ಬಾಕಿ ಕಡತಗಳ ತುರ್ತು ವಿಲೇವಾರಿಗೆ ಡಿಸಿ ಸೂಚನೆ
ಹಾಸನ

ಬಾಕಿ ಕಡತಗಳ ತುರ್ತು ವಿಲೇವಾರಿಗೆ ಡಿಸಿ ಸೂಚನೆ

February 22, 2019

ಹಾಸನ: ಇಲಾಖೆಗಳಲ್ಲಿ ಬಾಕಿ ಇರುವ ಕಡತಗಳನ್ನು ತುರ್ತಾಗಿ ವಿಲೇವಾರಿ ಮಾಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸ ಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಸಾಮಾಜಿಕ ಭದ್ರತಾ ಯೋಜನೆಗಳಾದ ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆಗಳ ಬಾಕಿ ಇರುವ ಅರ್ಜಿ ಗಳನ್ನು ತ್ವರಿತವಾಗಿ ವಿಲೇವಾರಿ ಮಾಡ ಬೇಕು ಎಂದು ಸೂಚನೆ ನೀಡಿದರು.

ಕುಡಿಯುವ ನೀರಿನ ಸಮಸ್ಯೆ ಸಂಬಂಧಿಸಿ ದಂತೆ ಅಗತ್ಯವಿರುವ ಕೊಳವೆ ಬಾವಿ ಗಳನ್ನು ಕೊರೆಸುವಂತೆ ಹಾಗೂ ತಾಲೂಕಿ ನಲ್ಲಿರುವ ಜನರ ಮೂಲ ಸೌಕರ್ಯಗಳ ಸಮಸ್ಯೆಗಳನ್ನು ನಿವಾರಣೆ ಮಾಡಬೇಕು ಎಂದು ತಿಳಿಸಿದರು.

86 ಗ್ರಾಮಗಳಲ್ಲಿ ಸ್ಮಶಾನಭೂಮಿಗಾಗಿ ಜಾಗವನ್ನು ಕಾಯ್ದಿರಿಸುವ ಅಗತ್ಯವಿದ್ದು, ಕಂದಾಯ ಪರಿವೀಕ್ಷಕರು ಆದ್ಯತೆ ಮೇರೆಗೆ ಈ ಕ್ರಮ ಕೈಗೊಳ್ಳಬೇಕು. ದುರಸ್ತಿ ಪ್ರಕರಣ ಗಳನ್ನು ಆದಷ್ಟು ಬೇಗ ಮುಕ್ತಾಯಗೊಳಿಸಿ ರೈತರಿಗೆ ಸಹಕರಿಸಬೇಕು ಎಂದು ನಿರ್ದೇಶನ ನೀಡಿದರು.

ಆಧಾರ್ ನೋಂದಣಿ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ರೈತರ ಖಾತೆಗಳಿಗೆ ಆಧಾರ್ ಜೋಡಣೆಗೆ ಕ್ರಮ ವಹಿಸಬೇಕು. ಹಾಸನ ತಾಲೂಕಿನಲ್ಲಿ 6,061 ಎಕರೆ ಸರ್ಕಾರಿ ಭೂ ಒತ್ತುವರಿಯಾಗಿದ್ದು, ಅದನ್ನು ತೆರವು ಗೊಳಿಸಲು ಕ್ರಮವಹಿಸಬೇಕು. ಅತಿವೃಷ್ಟಿ ಹಾಗೂ ಅನಾವೃಷ್ಟಿ ಪರಿಹಾರಗಳನ್ನು ಆದಷ್ಟು ಬೇಗ ರೈತರಿಗೆ ತಲುಪಿಸಬೇಕು ಎಂದು ಜಿಲ್ಲಾ ಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

94ಸಿ, 94ಸಿಸಿ ನಮೂನೆಗಳಲ್ಲಿ ಮನೆಗಳ ಅಕ್ರಮ ಸಕ್ರಮಕ್ಕಾಗಿ ಸಲ್ಲಿಸಿರುವ ಅರ್ಜಿ ಗಳನ್ನು ಸಂಬಂಧಪಟ್ಟ ತಹಶೀಲ್ದಾರರು ಆದಷ್ಟು ಬೇಗನೆ ಇತ್ಯರ್ಥ ಪಡಿಸಬೇಕು. ತಾಲೂಕಿನಲ್ಲಿ ನಾಡಕಚೇರಿಗಳು ಸುಧಾ ರಣೆಯಾಗಬೇಕು. ಜನರಿಗೆ ಇನ್ನಷ್ಟು ಉತ್ತಮ ಸೇವೆಗಳನ್ನು ಒದಗಿಸಬೇಕು ಎಂದು ಸೂಚನೆ ನೀಡಿದರು.

ಕೇಂದ್ರ ಸರ್ಕಾರದ ಕೃಷಿ ಯೋಜನೆ ನೆರವು ಒದಗಿಸಲು ರೈತರ ಸ್ವಯಂ ಘೋಷಣಾ ವಿವರಗಳನ್ನು ಸಂಗ್ರಹಿಸಿ ಮುಂಬರುವ ಮುಂಗಾರು ಹಂಗಾಮಿನ ಕೃಷಿ ಹಾಗೂ ತೋಟಗಾರಿಕಾ ಚಟು ವಟಿಕೆಗಳಿಗೆ ಯಾವುದೇ ತೊಡಕು ಬಾರದಂತೆ ಮುಂಜಾಗ್ರತೆ ವಹಿಸಿ ಎಂದು ನಿರ್ದೇಶನ ನೀಡಿದರು.

ಮುಂದಿನ ಬೇಸಿಗೆ ಕಾಲದಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ವಿಸ್ತರಿಸಬೇಕಾಗುತ್ತದೆ. ಆ ಸಂದರ್ಭದಲ್ಲಿ ಚುನಾವಣಾ ಚಟುವಟಿಕೆಗಳು ಇರುತ್ತವೆ. ಹಾಗಾಗಿ ವಿತರಣೆಗಳಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಯೋಜನೆ ರೂಪಿಸಬೇಕು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ತಹಶೀ ಲ್ದಾರ್ ಶ್ರೀನಿವಾಸಯ್ಯ, ತಾಲೂಕು ಪಂಚಾ ಯಿತಿ ಕಾರ್ಯನಿರ್ವಹಣಾ ಧಿಕಾರಿ ದೇವೆರಾಜೇಗೌಡ ಉಪಸ್ಥಿತರಿದ್ದರು.

ಎಲ್ಲಾ ಇಲಾಖೆಗಳು ಜನಪರ ವಾಗಿ ಕಾರ್ಯನಿರ್ವಹಿಸಬೇಕು. ಸಕಾಲ ದಲ್ಲಿ ಸೇವೆ ಸೌಲಭ್ಯಗಳನ್ನು ತಲುಪಿಸುವ ಮೂಲಕ ಅನಗತ್ಯ ಅಲೆದಾಟವನ್ನು ತಪ್ಪಿಸಬೇಕು.
-ರೋಹಿಣಿ ಸಿಂಧೂರಿ, ಜಿಲ್ಲಾಧಿಕಾರಿ

Translate »