ರಾಮನಾಥಪುರ: ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ರಾಮನಾಥಪುರ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ರಥೋತ್ಸವದ ನಂತರ ಗುರುವಾರ ರಾತ್ರಿ ದೇವಸ್ಥಾನದಲ್ಲಿ ನಡೆದ ವಿವಿಧ ವ್ಯಾದ್ಯಗೋಷ್ಠಿಗಳಿಂದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇಗುಲಕ್ಕೆ ದೇಗುಲವೇ ನಾದಮಯವಾಗಿ ನೆರೆದಿದ್ದ ನೂರಾರು ಭಕ್ತರ ಮನಮುಟ್ಟಿ ಹೃದಯ ತಟ್ಟಿದ ಶಹನಾಯಿ, ಸ್ಯಾಕ್ಸೋಫೋನ್, ಚಂಡೆ, ಕ್ಲಾರಿನಿಯೋಟ್ ಭಜನೆ ಮುಂತಾದ ವಾದ್ಯ ಪ್ರಕಾರಗಳು ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿಗೆ ನಾದದ ಅಭಿಷೇಕವನ್ನು ಮಾಡಿದಂತೆ ಎನ್ನುವಂತೆ ಭಾಸವಾಯಿತು.
ಗುರುವಾರ ರಾತ್ರಿ ದೇವಸ್ಥಾನದ ಪ್ರಾಂಗಣ ದಲ್ಲಿ ಪ್ರತಿಸ್ಥಾಪಿಸಿ ಪೂಜಾ ಕೈಕರ್ಯದ ನಂತರ ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ಉತ್ಸವವನ್ನು ಹಮ್ಮಿಕೊಂಡ್ಡ ವೇಳೆ ದೇವರ ಮೂರ್ತಿ ಯನ್ನು ವಿಶೇಷವಾಗಿ ಅಲಂಕರಿಸಿದ ಮಂಟಪದಲ್ಲಿ ಪ್ರತಿಷ್ಠಾಪಿಸಿ ಉತ್ಸವ ನಡೆಯಿತು. ಇದೇ ವೇಳೆಯಲ್ಲಿ ಅನೇಕ ಸುತ್ತು ದೇವಾಲಯವನ್ನು ಪ್ರದಕ್ಷಿಣೆಹಾಕುವ ಉತ್ಸವದ ವೇಳೆ ಪ್ರತಿಯೊಂದು ಸುತ್ತಿಗೊಂದ ರಂತೆ ಪ್ರತ್ಯೇಕ ವಾದ್ಯಪ್ರಕಾರದ ಮೂಲಕ ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ಪೂಜೆ ನೆರೆ ವೇರಿಸುವುದು ಇಲ್ಲಿನ ವಿಶೇಷತೆಯಾಗಿದ್ದು ಸತತ ಮೂರು ಗಂಟೆ ಜರುಗುವ ಈ ಸಮಯ ವಿವಿಧ ರೀತಿಯ ವಾದ್ಯಗಳ ನೀನಾದವು ಸೇರಿದ್ದ ಭಕ್ತರನ್ನು ಪುಳಕಗೊಳಿಸಿ ಬೇರೆ ಯದೇ ಲೋಕಕ್ಕೆ ಕೊಂಡೊಯಿತು.
ರಾಮನಾಥಪುರವು, ಕೃತಯುಗದಲ್ಲಿ ಸಂವರ್ತಕಾಪುರಿ, ತ್ರೇತಾಯುಗದಲ್ಲಿ ವಾಸವಾಪುರಿ, ದ್ವಾಪರಯುಗದಲ್ಲಿ ವಹ್ನಿಕಾ ಪುರಿ ಎಂದು ಕರೆಯಲ್ಪಟ್ಟು ಕಲಿಯುಗ ದಲ್ಲಿ ದಕ್ಷಿಣಕಾಶಿ ಎಂದು ಹೆಸರು ಪಡೆದಿರುವ ದೇಗುಲಗಳಬೀಡು ಎಂದೇ ಪ್ರಖ್ಯಾತಿ ಪಡೆದಿರುವ ಪುರಾಣ ಪ್ರಸಿದ್ಧ ರಾಮನಾಥಪುರದ ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯದಲ್ಲಿ ಪ್ರತಿ ನಿತ್ಯ ನಾದಲೋಕವೇ ಧರೆಗಿಳಿದಂತೆ ಶ್ರೀ ಸುಬ್ರಹ್ಮಣ್ಯಸ್ವಾಮಿಯನ್ನು ಸಂಗೀತದಲ್ಲಿ ಸಂಪನ್ನಗೊಳಿಸಲಾಯಿತು.
ಮೊದಲ ಸುತ್ತಿನಲ್ಲಿ ಪಂಚವಾದ್ಯ, ಎರಡನೇ ಸುತ್ತಿನಲ್ಲಿ ಮಂಗಳವಾದ್ಯ ಸದ್ದಿನೊಂದಿಗೆ, ಮೂರನೇ ಸುತ್ತಿನಲ್ಲಿ ಶಹನಾಯಿ, ನಾಲ್ಕನೇ ಸುತ್ತಿನಲ್ಲಿ ಸ್ಯಾಕ್ಸೋಫೋನ್ ಮತ್ತು ಕ್ಲಾರಿನಿಯೋಟ್, ಮಗದೊಂದು ಸುತ್ತಿ ನಲ್ಲಿ ಚಂಡೆವಾದ್ಯದ ನಿನಾದದೊಂದಿಗೆ ಶ್ರೀ ಸ್ವಾಮಿಯವರಿಗೆ ಭಕ್ತಿಗೀತೆಗಳ ಅರ್ಚನೆ ಮಾಡಿದ್ದು ಎಲ್ಲರ ಮನಗೆದ್ದಿತು.
ಪರಿಣಿತರು ವಿವಿಧ ವಾದ್ಯಗಳನ್ನು ನುಡಿಸುವಾಗ ರಾಗ, ತಾಳ ಮೇಳೈಸಿತು, ನೆರೆದಿದ್ದ ಭಕ್ತವೃಂದ ತಲೆದೂಗಿತು. ಭಕ್ತಿ ಯನ್ನು ಹೆಚ್ಚಿಸುವ ಅಪರೂಪದ ನಾನು ಎಂಬ ಭಾವ ನಾಶವಾಯಿತು, ಗೋವಿಂದ ಗೋವಿಂದ, ಕಂಡೆ ಹರಿಯ ಕಂಡೆ, ಓ ಪಾಂಡುರಂಗ ಪ್ರಭು ವಿಠಲ ಮುಂತಾದ ಗೀತೆಗಳು ನೆರೆದಿದ್ದ ಭಕ್ತರ ಹೃದಯಗೆದ್ದಿತು. ಉತ್ಸವ ವೀಕ್ಷಿಸಲು ಬಂದಿದ್ದ ಭಕ್ತರು ಸತತವಾಗಿ 3 ಗಂಟೆ ವಿವಿಧ ಸಂಗೀತ ವಾದ್ಯಗಳ ಮಾಧುರ್ಯತೆಗೆ ಮರುಳಾಗಿ ತಲೆದೂಗಿದರು.
ಸರ್ವರೂ ವಾದ್ಯಗಳಿಂದ ಮೂಡಿ ಬರು ತ್ತಿದ್ದ ಗೀತೆಗಳಿಗೆ ತಾಳಹಾಕುತ್ತಾ ಉತ್ಸವ ದೊಂದಿಗೆ ಸಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು, ಉತ್ಸವವು ಮುಗಿಯುವ ತನಕ ಸೇರಿದ್ದ ಯಾರೋಬ್ಬರೂ ಕದಲದೆ ಮಗ್ನರಾಗಿದ್ದರು. ಸುಬ್ರಮಣ್ಯ ದೇಗುಲದ ಅವರಣವೆ ನಾದಭರಿತವಾಗಿ ಸೇವರನ್ನು ಸಂಪ್ರೀತಗೊಳಿಸಿತು. ವಿವಿಧ ಬಗೆಯ ಪುಷ್ಪಗಳಿಂದ ಅಲಂಕೃತಗೊಂಡಿದ್ದ ದೇಗುಲಕ್ಕೆ ವಿವಿಧ ವಾದ್ಯ ಪ್ರಕಾರಗಳ ನಾದಪೂಜೆ ಯು ಮತ್ತಷ್ಟು ಮೆರಗು ಬಂದಿತು.
ಅಂತಿಮ ಪ್ರದಕ್ಷಿಣೆಯಲ್ಲಿ ಉತ್ಸವವನ್ನು ಕೂಡಿಕೊಂಡ ಚಂಡೆವಾದ್ಯವು ಭಕ್ತರ ಎದೆಯಲ್ಲಿ ಸಂಚಲನ ಮೂಡಿಸಿತು. ವಾದನದೊಂದಿಗೆ ಅವರು ಹಾಕಿದ ಲಯ ಭದ್ಧವಾದ ಕುಣಿತವು ಮತ್ತಷ್ಟು ಮುದ ನೀಡಿತು. ನಾದಪ್ರಿಯ ಸುಬ್ರಹ್ಮಣ್ಯನಿಗೆ ತಂಡೋಪತಂಡವಾಗಿ ನುಡಿಸಿದ ವಾದ್ಯ ಪ್ರಕಾರಗಳು ನಾದಾಭಿ ಷೇಕವನ್ನೇ ಮಾಡಿ ದವು. ನರೆದಿದ್ದ ಭಕ್ತರ ಮನವನ್ನು ಗೆದ್ದಿತು.
ಇಲ್ಲಿಯ ಸುಬ್ರಹ್ಮಣ್ಯಸ್ವಾಮಿ ಷಷ್ಠಿ ಮಹಾ ರಥೋತ್ಸವದಿಂದ ಅರಂಭವಾಗುವ ಜಾತ್ರೆಯು ಜನವರಿ 12ರವರೆಗೆ ಒಂದು ತಿಂಗಳ ಕಾಲ ನಡೆಯಲಿದೆ. ಜನವರಿ 12 ರಂದು ಕಿರುಷಷ್ಠಿ ರಥೋತ್ಸವ ಮತ್ತು ಜ.13 ರಂದು ಹೊಸಳಿಗಮ್ಮನವರಿಗೆ ಈಡು ಗಾಯಿ ಸೇವೆಯೊಂದಿಗೆ ಮುಕ್ತಾಯ ಗೊಳ್ಳಲಿದೆ ಎಂದು ಪಾರುಪತ್ತೇಗಾರ ರಮೇಶ್‍ಭಟ್ ತಿಳಿಸಿದರು.