ನೆರೆ ಸಂತ್ರಸ್ತರಿಗೆ ಪರಿಹಾರ ವಿಳಂಬ ಖಂಡಿಸಿ ಪ್ರತಿಭಟನೆ
ಕೊಡಗು

ನೆರೆ ಸಂತ್ರಸ್ತರಿಗೆ ಪರಿಹಾರ ವಿಳಂಬ ಖಂಡಿಸಿ ಪ್ರತಿಭಟನೆ

December 15, 2018

ಮಡಿಕೇರಿ: ಜಿಲ್ಲೆಯ ಅತಿವೃಷ್ಟಿ ಹಾನಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ವಿಳಂಬ ಧೋರಣೆಯನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ಪ್ರಕೃತಿ ವಿಕೋಪ ಪರಿಹಾರ ಹೋರಾಟ ಸಮಿತಿ ವಿವಿಧ ಗ್ರಾಮಗಳ ಸಂತ್ರಸ್ತರೊಂದಿಗೆ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದ ಗ್ರಾಮಸ್ಥರು ಹಾಗೂ ಹೋರಾಟ ಸಮಿತಿಯ ಪ್ರಮುಖರು ಪರಿಹಾರ ಕಾರ್ಯ ಗಳನ್ನು ಶೀಘ್ರ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಅಮರಣಾಂತ ಉಪ ವಾಸ ಸತ್ಯಾಗ್ರಹವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಮಿತಿಯ ಅಧ್ಯಕ್ಷ ಎಂ.ಬಿ.ದೇವಯ್ಯ ಮಾತನಾಡಿ, ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತ ರಾದ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದರೊಂದಿಗೆ ಇತರ ಪರಿಹಾರ ಕಾರ್ಯಕ್ರಮಗಳನ್ನೂ ರೂಪಿಸಬೇಕೆಂದು ಜಿಲ್ಲಾಡಳಿತ, ಸರಕಾರ ಹಾಗೂ ಸ್ವತಃ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಪ್ರಕೃತಿ ವಿಕೋಪ ಸಂಭವಿಸಿ ನಾಲ್ಕು ತಿಂಗ ಳಾದರೂ, ಸರಕಾರ ಮನೆ ನಿವೇಶನಕ್ಕೆ ಜಾಗ ಗುರುತಿಸುವುದು ಬಿಟ್ಟು ಇತರ ಯಾವುದೇ ಪರಿಹಾರ ಕಾರ್ಯಗಳನ್ನು ಕೈಗೆತ್ತಿ ಕೊಂಡಿಲ್ಲ ಎಂದು ಆರೋಪಿಸಿದರು.

ಪ್ರಕೃತಿ ವಿಕೋಪ ಸಂಭವಿಸಿದ ಪ್ರದೇಶ ಗಳ ನದಿಗಳಲ್ಲಿ ಹಾಗೂ ಜಮೀನುಗಳಲ್ಲಿ ತುಂಬಿರುವ ಹೂಳೆತ್ತುವುದು, ಸಂತ್ರಸ್ತರಾದ ವರ ಮನೆಗಳಿಗೆ ರಸ್ತೆ ನಿರ್ಮಿಸುವುದು, ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ವ್ಯವಸ್ಥೆ ಮಾಡು ವುದು ಸೇರಿದಂತೆ ಆದ್ಯತೆಯ ಕಾರ್ಯ ಕ್ರಮಗಳ ಬಗ್ಗೆ ಸರಕಾರ ಇಂದಿಗೂ ನಿರ್ಲಕ್ಷ್ಯ ವಹಿಸಿದೆ. ಮುಂದಿನ ಏಪ್ರಿಲ್-ಮೇ ತಿಂಗ ಳಲ್ಲಿ 3-4 ಮಳೆಯಾದರೆ ಪ್ರಕೃತಿ ವಿಕೋಪ ಸಂಭವಿಸಿದ ಪ್ರದೇಶಗಳಲ್ಲಿ ಪ್ರಸಕ್ತ ಉಳಿದು ಕೊಂಡಿರುವ ಗ್ರಾಮಸ್ಥರು ಗ್ರಾಮವನ್ನೇ ತೊರೆಯಬೇಕಾದ ಪರಿಸ್ಥಿತಿ ಇದೆ ಎಂದು ದೇವಯ್ಯ ಆತಂಕ ವ್ಯಕ್ತಪಡಿಸಿದರು.

ಮನೆ ನಿರ್ಮಾಣದ ಗುತ್ತಿಗೆಯನ್ನೂ ಕೇವಲ ಒಂದು ಸಂಸ್ಥೆಗೆ ನೀಡಲಾಗಿದ್ದು, ಈ ಸಂಸ್ಥೆ ತಿಂಗಳಿಗೆ 55 ಮನೆಗಳನ್ನು ನಿರ್ಮಿಸುವು ದಾಗಿ ಹೇಳಿಕೊಂಡಿದೆ. ಆದರೆ ಸರಕಾರ ಗುರುತಿಸಿರುವ ಸುಮಾರು 840 ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲು 8 ತಿಂಗಳೇ ಬೇಕಾಗಲಿದೆ. ಕೇವಲ ಒಂದು ಸಂಸ್ಥೆಗೆ ನೀಡಿರುವ ಮನೆ ನಿರ್ಮಾಣದ ಗುತ್ತಿಗೆಯನ್ನು ಇನ್ನೂ 3-4 ಸಂಸ್ಥೆಗಳಿಗೆ ಅಥವಾ ಗುತ್ತಿಗೆದಾರರಿಗೆ ನೀಡುವ ಮೂಲಕ ಶೀಘ್ರ 840 ಮನೆಗಳ ನಿರ್ಮಾಣಕ್ಕೆ ಮುಂದಾ ಗಬೇಕೆಂದು ದೇವಯ್ಯ ಒತ್ತಾಯಿಸಿದರು.

ಸಮಿತಿಯ ಗೌರವಾಧ್ಯಕ್ಷ ರವಿಕುಶಾಲಪ್ಪ ಮಾತನಾಡಿ, ಪ್ರಸಕ್ತ ಎರಡು ಮುಕ್ಕಾಲು ಸೆಂಟ್ ಜಾಗದಲ್ಲಿ ಮನೆ ನಿರ್ಮಿಸಿಕೊಡುವ ಸರಕಾರದ ಈಗಿನ ನಿರ್ಧಾರವನ್ನು ಮರು ಪರಿಶೀಲಿಸುವ ಅಗತ್ಯವಿದೆ. ನದಿಗಳಲ್ಲಿನ ಹೂಳು ತೆಗೆಯದಿದ್ದಲ್ಲಿ, ಮೇ-ಜೂನ್ ತಿಂಗಳಲ್ಲಿ ಸಂತ್ರಸ್ತರು ಊರು ಖಾಲಿ ಮಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಧಿಕಾರಿಗಳು ಮಾಹಿತಿ ನೀಡಿಲ್ಲವೆಂದಾ ದಲ್ಲಿ ಸಚಿವರೇ ಕೊಡಗಿಗೆ ಆಗಮಿಸಿ ಇಲ್ಲಿನ ಪರಿಸ್ಥಿತಿಯ ಅವಲೋಕನ ಮಾಡ ಬೇಕಾಗಿದೆ ಎಂದರು.

ಸಮಿತಿಯ ಪ್ರಮುಖ ಬಾಲಚಂದ್ರ ಕಳಗಿ ಮಾತನಾಡಿ, ಸಂಪಾಜೆ ಹೋಬಳಿಯಲ್ಲಿ ಮನೆ ಕಳೆದುಕೊಂಡಿರುವ ಸುಮಾರು 40- 50 ಕುಟುಂಬಗಳಿಗೆ ಇದುವರೆಗೆ ಸರಕಾ ರದ ವತಿಯಿಂದ 3800ರೂ.ಗಳ ಪರಿ ಹಾರ ಹೊರತಾಗಿ ಇತರ ಯಾವುದೇ ಸೌಲ ಭ್ಯಗಳು ದೊರಕಿಲ್ಲ. ಪ್ರಾಥಮಿಕವಾಗಿ ಸಿದ್ಧ ಪಡಿಸಿದ ಪಟ್ಟಿಯಲ್ಲಿ ಹೆಸರು ಇದ್ದ ಈ ಕುಟುಂಬಗಳನ್ನು ಜಾಗಕ್ಕೆ ಸಂಬಂಧಿಸಿದ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಎರಡನೇ ಪಟ್ಟಿಯಲ್ಲಿ ಕೈಬಿಡಲಾಗಿದೆ. ಆದರೆ ಆ ಕುಟುಂ ಬಗಳು ಹಲವಾರು ವರ್ಷಗಳಿಂದ ಪಂಚಾ ಯಿತಿಗಳಿಗೆ ಕಂದಾಯ ಪಾವತಿಸಿಕೊಂಡು ಬಂದಿದ್ದು, ಆ ಪಂಚಾಯಿತಿಗಳಲ್ಲೇ ದಾಖಲೆ ಗಳು ಲಭ್ಯವಿದೆ. ಆದರೂ ಸಂತ್ರಸ್ತರನ್ನು ಬೀದಿ ಪಾಲು ಮಾಡುವ ಕಾರ್ಯ ಕಂದಾಯ ಇಲಾಖೆಯಿಂದ ನಡೆಯುತ್ತಿದೆ ಎಂದು ಆರೋಪಿಸಿದರು.

ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಸಮನ್ವಯ ತೆಯ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲೆಯ ಶಾಸಕರುಗಳು, ಜಿಲ್ಲಾಧಿಕಾರಿಗಳು, ಸಂತ್ರ ಸ್ತರ ಸಮಿತಿಯ ಪದಾಧಿಕಾರಿಗಳು ಒಂದೇ ವೇದಿಕೆಯಲ್ಲಿ ಕುಳಿತು ಚರ್ಚಿಸಿದಲ್ಲಿ ಪರಿ ಹಾರ ಕಾಮಗಾರಿಗಳ ಕುರಿತಾದ ಸಮಸ್ಯೆ ಗಳು ಇತ್ಯರ್ಥವಾಗಲಿವೆ. ಇಲ್ಲವಾದಲ್ಲಿ ಮತ್ತಷ್ಟು ಗೊಂದಲಗಳು ಸೃಷ್ಟಿಯಾಗಲಿವೆ ಎಂದು ಬಾಲಚಂದ್ರ ಕಳಗಿ ಅಭಿಪ್ರಾಯ ಪಟ್ಟರು. ಪ್ರತಿಭಟನೆಯ ನಂತರವೂ ಪರಿ ಹಾರ ಕಾರ್ಯಗಳು ಚುರುಕುಗೊಳ್ಳದಿ ದ್ದಲ್ಲಿ ಮುಂದಿನ ದಿನಗಳಲ್ಲಿ ಸಂತ್ರಸ್ತರೆಲ್ಲರು ಸೇರಿ ಉಪವಾಸ ಸತ್ಯಾಗ್ರಹ ಆರಂಭಿಸ ಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಬಳಿಕ ಪ್ರತಿಭಟ ನೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಗಳ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.
ಹೋರಾಟ ಸಮಿತಿಯ ಕಾರ್ಯದರ್ಶಿ ಕುಂಬುಗೌಡನ ಪ್ರಸನ್ನ, ಡಿಸಿಸಿ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಕುಂಬುಗೌಡನ ಉತ್ತಪ್ಪ, ಕೃಷಿಕರ ಸಮಾಜದ ಅಧ್ಯಕ್ಷ ತಾಕೇರಿ ಪೊನ್ನಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »