ಜಯ ಕರ್ನಾಟಕ ಸಂಘಟನೆಯಿಂದ ಪ್ರತಿಭಟನಾ ರ್ಯಾಲಿ
ಹಾಸನ

ಜಯ ಕರ್ನಾಟಕ ಸಂಘಟನೆಯಿಂದ ಪ್ರತಿಭಟನಾ ರ್ಯಾಲಿ

February 22, 2019

ಹಾಸನ: ಜಿಲ್ಲಾ ಕೈಗಾರಿಕಾ ವಲಯದಲ್ಲಿ ಸ್ಥಾಪನೆಯಾ ಗಿರುವ ಖಾಸಗಿ, ಕೇಂದ್ರ ಮತ್ತು ರಾಜ್ಯ ಅನುದಾನಿತ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ನಗರದಲ್ಲಿ ಗುರುವಾರ ಜಯ ಕರ್ನಾಟಕ ಸಂಘಟನೆಯಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ತು ಭವನದಿಂದ ಹೊರಟ ಪ್ರತಿಭಟನಾ ಕಾರರ ರ್ಯಾಲಿಯು ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವ ರಣಕ್ಕೆ ತಲುಪಿತು. ಭೂಮಿ ನಮ್ಮದು, ನೀರು ನಮ್ಮದು, ಮೂಲಭೂತ ಸೌಕರ್ಯ ನಮ್ಮದು. ಕೆಲಸ ಮಾತ್ರ ಏಕೆ ನಮಗಿಲ್ಲ, ದುಡಿಯುವ ಕೈಗಳು ನಮ್ಮ ಜಿಲ್ಲೆಯಲ್ಲಿದೆ. ಅವರವರ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಈ ಕೂಡಲೇ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ಖಾಸಗಿ, ಕೇಂದ್ರ ಮತ್ತು ರಾಜ್ಯ ಅನು ದಾನಿತ ಕಂಪನಿಗಳು ಹಾಸನ ನಗರದಲ್ಲಿ ಕಾರ್ಯಾರಂಭ ಮಾಡಿದೆ. ಆದರೆ ಸ್ಥಳೀ ಯರಿಗೆ ಉದ್ಯೋಗ ನೀಡುತ್ತಿಲ್ಲ. ಇದನ್ನು ಜಯ ಕರ್ನಾಟಕ ಖಂಡಿಸಿ ಬೃಹತ್ ರ್ಯಾಲಿಯ ಮೂಲಕ ಸ್ಥಳೀಯ ಯುವಕ-ಯುವತಿಯರಿಗೆ ಕೂಡಲೇ ಉದ್ಯೋಗ ನೀಡಬೇಕು. ಜಿಲ್ಲೆಯಲ್ಲಿ ಬತ್ತಿ ಹೋಗಿ ರುವ ಕೆರೆ ಕಟ್ಟೆಗಳಿಗೆ ನೀರು ತುಂಬಿಸಿ ಪ್ರಾಣಿ- ಪಕ್ಷಿಗಳಿಗೆ ಮತ್ತು ಜನತೆಗೆ ಕುಡಿಯಲು ನೀರು ಒದಗಿಸಬೇಕು. ಬಜೆಟ್‍ನಲ್ಲಿ ಮೀಸ ಲಿರುವ ಕೆಲವು ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಿಗೆ ನೀರು ತುಂಬಿಸ ಬೇಕು ಎಂದು ಆಗ್ರಹಿಸಿದರು.

ಹೊರ ಜಿಲ್ಲೆಯಿಂದ ಉದ್ಯೋಗಿಗಳನ್ನು ಕರೆತಂದು ಕೆಲಸ ಕೊಟ್ಟರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವು ದರ ಮೂಲಕ ನ್ಯಾಯ ಪಡೆಯಬೇಕಾ ಗುತ್ತದೆ ಎಂದ ಅವರು, ಜಿಲ್ಲಾಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತಂದು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಚಂದ್ರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರಯ್ಯ, ತಾಲೂಕು ಉಪಾಧ್ಯಕ್ಷ ಆರ್.ಮುನಿಸ್ವಾಮಿ, ರಾಜ್ಯ ಸಂಚಾಲಕ ಕುಮಾರ್, ಪಿ.ಕೃಷ್ಣಪ್ಪ, ಕಾರ್ಯಕಾರಿ ಸಮಿತಿ ಕಿರಣ್‍ಗೌಡ, ಆನಂದ್ ರೆಡ್ಡಿ, ರಾಜ್ಯ ಸಮಿತಿ ಸದಸ್ಯ ಮಂಜು, ನೂತನ ಜಿಲ್ಲಾಧ್ಯಕ್ಷ ಮಣಿಕಂಠ, ಗೌರವಾ ಧ್ಯಕ್ಷ ರಘು, ಸಂಘಟನೆ ಪ್ರಧಾನ ಕಾರ್ಯ ದರ್ಶಿ ಜಗದೀಶ್ ಚೌಡಹಳ್ಳಿ, ಕಾರ್ಯಾ ಧ್ಯಕ್ಷ ಸಂಗಮ್, ತಾಲೂಕು ಅಧ್ಯಕ್ಷ ಮೋಹನ್, ಉಪಾಧ್ಯಕ್ಷ ಸೋಮೇಶ್, ಚೇತನ್, ಪ್ರದೀಪ್ ಇತರರು ಪಾಲ್ಗೊಂಡಿದ್ದರು.

Translate »