ಕೊರೊನಾ ವೈರಸ್ ತಡೆಗೆ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮ
ಮೈಸೂರು

ಕೊರೊನಾ ವೈರಸ್ ತಡೆಗೆ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮ

March 22, 2020

ಮೈಸೂರು, ಮಾ.21-ಕೊರೊನಾ ವೈರಸ್ ತಡೆಗೆ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಅದರಂತೆ ಎಲ್ಲಾ ಹೊರ ರೋಗಿ ವಿಭಾಗಗಳು ಮುಂದಿನ ಸೂಚನೆವರೆಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆವ ರೆಗೆ ಕಾರ್ಯ ನಿರ್ವಹಿಸಲಿವೆ. ತುರ್ತು ಚಿಕಿತ್ಸೆ ಹೊರತುಪಡಿಸಿ ಆಸ್ಪತ್ರೆಗೆ ಅನಗತ್ಯ ವಾಗಿ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ. ಎಲ್ಲಾ ಪ್ರಯೋಗಾಲಯಗಳು ಮತ್ತು ಔಷಧಾಲಯ ಸೇವೆಗಳು ಎಂದಿನಂತೆ ಇರುತ್ತದೆ. ತುರ್ತು ಚಿಕಿತ್ಸಾ ವಿಭಾಗ ಎಂದಿನಂತೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ದಂತ ಚಿಕಿತ್ಸಾ ವಿಭಾಗದ ಸೌಲಭ್ಯವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ತೀವ್ರ ನಿಗಾ ಘಟಕಗಳಿಗೆ ಸಂದರ್ಶಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಹಾಗೂ ವಾರ್ಡ್‍ಗಳಿಗೆ ಓರ್ವ ಸಂದರ್ಶಕರಿಗೆ ಮಾತ್ರ ಅವಕಾಶವಿದೆ. ವಿಶೇಷ ಕ್ಲಿನಿಕ್ ಮತ್ತು ಸಮಗ್ರ ಆರೋಗ್ಯ ತಪಾಸಣೆ ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ಆಸ್ಪತ್ರೆ ನಿರ್ದೇಶಕರು ತಿಳಿಸಿದ್ದಾರೆ.

Translate »