ಮೈಸೂರು,ಮಾ.21-ಕೋವಿಡ್-19 ವೈರಸ್ ಹರಡುವಿಕೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವದಂತಿ ಹರಡುತ್ತಿದ್ದು, ಇದರ ಪರಿಣಾಮ ಸರ್ಕಾರದ ವಿವಿಧ ಇಲಾಖೆ ಗಳ ಆಡಳಿತ ವ್ಯವಸ್ಥೆಗೆ ಅಡಚಣೆ ಉಂಟಾ ಗಿದೆ. ಇದನ್ನು ತಪ್ಪಿಸುವ ಸಲುವಾಗಿ ಕೊರೊನಾ ಯೋಧರನ್ನು ನೇಮಿಸಲಾ ಗಿದೆ ಎಂದು ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್.ರಾಜು ಹೇಳಿದರು.
ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿ ಸಭಾಂ ಗಣದಲ್ಲಿ ಶನಿವಾರ ಕೊರೊನಾ ಸೈನಿಕರ ಸ್ವಯಂ ಸೇವಕರೊಂದಿಗೆ ಚರ್ಚಿಸಿದ ಅವರು, ಕೊರೊನಾ ಸೈನಿಕರು ಎಂಬ ಪರಿ ಕಲ್ಪನೆಯ ಉದ್ದೇಶ ಹಾಗೂ ಅಗತ್ಯತೆಯ ಬಗ್ಗೆ ಸ್ವಯಂಸೇವಕರಿಗೆ ವಿವರಣೆ ನೀಡಿ ದರು. ವಿವಿಧ ತಾಲೂಕಿನಿಂದ ಆಗಮಿ ಸಿದ್ದ ಸ್ವಯಂ ಸೇವಕರನ್ನು ಉದ್ದೇಶಿ ಮಾತ ನಾಡಿದ ಅವರು, ಕೊರೊನಾ ವೈರಾಣು ಹರಡುವಿಕೆ ಕುರಿತಾಗಿ ವಿವಿಧ ಮಾಧ್ಯಮ, ಸಾಮಾಜಿಕ ಮಾಧ್ಯಮ, ಜಾಲತಾಣ ಗಳಲ್ಲಿ ಮೂಡಿಬರುವ ವದಂತಿಗಳ ಬಗ್ಗೆ ಪರಾಮರ್ಶಿಸಿ, ನೈಜ ಮಾಹಿತಿ ಕೊಡು ವುದು ಹಾಗೂ ಸ್ಥಳೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡುವುದು ಕೊರೊನಾ ಸೈನಿಕರ ಕೆಲಸವಾಗಿದೆ ಎಂದು ಸ್ವಯಂ ಸೇವಕರಿಗೆ ಮನವರಿಕೆ ಮಾಡಿದರು.
ರಾಜ್ಯದ ಪ್ರತಿಯೊಂದು ಜಿಲ್ಲೆಯ ಆಯಾ ತಾಲೂಕುಗಳಲ್ಲಿ 4 ಸ್ವಯಂ ಸೇವಕರು ಕೆಲಸ ಮಾಡಲಿದ್ದು, ಸುಳ್ಳು ವದಂತಿ ಹರಡಿರುವ ಸ್ಥಳಕ್ಕೆ ಸ್ಥಳೀಯ ಅಧಿಕಾರಿಗಳ ಸಹಕಾರದೊಂ ದಿಗೆ ಖುದ್ದಾಗಿ ಭೇಟಿ ಮಾಡಿ ಪರಿಶೀಲನೆ ಮಾಡಿ ನೈಜತೆ ಏನೆಂಬುದನ್ನು ತಿಳಿಸು ವುದು ಸ್ವಯಂ ಸೇವಕ ಕೆಲಸ ಎಂದರು.
ಕೊರೊನಾ ಬಗ್ಗೆ ಆತಂಕ ಬೇಡ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ಸಾರ್ವ ಜನಿಕರಿಗೆ ಈ ಬಗ್ಗೆ ಸರಿಯಾಗಿ ಮನ ವರಿಕೆ ಆದಂತೆ ಕಾಣುತ್ತಿಲ್ಲ. ಭಾರತ ದೇಶವು 125 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ಇದರಲ್ಲಿ ಕೇವಲ 10 ಲಕ್ಷ ಜನರಿಗೆ ಮಾತ್ರ ಔಷಧವನ್ನು ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಸೂಚನೆ ಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಿ ಮಾರ್ಗದರ್ಶನ ನೀಡುವಂತೆ ರಾಜು ಮನವಿ ಮಾಡಿದರು.
ರೆಡ್ ಕ್ರಾಸ್ ಸಂಸ್ಥೆಯ ಮಹದೇವಪ್ಪ ಅವರು ಮಾತನಾಡಿ, ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಈಗಾಗಲೇ ಮನೆ ಮನೆಗೆ ಹೋಗಿ ಕರಪತ್ರವನ್ನು ಹಂಚ ಲಾಗಿದ್ದು, ಇದರಿಂದ ಸುಳ್ಳು, ವದಂತಿಗಳನ್ನು ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟರು. ಕೊರೊನಾ ಹಿನ್ನೆಲೆ ಸುಳ್ಳು ಸುದ್ದಿಗಳನ್ನು ತಪ್ಪಿಸಲು ಆಯ್ಕೆಯಾಗುವ ಸ್ವಯಂ ಸೇವಕ ರಿಗೆ ಪ್ರತ್ಯೇಕ ಗುರುತಿನ ಚೀಟಿಗಳನ್ನು ನೀಡಲಾಗುವುದು. ಇದನ್ನು ಬೇರೆ ಉದ್ದೇಶಕ್ಕೆ ಬಳಸಬಾರದು ಎಂದರು.