ಏ. 8ರಿಂದ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವ ಅಂಗವಾಗಿ ಪೂರ್ವಭಾವಿ ಸಭೆ
ಹಾಸನ

ಏ. 8ರಿಂದ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವ ಅಂಗವಾಗಿ ಪೂರ್ವಭಾವಿ ಸಭೆ

February 22, 2019

ಸ್ವಚ್ಛತೆ, ಕುಡಿಯುವ ನೀರು, ಸಾರಿಗೆ ವ್ಯವಸ್ಥೆಗೆ ಸೂಚನೆ

ಬೇಲೂರು:  ಚನ್ನಕೇಶವಸ್ವಾಮಿ ರಥೋತ್ಸವದ ಅಂಗವಾಗಿ ದೇಗುಲದ ಕಚೇರಿ ಯಲ್ಲಿ ಪೂರ್ವಭಾವಿ ಸಭೆ ನಡೆಯಿತು.ಏ. 8ರಿಂದ 21ರವರೆಗೆ ವಿವಿಧ ಉತ್ಸವ ಹಾಗೂ ರಥೋತ್ಸವ ಜರುಗಲಿದೆ. ಈ ಸಂದರ್ಭ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ಹಾಗೂ ಪಟ್ಟಣದ ಅಲಂಕಾರದ ಬಗ್ಗೆ ಹೆಚ್ಚು ಗಮನ ಹರಿಸಲು ಸಭೆಯಲ್ಲಿ ತೀರ್ಮಾನಿಸ ಲಾಯಿತು. ಉತ್ಸವ ಸಾಗುವ 8 ಬೀದಿಗಳಲ್ಲಿ ಪ್ರತಿನಿತ್ಯ ಸ್ವಚ್ಛತೆ ಹಾಗೂ ರಸ್ತೆಗೆ ನೀರು ಹಾಕು ವುದು ವಿಷ್ಣು ಸಮುದ್ರ ಕೆರೆಯ ಬಳಿ ಕುಡಿ ಯುವ ನೀರು ಹಾಗೂ ಸ್ವಚ್ಛತೆಗೆ ಪುರಸಭೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.

ಉತ್ಸವ ಹಾಗೂ ರಥೋತ್ಸವದ ವೇಳೆ ವಿದ್ಯುತ್ ಕಡಿತ ಮಾಡದಂತೆ ವಿದ್ಯುತ್ ಅಧಿಕಾರಿಗಳಿಗೆ ತಿಳಿಸಲಾಯಿತು. ಮುಖ್ಯ ರಸ್ತೆ ಹಾಗೂ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ಅಲಂಕಾರ ಮಾಡಲು ಹಾಗೂ ವಿವಿಧ ಭಾಗದಿಂದ ಬೇಲೂರಿಗೆ ಬರಲು ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಕೆಎಸ್ ಆರ್‍ಟಿಸಿ ಅಧಿಕಾರಿಗಳಿಗೆ ಮನವಿ ಮಾಡ ಲಾಯಿತು. ಜಾತ್ರೆಯ ಅಂಗಳದಲ್ಲಿ ತುರ್ತು ಚಿಕಿತ್ಸಾ ಕೇಂದ್ರ ತೆರೆಯಲು ಹಾಗೂ ಭಕ್ತರ ಆರೋಗ್ಯ ತಪಾಸಣೆಗೆ ವೈದ್ಯಾಧಿಕಾರಿ ಗಳಿಗೆ ತಿಳಿಸಲಾಯಿತು.

ಭಕ್ತರು ಸ್ನಾನ ಮಾಡಲು ಹಾಗೂ ತೆಪ್ಪೋತ್ಸವಕ್ಕೆ ಅನುಕೂಲ ಆಗುವಂತೆ ವಿಷ್ಣು ಸಮುದ್ರ ಕೆರೆ ಕಲ್ಯಾಣಿಯನ್ನು ಸ್ವಚ್ಛ ಗೊಳಿಸಲು ಸೂಚಿಸಲಾಯಿತು. ಕೇಂದ್ರ ಪುರಾತತ್ವ ಇಲಾಖೆಯಿಂದ ಹೆಚ್ಚಿನ ಸಿಬ್ಬಂದಿ ನೇಮಕಕ್ಕೆ ಪತ್ರ ಬರೆಯಲು ಹಾಗೂ ದೇಗುಲದ ಬಳಿ ಹಾಗೂ ಕೆರೆಯ ಬಳಿ ವಾಹನ ನಿಲುಗಡೆಗೆ ಸೂಕ್ತ ಸ್ಥಳದ ವ್ಯವಸ್ಥೆ, ಪ್ಲಾಸ್ಟಿಕ್ ಬಳಕೆ ಮಾಡದಂತೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.

ಸಿಸಿ ಕ್ಯಾಮರಾ, ಕಳ್ಳತನ ಇನ್ನಿತರ ಅಹಿತ ಕರ ಘಟನೆ ನಡೆಯದಂತೆ ಪೊಲೀಸರ ನಿಯೋಜನೆ ಪ್ರಮುಖವಾಗಿ ಪ್ರಸಾದ ವಿತ ರಣೆ ವೇಳೆ ಹೆಚ್ಚಿನ ಮುಂಜಾಗ್ರತಾ ಕ್ರಮದ ಕುರಿತು ಚರ್ಚಿಸಲಾಯಿತು.

ಶಾಸಕರ ಅನುಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೈ.ಟಿ.ದಾಮೋದರ್, ಎಲ್ಲಾ ಸದ ಸ್ಯರು, ಕಾರ್ಯನಿರ್ವಹಣಾಧಿಕಾರಿ ವಿದ್ಯಾ ಲತಾ, ಆಗಮಿಕ ಅರ್ಚಕರಾದ ಕೃಷ್ಣ ಸ್ವಾಮಿ ಭಟ್ಟರ್, ಶ್ರೀನಿವಾಸಭಟ್ಟರ್, ಪಿಎಸ್‍ಐ ಜಗದೀಶ್, ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಅಡ್ಡೆಗಾ ರರು, ನಾಡಪಟೇಲರು ವಿವಿಧ ಇಲಾ ಖೆಯ ಅಧಿಕಾರಿ ನೌಕರರು ಹಾಜರಿದ್ದರು.

Translate »