ಇಂದು ಮಾರುಕಟ್ಟೆ ಸೇವೆಗಳು ಸ್ಥಗಿತ
ಮೈಸೂರು

ಇಂದು ಮಾರುಕಟ್ಟೆ ಸೇವೆಗಳು ಸ್ಥಗಿತ

March 22, 2020

ಮೈಸೂರು,ಮಾ.21-ಕೊರೊನಾ ವೈರಸ್ ಶಂಕಿತ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪ್ರಧಾನಿ ಮೋದಿ ಅವರ ನಿರ್ದೇಶನದಂತೆ ಮಾ.22ರಂದು ಬೆಳಿಗ್ಗೆ 7ರಿಂದ ರಾತ್ರಿ 9 ಗಂಟೆವರೆಗೆ ಜನತಾ ಕಫ್ರ್ಯೂ ಜಾರಿಯಾಗುವುದರಿಂದ ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಗೊಳ ಪಡುವ ದೇವರಾಜ ಮಾರುಕಟ್ಟೆ, ಮಂಡಿ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ, ಇನ್ನಿತರೆ ಮಾರುಕಟ್ಟೆಯ ಎಲ್ಲಾ ಮಳಿಗೆಗಳು ತಮ್ಮ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದು, ನಗರದ ಸಾರ್ವ ಜನಿಕರು ಜನರಿಂದ ಜನರಿಗಾಗಿ ಜಾರಿಯಾಗುತ್ತಿರುವ ಜನತಾ ಕಫ್ರ್ಯೂ ದಲ್ಲಿ `ಕೊರೊನಾ ವಿರುದ್ಧ ಒಂದಾಗೋಣ ಮನೆಯಲ್ಲೇ ಇರೋಣ-ಕೊರೊನಾ ತಡೆಯೋಣ’ ಎಂಬ ಧ್ಯೇಯದೊಂದಿಗೆ ಕಫ್ರ್ಯೂನಲ್ಲಿ ಭಾಗಿಯಾಗುವಂತೆ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

Translate »