ಡಿಎಆರ್ ಎಎಸ್‍ಐ ರಾಜಕುಮಾರ್‍ಗೆ  ರಾಷ್ಟ್ರಪತಿಗಳ ವಿಶಿಷ್ಠ ಸೇವಾ ಪದಕ
ಮೈಸೂರು

ಡಿಎಆರ್ ಎಎಸ್‍ಐ ರಾಜಕುಮಾರ್‍ಗೆ ರಾಷ್ಟ್ರಪತಿಗಳ ವಿಶಿಷ್ಠ ಸೇವಾ ಪದಕ

January 26, 2020

ಮೈಸೂರು: ಮೈಸೂರಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆ (DAR) ಸಹಾಯಕ ಸಬ್‍ಇನ್ಸ್‍ಪೆಕ್ಟರ್ ರಾಜ ಕುಮಾರ್ ಅವರಿಗೆ 2019-20ನೇ ಸಾಲಿನ ರಾಷ್ಟ್ರಪತಿ ವಿಶಿಷ್ಠ ಸೇವಾ ಪದಕ ಲಭಿಸಿದೆ. ಮೈಸೂರಿನ ಜ್ಯೋತಿ ನಗರದ ಡಿಎಆರ್ ಪೊಲೀಸ್ ಕ್ವಾರ್ಟರ್ಸ್‍ನಲ್ಲಿ ವಾಸವಾಗಿರುವ ರಾಜಕುಮಾರ್ ಅವರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರ ವಿಶಿಷ್ಠ ಸೇವೆಯನ್ನು ಪರಿಗಣಿಸಿ ಸೇವಾ ಪದಕ ಲಭಿಸಿದೆ. 1990ರಲ್ಲಿ ಕಾನ್‍ಸ್ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಸೇರಿದ ಅವರು, ಮೈಸೂರು, ಬೆಂಗಳೂರಿನ ಸಿಸಿಬಿಯಲ್ಲಿ ಕೆಲಸ ಮಾಡಿದ ನಂತರ ಮೈಸೂರಿನ ಡಿಎಆರ್‍ನಲ್ಲಿ ಎಎಸ್‍ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Translate »