ಗಣರಾಜ್ಯೋತ್ಸವಕ್ಕೆ ಪೊಲೀಸ್ ಬಂದೋಬಸ್ತ್
ಮೈಸೂರು

ಗಣರಾಜ್ಯೋತ್ಸವಕ್ಕೆ ಪೊಲೀಸ್ ಬಂದೋಬಸ್ತ್

January 26, 2020

ಮೈಸೂರು: ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ಭಾನು ವಾರ ನಡೆಯುವ ಗಣರಾಜ್ಯೋ ತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾ ಡಲು ಹಾಗೂ ಸುಗಮ ಸಂಚಾರ ಕ್ಕಾಗಿ ಸಾರ್ವಜನಿಕರು ಕೆಲವು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಗರ ಪೊಲೀಸ್ ಆಯುಕ್ತರು ಕೋರಿದ್ದಾರೆ.

  • ಜ.26ರಂದು ಗಣರಾಜ್ಯೋತ್ಸವಕ್ಕೆ ಆಗಮಿಸುವ ಗಣ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿ.ಪಂ ಅಧ್ಯಕ್ಷರು, ಉಪಾ ಧ್ಯಕ್ಷರು, ನಗರಪಾಲಿಕೆ ಸದಸ್ಯರುಗಳು ಬನ್ನಿಮಂಟಪದ ಮುಖ್ಯ ದ್ವಾರದ ಮೂಲಕ ಪ್ರವೇಶಿಸಬೇಕು. ಇವರ ವಾಹನಗಳಿಗೆ ಮುಖ್ಯ ದ್ವಾರದ ಎಡಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
  • ಗೇಟ್ ಜಿ-5ರಲ್ಲಿ ಪೊಲೀಸ್ ಇಲಾಖೆ, ಪತ್ರಿಕಾ ಮಾಧ್ಯಮ, ಇತರೆ ಇಲಾಖೆ ಮತ್ತು ಸಾರ್ವಜನಿಕರ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳ ಪ್ರವೇಶ ಮತ್ತು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಗೇಟ್ ಜಿ-8ರಲ್ಲಿ ಗಣರಾಜ್ಯೋತ್ಸವದ ಸಾಂಸ್ಕøತಿಕ ಕಾರ್ಯ ಕ್ರಮ ಹಾಗೂ ಪೆರೇಡ್‍ನಲ್ಲಿ ಭಾಗವಹಿಸುವವರಿಗೆ, ಶಾಲಾ-ಕಾಲೇಜು ವಾಹನಗಳ ಪ್ರವೇಶ ಮತ್ತು ಪಾರ್ಕಿಂಗ್ ವ್ಯವಸ್ಥೆ.
  • ಗೇಟ್ ಜಿ-11ರಲ್ಲಿ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ. * ಸುರಕ್ಷತೆಯ ದೃಷ್ಟಿಯಿಂದ ಯಾವುದೇ ರೀತಿಯ ಆಯುಧ ಗಳು, ಗಾಜಿನ ನೀರಿನ ಬಾಟಲಿ ಮತ್ತು ದೊಡ್ಡ ಬ್ಯಾಗ್‍ಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.
  • ಲೋಹಶೋಧಕ ಯಂತ್ರ ಗಳನ್ನು ಅಳವಡಿಸಿದ್ದು, ಸಾರ್ವಜನಿಕರು ಈ ಯಂತ್ರದ ಮೂಲಕ ತಪಾಸಣೆಗೆ ಒಳಪಟ್ಟು ನಂತರ ಮೈದಾನದೊಳಕ್ಕೆ ತೆರಳಬೇಕು
  • ಕವಾಯಿತು ಹಾಗೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಾರ್ವ ಜನಿಕರು ಪ್ರವೇಶಿಸಬಾರದು. ನಿಗದಿಪಡಿಸಿದ ಸ್ಥಳದಲ್ಲೇ ಕುಳಿತು ಕಾರ್ಯಕ್ರಮ ವೀಕ್ಷಿಸಬೇಕು. ಕಾರ್ಯಕ್ರಮ ಪ್ರಾರಂಭವಾದ ನಂತರ ಪದೇ ಪದೇ ಸ್ಥಳ ಬದಲಾವಣೆ ಮಾಡಬಾರದು.
  • ನಿಗದಿತ ಪ್ರವೇಶ ದ್ವಾರ ಹೊರತುಪಡಿಸಿ, ಬೇರೆ ಕಡೆಗಳಿಂದ ಸಾರ್ವಜನಿಕರು ಪ್ರವೇಶಿಸಬಾರದು. ಸಾರ್ವಜನಿಕರು ತಮ್ಮ ವಾಹನಗಳನ್ನು ಪೊಲೀಸರು ನಿಗದಿಪಡಿಸಿದ ಸ್ಥಳದಲ್ಲೇ ನಿಲುಗಡೆ ಮಾಡಬೇಕು.
  • ಸಂಚಾರಕ್ಕೆ ಅಡಚಣೆ ಉಂಟಾಗುವ ರೀತಿ ನಿಲ್ಲಿಸಿದ ವಾಹನ ಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
  • ಸಾರ್ವಜನಿಕ ಸ್ಥಳಗಳಾದ ಮಾಲ್‍ಗಳು, ಸಿನಿಮಾ ಮಂದಿರ ಗಳು, ಮಾರುಕಟ್ಟೆ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಏರ್‍ಪೋರ್ಟ್, ಪ್ರಾರ್ಥನಾ ಸ್ಥಳಗಳು, ಪ್ರವಾಸಿ ಸ್ಥಳಗಳು ಹಾಗೂ ಹೆಚ್ಚಿನ ಜನನಿಬಿಡ ಪ್ರದೇಶಗಳಲ್ಲಿ ಮಾಲೀಕರು-ವ್ಯವಸ್ಥಾಪಕರು ಸೂಕ್ತ ಸ್ಥಳಗಳಲ್ಲಿ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸಬೇಕು.
  • ಹೋಟೆಲ್, ವಸತಿಗೃಹ, ಹೋಂ ಸ್ಟೇಗಳ ಮಾಲೀಕರು ಪ್ರವಾಸಿಗರಿಗೆ ಮತ್ತು ಇತರರಿಗೆ ಕೊಠಡಿ ಗಳನ್ನು ನೀಡುವಾಗ ಅವರ ಬಗ್ಗೆ ಹಾಗೂ ಅವರು ತಂದಿರುವ ಲಗ್ಗೇಜ್‍ಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ, ಪೂರ್ಣ ವಿಳಾಸದ ಮಾಹಿತಿ ಪಡೆದು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.  ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳು, ವಾಹನಗಳು, ವಸ್ತುಗಳು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ನಗರ ಪೊಲೀಸ್ ನಿಯಂತ್ರಣ ಕೊಠಡಿ ದೂ.ಸಂ. 0821-2418100, 2418339, 2418139ಗೆ ಕರೆ ಮಾಡಿ ತಿಳಿಸಬೇಕು. ಮಾಹಿತಿ ನೀಡಿ ದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತ: ಜಿಲ್ಲಾಡಳಿತದ ವತಿಯಿಂದ ಜ.26ರಂದು ಬೆಳಿಗ್ಗೆ 9 ಗಂಟೆಗೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಧ್ವಜಾರೋಹಣ ನೆರವೇರಿಸು ವರು. ಮೇಯರ್ ತಸ್ನೀಂ, ಜಿಪಂ ಅಧ್ಯಕ್ಷೆ ಪರಿಮಳಾ, ಡಿಸಿ ಅಭಿ ರಾಮ್ ಜಿ.ಶಂಕರ್ ಸೇರಿದಂತೆ ಮತ್ತಿತರರು ಭಾಗವಹಿಸುವರು.

Translate »