ಗುತ್ತಿಗೆ ಪೌರ ಕಾರ್ಮಿಕರ ಪ್ರತಿಭಟನೆ
ಹಾಸನ

ಗುತ್ತಿಗೆ ಪೌರ ಕಾರ್ಮಿಕರ ಪ್ರತಿಭಟನೆ

December 15, 2018

ಅರಸೀಕೆರೆ: ಗುತ್ತಿಗೆದಾರರು ವೇತನ ನೀಡಿಲ್ಲವೆಂದು ಆರೋಪಿಸಿ ನಗರದ ಗುತ್ತಿಗೆ ಪೌರಕಾರ್ಮಿಕರು ಕಳೆದ ಎರಡು ದಿನಗಳಿಂದ ದಿಢೀರ್ ಮುಷ್ಕರ ಹೂಡಿದ ಪರಿಣಾಮ ನಗರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳೇ ಕಂಡು ಬರುತ್ತಿವೆ.
ನಗರಭೆಯಲ್ಲಿ ಖಾಯಂ ಆಗಿ ಮೂವ ತ್ತೇಂಟು ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಗುತ್ತಿಗೆ ಆಧಾರದ ಮೇಲೆ 63 ಜನ ಕೆಲಸವನ್ನು ಮಾಡುತ್ತಿದ್ದಾರೆ.ಈ ಗುತ್ತಿಗೆ ಆಧಾರಿತ ಪೌರಕಾರ್ಮಿಕರಿಗೆ ಗುತ್ತಿಗೆ ದಾರರು ಕಳೆದ ಎರಡು ತಿಂಗಳಿಂದ ವೇತನ ನೀಡದೇ ಇದ್ದು ನಮ್ಮಗಳ ಜೀವನ ನಿರ್ವ ಹಣೆ ಅಸಾದ್ಯವಾಗಿದೆ.ಹಲವು ಬಾರಿ ಕೇಳಿ ದರೂ ಮೌನವನ್ನು ವ್ಯಕ್ತಪಡಿಸುವ ಅವರು ಕಳೆದ ಎರಡು ತಿಂಗಳ ವೇತನವನ್ನೇ ನಮಗೆ ಸಂದಾಯ ಮಾಡಿಲ್ಲ.ಈ ಬೆಳವಣಿಗೆಯಿಂದ ಬೇಸತ್ತು ಎಲ್ಲ 63 ಗುತ್ತಿಗೆ ಆಧಾರಿತ ಪೌರ ಕಾರ್ಮಿಕರು ಕೆಲಸಕ್ಕೆ ಹಾಜರಾಗದೇ ಮುಷ್ಕರವನ್ನು ಮಾಡುತ್ತಿದ್ದೇವೆ ಎಂದರು.

ಎರಡು ತಿಂಗಳ ವೇತನದಲ್ಲಿ ಒಂದು ತಿಂಗಳ ವೇತನ ನೀಡಲಾಗಿದೆ: ಪೌರಾಯುಕ್ತ ಪರಮೇಶ್ವರಪ್ಪ. ನಗರಸಭೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 63 ಪೌರ ಕಾರ್ಮಿಕರಿಗೆ ಗುತ್ತಿಗೆದಾರ ಚಂದ್ರಪ್ಪನವರು ಎರಡು ತಿಂಗಳ ವೇತನ ನೀಡಬೇಕಾಗಿದ್ದು, ಆ ಎರಡು ತಿಂಗಳ ವೇತನದಲ್ಲಿ ಆಕ್ಟೋ ಬರ್ ತಿಂಗಳ ವೇತನವನ್ನು ಸಂಬಂಧಿಸಿದ ಗುತ್ತಿಗೆದಾರ ಪೌರಕಾರ್ಮಿಕರ ಬ್ಯಾಂಕ್ ಖಾತೆಗೆ ನೇರ ಜಮೆ ಮಾಡಲಾಗಿದೆ. ಇನ್ನು ಳಿದ ನವೆಂಬರ್ ತಿಂಗಳ ವೇತನವನ್ನು ಇನ್ನೆರಡು ದಿನಗಳಲ್ಲಿ ನೀಡಲಿದ್ದಾರೆ.ಈ ಎಲ್ಲ ಬೆಳವಣಿಗೆಗಳಲ್ಲಿ ತಾಂತ್ರಿಕ ದೋಷ ಗಳಿದ್ದು ಅದನ್ನು ಸರಿಪಡಿಸಿಕೊಳ್ಳುವುದರ ಮೂಲಕ ಮುಂದಿನ ವೇತನಗಳನ್ನು ವಿಳಂಬ ಮಾಡದಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಆ ನಿಟ್ಟಿನಲ್ಲಿ ಎಲ್ಲ ಗುತ್ತಿಗೆ ಪೌರ ಕಾರ್ಮೀಕರು ಎಂದಿನಂತೆ ಕೆಲಸಕ್ಕೆ ಹಾಜರಾಗಲಿದ್ದಾರೆ ಎಂಬ ಭರವಸೆ ನಮಗಿದೆ ಎಂದರು.

Translate »