ರೈತರಿಗೆ ಪ್ರಧಾನಿ ಮೋದಿ ಬಂಪರ್ ಕೊಡುಗೆ?
ಮೈಸೂರು

ರೈತರಿಗೆ ಪ್ರಧಾನಿ ಮೋದಿ ಬಂಪರ್ ಕೊಡುಗೆ?

January 3, 2019

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಗುರುವಾರ) ಪಂಜಾಬಿನ ಗುರುದಾಸ್‍ಪುರದಲ್ಲಿ 2019ನೇ ವರ್ಷದ ಪ್ರಥಮ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದು, ಈ ವೇಳೆ ದೇಶದ ರೈತರಿಗೆ ಬಂಪರ್ ಕೊಡುಗೆಗಳನ್ನು ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತೀ ರೈತರಿಗೆ ಎಕರೆಗೆ 4 ಸಾವಿರ ನಗದು ಸಹಾಯ ಧನ ನೀಡುವು ದರ ಜೊತೆಗೆ ಬಡ್ಡಿ ರಹಿತವಾಗಿ ಸಾಲ ನೀಡುವ ಯೋಜನೆಯನ್ನು ಅವರು ಪ್ರಕಟಿಸಲಿದ್ದಾರೆನ್ನಲಾಗಿದೆ.

ರೈತರಿಗೆ ನಿಶ್ಚಿತ ಮಾಸಿಕ ಆದಾಯ ಬರುವಂತಹ ಒಂದು ಯೋಜನೆಯನ್ನು ಅವರು ಸಿದ್ಧಪಡಿಸಿಕೊಂಡಿದ್ದಾರೆ. ಅಲ್ಲದೇ ಸರ್ಕಾರ ನಿಗದಿಪಡಿಸುವ ಬೆಲೆಗೆ ಕೃಷಿ ಉತ್ಪನ್ನಗಳು ಮಾರಾಟವಾಗದಿದ್ದಾಗ ರೈತರಿಗೆ ನಷ್ಟವನ್ನು ತುಂಬಿಕೊಡುವ ಒಂದು ಯೋಜನೆಯನ್ನೂ ಕೂಡ ಮೋದಿಯವರು ಪ್ರಕಟಿಸಲಿದ್ದಾರೆನ್ನಲಾಗಿದೆ. ಬೆಳೆ ನಾಶವಾದಾಗ ಸಂಕಷ್ಟಕ್ಕೆ ಸಿಲುಕುವ ರೈತರ ನೆರವಿಗಾಗಿ ಸುಧಾರಿತ ಬೆಳೆ ಯೋಜನೆ ಸೇರಿದಂತೆ ರೈತರ ಪರವಾದ ಕೆಲವು ಯೋಜನೆಗಳನ್ನು ನಾಳೆ ಪ್ರಧಾನಿ ಮೋದಿ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಯೋಜನೆಗಳೆಲ್ಲವನ್ನೂ ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನವೇ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಕಾರ್ಯ ಪ್ರವೃತ್ತರಾಗಲಿದ್ದಾರೆ. ಅದಕ್ಕಾಗಿ ಹಣಕಾಸಿನ ಹೊಂದಾಣಿಕೆಯ ಬಗ್ಗೆಯೂ ಕೂಡ ರೂಪು-ರೇಷೆಗಳನ್ನು ರಚಿಸಲಾಗಿದೆ ಎಂದು ಮೂಲಗಳು ಹೇಳುತ್ತಿವೆ.

Translate »