಸಿರಾಂ, ಶಿಬಿರದ ಕೋಶಾಧಿಕಾರಿ ಬಿ.ಇ ಜಗದೀಶ್, ಯೋಜನಾಧಿಕಾರಿ ಪುರುಷೋತ್ತಮ್ ಇತರರು ಹಾಜರಿದ್ದರು.

Translate »