ಯಲಕನೂರಿನಲ್ಲಿ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ
ಕೊಡಗು

ಯಲಕನೂರಿನಲ್ಲಿ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ

December 15, 2018

ಸೋಮವಾರಪೇಟೆ: ತಾಲೂ ಕಿನ ಯಲಕನೂರು ಗ್ರಾಮದಲ್ಲಿ ಶ್ರೀ ಮಹಾ ಲಿಂಗೇಶ್ವರಸ್ವಾಮಿ ದೇವಾಲಯ ಜೀರ್ಣೋ ದ್ಧಾರ ಸಮಿತಿ ಆಶ್ರಯದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಲಾಗಿರುವ ದೇವಾಲ ಯಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.

ಶ್ರೀ ಮಹಾಲಿಂಗೇಶ್ವರ, ಶ್ರೀ ಗಣಪತಿ, ಶ್ರೀ ನವದುರ್ಗಾ, ಶ್ರೀ ವೀರಭದ್ರೇಶ್ವರ, ಶ್ರೀ ಭದ್ರಕಾಳಿ, ಶ್ರೀ ಕಾಲಭೈರವೇಶ್ವರ, ಶ್ರೀ ನಾಗ ದೇವತೆ, ಶ್ರೀ ಅವಲಕ್ಕಿ ಬಸವಣ್ಣ, ಶ್ರೀ ಭಂಟಿಗ ದೇವರುಗಳ ನೂತನ ದೇವಾ ಲಯ ನಿರ್ಮಾಣಕ್ಕೆ ಬೀರೇದೇವರ ಸಮಿತಿ ಅಧ್ಯಕ್ಷ ಬಿ.ಎಸ್. ದಿಲೀಪ್ ಶಿಲಾನ್ಯಾಸ ನೆರವೇರಿಸಿದರು. ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಬಿ.ಎ. ಜೀವಿಜಯ ಮಾತ ನಾಡಿ, ನೆಲದ ಸಂಸ್ಕøತಿಯನ್ನು ಉಳಿಸಿ ಬೆಳೆ ಸಿಕೊಂಡು ಹೋಗಬೇಕಾಗಿರುವುದು ಜವ ಬ್ದಾರಿಯಾಗಿದೆ. ಗ್ರಾಮಗಳಲ್ಲಿ ದೇವಾ ಲಯ ಹಾಗೂ ಶಾಲೆಗಳು ಇರಬೇಕು. ದೇವಾಲಯದಲ್ಲಿನ ಮೂರ್ತಿಗಳು ದೇವರ ಸಂಕೇತವಾಗಿದ್ದು, ಅಂತಃಶುದ್ಧಿಯ ಮೂಲಕ ದೇವರನ್ನು ಕಾಣಬೇಕಿದೆ ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ವಿರಕ್ತ ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ ಮಾತನಾಡಿ, ದೇವಾಲಯ ನಿರ್ಮಾಣಕ್ಕೆ ಮುಂದಾದಲ್ಲಿ ಸಾಲದು, ಎಲ್ಲರೂ ಒಂದಾಗಿ ಕೆಲಸ ಮಾಡುವ ಮೂಲಕ ಪರಸ್ಪರ ಸಹೋದರತ್ವದ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾ ಲಯ ಸಮಿತಿ ಅಧ್ಯಕ್ಷ ವೈ.ಸಿ. ಶಿವಾನಂದ ವಹಿಸಿದ್ದರು.

ವೇದಿಕೆಯಲ್ಲಿ ಜಿಪಂ ಸದಸ್ಯೆ ಪೂರ್ಣಿಮಾ ಗೋಪಾಲ್, ನೇರುಗಳಲೆ ಗ್ರಾಮ ಪಂಚಾ ಯಿತಿ ಅಧ್ಯಕ್ಷ ಎ.ಎಚ್. ತಿಮ್ಮಯ್ಯ, ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಬಿ.ಡಿ. ಮಂಜುನಾಥ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಬೀರೇದೇವರ ಸಮಿತಿಯ ಮಾಜಿ ಅಧ್ಯಕ್ಷ ಚನ್ನಬಸಪ್ಪ, ಗ್ರಾಮ ಪಂಚಾಯಿತಿ ಸದಸ್ಯೆ ಲಕ್ಷ್ಮಮ್ಮ, ಯಲಕನೂರು ಗ್ರಾಮದ ಅಧ್ಯಕ್ಷ ಲೋಕೇಶ್, ಅರ್ಚಕ ಮಹೇಶ್ ಮತ್ತಿ ತರರು ಉಪಸ್ಥಿತರಿದ್ದರು.

Translate »