ತಂಬಾಕು ಬೆಳೆಗಾರರ ಸಾಲಮನ್ನಾಗೆ ಒತ್ತಾಯ
ಹಾಸನ

ತಂಬಾಕು ಬೆಳೆಗಾರರ ಸಾಲಮನ್ನಾಗೆ ಒತ್ತಾಯ

December 15, 2018

ರಾಮನಾಥಪುರ:  ರಾಜ್ಯ ಸರ್ಕಾರ ರೈತರ ಸಾಲಮನ್ನಾ ಕುರಿತು ದಿನಕೊಂದು ಹೇಳಿಕೆ ನೀಡುತ್ತಾ ರೈತಪಿ ವರ್ಗದಲ್ಲಿ ಅತಂಕ ಸೃಷ್ಠಿ ಮಾಡುವ ಹುನ್ನಾರ ನಡೆಯುತ್ತಿದೆ. ರಾಜ್ಯ ಸರ್ಕಾರದ ಮಾತಿನಂತೆ ತಂಬಾಕು ಬೆಳೆಗಾರರು ಸೇರಿ ದಂತೆ ಎಲ್ಲಾ ರೈತರ 2 ಲಕ್ಷ ರೂವರೆಗೆ ಸಾಲ ಮನ್ನಾ ಮಾಡುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗ ರಮೇಶ್ ಒತ್ತಾಯಿಸಿದರು.

ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಬ್ರಹ್ಮಣ್ಯನಗರದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಬೆಳೆಗಾರರಿಗೆ ಉತ್ತಮ ಬೆಲೆ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ತಂಬಾಕು ಹರಾಜು ಅಧೀಕ್ಷಕ ಎಸ್.ಎಸ್. ಪಾಟೀಲ್ ಅವರನ್ನು ಒತ್ತಾಯಿಸಿದ ನಂತರ ಮಾತನಾಡಿದ ಅವರು, ಈಗಿನ ಸಾಲ ಮನ್ನಾ ಕೇವಲ ಶೇ 20 ರಷ್ಟು ರೈತರಿಗೂ ಉಪಯೋಗವಾಗುವುದಿಲ್ಲ. ಕೆಲವೇ ರೈತರ ದಾಖಲೆಗಳನ್ನು ಪರಿಶೀಲನೆ ನಡೆಸಿ, ಉಳಿದ ರೈತರನ್ನು ವಾಪಸ್ಸು ಕಳಿಹಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಉಳಿದ ರೈತರಿಗೆ ಸಾಲ ಮರುಪಾವತಿ ಮಾಡಿ ಎಂದು ನೋಟಿಸ್ ಕಳುಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಎಲ್ಲಾ ರೈತರ ಸಾಲ ಮನ್ನಾ ಮಾಡಬೇಕಿದೆ ಎಂದರು.

ರಾಜ್ಯದಲ್ಲಿಯೇ ಅತೀ ಹೆಚ್ಚು ವರ್ಜಿ ನೀಯಾ ತಂಬಾಕು ಉತ್ಪಾದಿಸುವ ಇಲ್ಲಿಯ ರೈತರು ಕಳೆದ ಮೂರು ವರ್ಷ ಬರಗಾಲ ದಿಂದ ನರಳಿದರು. ಈ ವರ್ಷ ಅತಿವೃಷ್ಠಿಗೆ ತುತ್ತಾಗಿ ತಂಬಾಕು ಇಳುವರಿ ಕುಂಠಿತ ವಾಗಿ ನಷ್ಟ ಅನುಭವಿಸುತ್ತಿದ್ದಾರೆ, ಇವರು ಬೆಳೆದಿರುವ ತಂಬಾಕಿಗೆ ಐಟಿಐ ಕಂಪನಿ ಮತ್ತು ಇತರೆ ಕಂಪನಿಯವರು ನಿಖರ ವಾದ ವೈಜಾನಿಕ ಬೆಲೆ ನೀಡುವ ಮೂಲಕ ರೈತರನ್ನು ನಷ್ಟದಿಂದ ಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಇಲ್ಲಿಯ ಮಾರುಕಟ್ಟೆಯಲ್ಲಿ ನಡೆಯುವ ಅವ್ಯವಹಾರವನ್ನು ತಡೆಗಟ್ಟಲು ಸಿಸಿ ಕ್ಯಾಮಾರ ವ್ಯವಸ್ಥೆ, ಮಾರುಕಟ್ಟೆಯಲ್ಲಿ ಕಾರ್ಮಿಕರ ಕೊರತೆ, ಬೇಲ್‍ಗಳನ್ನು ಸಾಗಿಸಲು ತಾಂತ್ರಿಕ ವ್ಯವಸ್ಥೆ, ಹೈಮ್ಯಾಸ್ ಲೈಟ್ ಇಲ್ಲದೆ ರಾತ್ರಿ ಬೇಲ್‍ಗಳನ್ನು ತರುವ ರೈತರಿಗೆ ವಿದ್ಯುತ್ ವ್ಯವಸ್ಥೆಗೆ ಕ್ರಮ, ಸೂಕ್ತ ಭದ್ರತೆ ವ್ಯವಸ್ಥೆ, ರಸ್ತೆ, ಶೌಚಗೃಹ, ಹೆಚ್ಚಿನ ರೀತಿ ಕುಡಿ ಯುವ ನೀರು, ವಿಶ್ರಾಂತಿ ಕೊಠಡಿಗಳು, ಕ್ಯಾಂಟಿನ್ ಸೌಲಭ್ಯಗಳ ವ್ಯವಸ್ಥೆ, ಮಾರು ಕಟ್ಟೆಯ ವ್ಯಾಪ್ತಿಯಲ್ಲಿ ಸ್ವಚ್ಚತೆ, ಮಾರು ಕಟ್ಟೆಗಳಲ್ಲಿ ಅಶಿಸ್ತು ಹೋಗಲಾಡಿಸಲು ತಂಬಾಕು ಮಂಡಳಿಯವರು ಶ್ರೀಘವೇ ವ್ಯವಸ್ಥೆ ಮಾಡುವಂತೆ ತಂಬಾಕು ಮಾರು ಕಟ್ಟೆ ಅಧಿಕಾರಿಗಳಿಗೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಂಖಂಡ ಜಗದೀಶ್, ಬಾಲರಾಜ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಚಂದೇಗೌಡ, ಬಿಜೆಪಿ ಮುಖಂಡರಾದ ಹರಳಹಳ್ಳಿ ತಮ್ಮೇಗೌಡ, ಲೋಕೇಶ್, ಕೃಷ್ಣೇಗೌಡ, ಮಹದೇವ್, ರವಿ ಮುಂತಾದವರು ಉಪಸ್ಥಿತರಿದ್ದರು.

Translate »