ಸಮಾಜಕ್ಕೆ ಶಿವಕುಮಾರ ಸ್ವಾಮೀಜಿ ಕೊಡುಗೆ ಅಪಾರ
ಹಾಸನ

ಸಮಾಜಕ್ಕೆ ಶಿವಕುಮಾರ ಸ್ವಾಮೀಜಿ ಕೊಡುಗೆ ಅಪಾರ

February 22, 2019

ಅರಸೀಕೆರೆ: ನಡೆದಾಡುವ ದೇವರು ಡಾ.ಶ್ರೀ.ಶಿವಕುಮಾರ ಸ್ವಾಮೀಜಿ ಯಾವುದೇ ಜಾತಿ, ಮತ ಮತ್ತು ಧರ್ಮ ಗಳಿಗೆ ಸೀಮಿತವಾಗಿರದೇ ಎಲ್ಲರಿಗೂ ಶಿಕ್ಷಣ, ಅನ್ನದಾಸೋಹ ಸೇರಿದಂತೆ ಜೀವನ ರೂಪಿಸಿ ಕೊಳ್ಳಲು ಮಾರ್ಗದರ್ಶಕರಾಗಿದ್ದರು. ಅವರು ಸಮಾಜಕ್ಕೆ ನೀಡಿದ ಕೊಡುಗೆಯಿಂದ ಇಂದಿಗೂ ಎಲ್ಲರ ಮನಸ್ಸಿನಲ್ಲೂ ಶಾಶ್ವತವಾಗಿ ಉಳಿದಿ ದ್ದಾರೆ ಎಂದು ಸುಕ್ಷೇತ್ರ ಹಾರನಹಳ್ಳಿ ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.

ನಗರದ ಕೋಡಿಮಠ ಕಾಲೇಜು ಆವರ ಣದಲ್ಲಿ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಯುವ ಬಳಗದಿಂದ ಆಯೋಜಿಸಿದ್ದ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶ್ರೀ.ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿದ್ದಗಂಗಾ ಮಠದ ಡಾ.ಶ್ರೀ.ಶಿವಕುಮಾರ ಸ್ವಾಮೀಜಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅವೀಸ್ಮರಣೀಯವಾಗಿದೆ. ಶಿಕ್ಷಣ, ಸಾಮಾಜಿಕ ಕಳಕಳಿ ಮತ್ತು ಅನ್ನ ದಾಸೋಹ ದಂತಹ ಮಹತ್ಕಾರ್ಯಗಳಿಗೆ ಅವರು ಬುನಾದಿ ಹಾಕಿಕೊಟ್ಟಿದ್ದಾರೆ. ಇದು ಹಲವು ಮಠ ಮಾನ್ಯಗಳಿಗೆ ಮಾರ್ಗ ದರ್ಶಕವಾಗಿದೆ. ಧಾರ್ಮಿಕ ಕ್ಷೇತ್ರ ಸೇರಿ ದಂತೆ ಶಿಕ್ಷಣ, ದಾಸೋಹ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಶಿವಕುಮಾರ ಶ್ರೀಗಳು ನೀಡಿದ ಕೊಡುಗೆ ಅಪಾರವಾಗಿದೆ ಎಂದರು.

ತುಮಕೂರು ಜಿಲ್ಲಾ ಶರಣರ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಜಿ.ಸಿದ್ದರಾಮಯ್ಯ ಮಾತನಾಡಿ, ಉತ್ತರ ಭಾರತದಲ್ಲಿ ಗಂಗಾ ನದಿ ಹರಿದರೆ ದಕ್ಷಿಣ ಭಾರತದಲ್ಲಿ ಧಾರ್ಮಿಕ ಶೈಕ್ಷಣಿಕ ಹಾಗೂ ದಾಸೋಹ ಎಂಬ ಮೂರು ನದಿಗಳ ಸಂಗಮಗೊಂಡು ಸಿದ್ಧ ಗಂಗಾ ಕ್ಷೇತ್ರದಲ್ಲಿ ಹರಿಯುತ್ತ್ತಿದೆ ಎಂದು ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜ ಪೇಯಿ ಅವರು ಶ್ರೀಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದರು. ಇದು ಶ್ರೀ ಮಠಕ್ಕೆ ಸಂದ ಗೌರವವಾಗಿದೆ ಎಂದು ಹೇಳಿದರು.

ಜಾತಿ, ಮತ ಎಂಬ ತಾರತಮ್ಯ ಮಾಡದೇ ಮಠಕ್ಕೆ ಬಂದ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪೋಷಿಸಿ ಅವರಿಗೆ ಅನ್ನ ದಾಸೋಹದ ಜೊತೆಗೆ ಜ್ಞಾನ ದಾಸೋಹ ವನ್ನು ನೀಡಿ ಲಕ್ಷಾಂತರ ಮಂದಿಗೆ ಬದುಕು ನೀಡಿದ ಮಹಾನ್ ಚೇತನ ಶಿವಕುಮಾರ ಸ್ವಾಮೀಜಿ. ಅವರು ನಡೆದಾಡಿದ ಭೂಮಿ ಯಲ್ಲಿ ನಾವೆಲ್ಲ ಜನಿಸಿರುವುದು ನಮ್ಮ ಪುಣ್ಯ ಎಂದರು.
ಈ ವೇಳೆ ಗಂಡಸಿ ಶ್ರೀಶಂಭುಲಿಂಗೇಶ್ವರ ಮಠದ ರೇವಣ್ಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಯಳನಾಡು ಸಂಸ್ಥಾನ ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ಕೇದಿಗೆ ಕೋಳಗುಂದ ಮಠದ ಜಯಚಂದ್ರಶೇಖರ ಸ್ವಾಮೀಜಿ, ಬೂದಿ ಹಾಳ್ ಮಠದ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಜಿ.ಎಸ್.ಪರಮೇಶ್ವರಪ್ಪ, ಎ.ಎಸ್.ಬಸವ ರಾಜು, ಮುಖಂಡರಾದ ಕೆ.ವಿ.ನಿರ್ವಾಣಸ್ವಾಮಿ, ಅಣ್ಣನಾಯ್ಕನಹಳ್ಳಿ ವಿಜಯ್‍ಕುಮಾರ್, ಸಿದ್ದಪ್ಪ, ಕಾರ್ಯಕ್ರಮ ಆಯೋಜಕರಾದ ಕೆವಿಎನ್ ಶಿವು, ಪ್ರವೀಣ್, ಹೆಚ್.ಟಿ.ಮಹ ದೇವ್, ಕೋಡಿಮಠ ಕಾಲೇಜಿನ ಪ್ರಾಂಶು ಪಾಲರು, ಉಪನ್ಯಾಸಕರು ಹಾಜರಿದ್ದರು.

Translate »