ಹನಿಟ್ರ್ಯಾಪ್: ಹಾಸನ ಜಿಲ್ಲಾ ಪೊಲೀಸರಿಂದ ಮಹಿಳೆ ಸೇರಿ ಐವರ ಬಂಧನ
ಮೈಸೂರು

ಹನಿಟ್ರ್ಯಾಪ್: ಹಾಸನ ಜಿಲ್ಲಾ ಪೊಲೀಸರಿಂದ ಮಹಿಳೆ ಸೇರಿ ಐವರ ಬಂಧನ

January 3, 2019

ಹಾಸನ: ಪುರುಷರನ್ನು ಹನಿಟ್ರ್ಯಾಪ್‍ಗೆ ಸಿಲುಕಿಸಿಕೊಂಡು ಹಣ ಸುಲಿಗೆ ಮಾಡು ತ್ತಿದ್ದ ಜಾಲವನ್ನು ಭೇದಿಸಿದ ಹಾಸನ ಜಿಲ್ಲಾ ಪೊಲೀಸರು ಮಹಿಳೆ ಸೇರಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಐವರು ಒಟ್ಟು ಐದು ಹನಿಟ್ರ್ಯಾಪ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅದರಲ್ಲಿ ಮೂರು ಪ್ರಕರಣಗಳು ಮಾತ್ರ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಎರಡು ಪ್ರಕರಣಗಳಲ್ಲಿ ಹನಿಟ್ರ್ಯಾಪ್‍ಗೆ ಒಳ ಗಾದವರು ದೂರು ನೀಡಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪ್ರಕಾಶ್‍ಗೌಡ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂಲತಃ ತುಮಕೂರು ಜಿಲ್ಲೆ ತುರವೇ ಕೆರೆ ತಾಲೂಕು ಬೊಮ್ಮೇನಹಳ್ಳಿ ಗ್ರಾಮದ ವಳಾಗಿದ್ದು, ಹಾಲಿ ಬೆಂಗಳೂರಿನ ಚಿಕ್ಕ ಬಾಣವಾರದಲ್ಲಿ ವಾಸಿಸುತ್ತಿರುವ ಅರ್ಪಿತಾ (22), ಆಕೆಯ ಪ್ರಿಯಕರ ಮೂಲತಃ ಚಿಕ್ಕನಾಯಕನಹಳ್ಳಿ ತಾಲೂಕು ಗೋಡೆಕೆರೆ ಗೊಲ್ಲರಹಟ್ಟಿ ಗ್ರಾಮದವನಾಗಿದ್ದು, ಹಾಲಿ ಬೆಂಗಳೂರಿನ ಚಿಕ್ಕ ಬಾಣವರದಲ್ಲಿ ವಾಸಿ ಸುತ್ತಿರುವ ಪವನ್‍ಯಾದವ್ (25), ಚಿಕ್ಕ ನಾಯಕನಹಳ್ಳಿ ತಾಲೂಕು ಬಕ್ಕನಹಳ್ಳಿ ಗ್ರಾಮದವನಾಗಿದ್ದು, ಹಾಲಿ ಬೆಂಗಳೂರಿನ ದಾಸರಹಳ್ಳಿಯಲ್ಲಿ ವಾಸಿಸುತ್ತಿರುವ ಓಲಾ ಕಾರ್ ಡ್ರೈವರ್ ಕಿರಣ್ (23), ತುರವೇಕೆರೆ ತಾಲೂಕು ಆನೆಕೆರೆ ಪಾಳ್ಯದವನಾಗಿದ್ದು, ಹಾಲಿ ಬೆಂಗಳೂರಿನ ರಾಜಗೋಪಾಲ ನಗರದಲ್ಲಿ ವಾಸಿಸುತ್ತಿರುವ ದೊರೆ(19), ಚನ್ನರಾಯಪಟ್ಟಣ ತಾಲೂಕು ಹೊಂಗೇಹಳ್ಳಿಯವನಾಗಿದ್ದು, ಹಾಲಿ ಬೆಂಗಳೂರಿನ ಲಗ್ಗೆರೆಯಲ್ಲಿ ವಾಸಿಸು ತ್ತಿರುವ ಓಲಾ ಕಾರ್‍ಡ್ರೈವರ್ ಹೆಚ್.ಕೆ.ಹೇಮೇಶ್ ಅಲಿಯಾಸ್ ಲೆಫ್ಟ್ (20) ಬಂಧಿತರಾಗಿದ್ದಾರೆ.

ವಿವರ: ಬಂಧನಕ್ಕೊಳಗಾಗಿರುವ ಅರ್ಪಿತಾ ವಿವಾಹಿತೆಯಾಗಿದ್ದು, ಪತಿಯನ್ನು ತೊರೆದು ಪ್ರಿಯಕರ ಪವನ್‍ಯಾದವ್ ಜೊತೆ ಬೆಂಗ ಳೂರಿನಲ್ಲಿ ವಾಸಿಸುತ್ತಿದ್ದಾಳೆ. ಈಕೆ ಫೇಸ್ ಬುಕ್ ಮೂಲಕ ಯುವಕರನ್ನು ಸಂಪ ರ್ಕಿಸಿ ಚಾಟಿಂಗ್ ಮಾಡುವ ಮೂಲಕ ಅವರ ಗೆಳೆತನವನ್ನು ಬೆಳೆಸಿ ಭೇಟಿ ಮಾಡುವ ನೆಪದಲ್ಲಿ ಕರೆಸಿಕೊಂಡು ತನ್ನ ತಂಡದೊಂ ದಿಗೆ ಅವರನ್ನು ಸುಲಿಗೆ ಮಾಡುತ್ತಿದ್ದಳು.

ಮೂಲತಃ ತಮಿಳುನಾಡಿನವರಾಗಿದ್ದು, ಬೆಂಗಳೂರಿನಲ್ಲಿ ಫೋಟೋಗ್ರಾಫರ್ ಆಗಿರುವ ನವೀನ್ ಕುಮಾರ್ ಎಂಬಾತನ ಸ್ನೇಹ ಬೆಳೆಸಿದ್ದ ಈಕೆ ಡಿ.4ರಂದು ಹಾಸ ನದ ಪುರದಮ್ಮ ದೇವಾಲಯಕ್ಕೆ ಹೋಗಿ ಬರೋಣ ಎಂದು ಆತನನ್ನು ಕರೆದು ಕೊಂಡು ಬಂದಿದ್ದಾಳೆ. ಅಂದು ರಾತ್ರಿ 8.45ರ ಸುಮಾರಿನಲ್ಲಿ ದೇವಾಲಯದಿಂದ ಬೈಕ್‍ನಲ್ಲಿ ಹಿಂತಿರುಗುತ್ತಿದ್ದ ವೇಳೆ ಅರಸೀ ಕೆರೆ ಸಮೀಪ ಕಾರಿನಲ್ಲಿ ಬಂದ ಈ ಗುಂಪು, ಬೈಕ್ ಅಡ್ಡಗಟ್ಟಿ, ಆತನಿಂದ 7 ಸಾವಿರ ನಗದು ಕಸಿದುಕೊಂಡು ಆತನ ಮನೆಗೆ ಮೊಬೈಲ್‍ನಲ್ಲಿ ಕರೆ ಮಾಡಿಸಿ, ಆತನ ಸಹೋದರರ ಮೂಲಕ 1 ಲಕ್ಷ ರೂ. ತರಿಸಿಕೊಂಡು ನಂತರ ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದಕ್ಕೂ ಮುನ್ನ ನ.20ರಂದು ಕಂಚಿ ರಾಯಸ್ವಾಮಿ ಎಂಬಾತ ಬೈಕ್‍ನಲ್ಲಿ ತೆರಳು ತ್ತಿದ್ದಾಗ ಆತನ ಬಳಿ ಅರ್ಪಿತಾ ಡ್ರಾಪ್ ಕೇಳಿ ದ್ದಳು. ಆಕೆಯನ್ನು ಬೈಕ್‍ನಲ್ಲಿ ಕೂರಿಸಿ ಕೊಂಡು ಹೋಗುತ್ತಿದ್ದಾಗ ಈ ತಂಡ ಅಡ್ಡಗಟ್ಟಿ ಆತನ ಬಳಿ ಇದ್ದ 3 ಸಾವಿರ ನಗದು, ಮೊಬೈಲ್ ಫೋನ್ ಕಿತ್ತುಕೊಂಡಿ ದ್ದಲ್ಲದೇ, 20 ಸಾವಿರ ರೂ.ಗಳನ್ನು ತಮ್ಮ ಅಕೌಂಟ್‍ಗೆ ಹಾಕಿಸಿಕೊಂಡಿದ್ದರು. ಈ ಸಂಬಂಧ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅರಸೀಕೆರೆಯಲ್ಲಿರುವ ಜೇನುಗಲ್ಲು ಬೆಟ್ಟಕ್ಕೆ ತೆರಳುತ್ತಿದ್ದ ಹಾಸನದ ಬಟ್ಟೆ ಅಂಗಡಿ ಮಾಲೀಕ ದಿಲೀಪ್ ಅವರನ್ನು ಡಿ.22 ರಂದು ಸಂಜೆ 7 ಗಂಟೆ ಸುಮಾರಿನಲ್ಲಿ ಬಾಗೇಶಪುರ ಗ್ರಾಮದ ಹತ್ತಿರ ಅರ್ಪಿತಾ ಬೈಕಿಗೆ ಕೈ ತೋರಿ ಡ್ರಾಪ್ ಕೇಳಿದ್ದಾಳೆ. ಆಕೆಯನ್ನು ಬೈಕ್‍ನಲ್ಲಿ ಕೂರಿಸಿಕೊಂಡು ಹೋಗುವಾಗ ಕಾರಿನಲ್ಲಿ ಬಂದ ಈ ತಂಡ ಅಡ್ಡಗಟ್ಟಿ ದಿಲೀಪ್ ಮೇಲೆ ಹಲ್ಲೆ ನಡೆಸಿ ಆತನ ಬಳಿ ಇದ್ದ 2 ಸಾವಿರ ನಗದು ಮತ್ತು ಎಟಿಎಂ ಕಾರ್ಡ್, ವಾಚ್, ಮೊಬೈಲ್ ಕಿತ್ತುಕೊಂಡು ದಿಲೀಪ್‍ನನ್ನು ಕಾರಿನಲ್ಲಿ ಅಪಹರಿಸಿ ಬೆಳ್ಳೂರು ಕಡೆಗೆ ತೆರಳಿದ್ದಾರೆ. ದಿಲೀಪ್ ಮೇಲೆ ಹಲ್ಲೆ ನಡೆಸಿದ ವೇಳೆ ಈ ಗುಂಪಿನ ಓರ್ವನಿಗೆ ಗಾಯವಾಗಿದ್ದು, ಆತನಿಗೆ ಚಿಕಿತ್ಸೆ ಕೊಡಿಸಲು ಈ ತಂಡ ಬೆಳ್ಳೂರು ಆದಿಚುಂಚನಗಿರಿ ಆಸ್ಪತ್ರೆಗೆ ತೆರ ಳಿದೆ. ಈ ವೇಳೆ ಕಾರಿನಲ್ಲೇ ಲಾಕ್ ಮಾಡಿ ದಿಲೀಪ್‍ನನ್ನು ಬಿಟ್ಟು ಎಲ್ಲರೂ ಆಸ್ಪತ್ರೆ ಒಳಗೆ ಹೋದಾಗ ದಿಲೀಪ್, ಕಾರಿನ ಡೋರ್ ತೆರೆದು ಕೊಂಡು ಹೋಗಿ ಅದೇ ಆಸ್ಪತ್ರೆಯಲ್ಲಿ ದಾಖ ಲಾಗಿ ತಮ್ಮ ತಂದೆಗೆ ವಿಚಾರ ಮುಟ್ಟಿಸಿದ್ದರು. ಈ ಸಂಬಂಧ ಗಂಡಸಿ ಪೊಲೀಸ್ ಠಾಣೆಯಲ್ಲಿ ಡಕಾಯಿತಿ ಪ್ರಕರಣ ದಾಖಲಾಗಿತ್ತು.

ಚನ್ನರಾಯಪಟ್ಟಣದ ಶರತ್ ಎಂಬಾತ ನನ್ನು ಫೇಸ್‍ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದ ಅರ್ಪಿತಾ ಆತನನ್ನು ಅರಸೀಕೆರೆಗೆ ಕರೆಸಿಕೊಂಡು ಮಾಲೆಕಲ್ಲು ತಿರುಪತಿ ಬಳಿ ಆತನ ಮೇಲೆ ಗುಂಪು ಹಲ್ಲೆ ನಡೆಸಿ ಕಾರಿನಲ್ಲಿ ಹತ್ತಿಸಿಕೊಂಡು 2 ಲಕ್ಷ ರೂ.ಗಳಿಗೆ ಒತ್ತಾಯಿಸಿತ್ತು. ಆತನ ಬಳಿ ಇದ್ದ 2 ಸಾವಿರ ನಗದು ಕಸಿದಿತ್ತು. ಅದೇ ರೀತಿ ತಿಪಟೂರಿನ ಚಂದ್ರಶೇಖರ್ ಎಂಬುವರನ್ನು ಪರಿಚಯ ಮಾಡಿಕೊಂಡಿದ್ದ ಅರ್ಪಿತಾ, ಗಾಂಧಿನಗರದ ಬಳಿ ಇರುವ ತೋಟದ ಮನೆಗೆ ಕರೆಸಿಕೊಂಡಿದ್ದಳು. ಈ ವೇಳೆ ಈ ತಂಡ ಆತನ ಮೇಲೆ ಹಲ್ಲೆ ನಡೆಸಿ 3 ಲಕ್ಷ ರೂ.ಗಳಿಗೆ ಚೆಕ್ ಪಡೆದಿತ್ತು. ನಂತರದ ದಿನಗಳಲ್ಲಿ ಚಂದ್ರಶೇಖರ್‍ಗೆ ಚೆಕ್ ಹಿಂತಿರುಗಿಸಿರುವುದಾಗಿ ಈ ಆರೋಪಿ ಗಳು ಪೊಲೀಸರಲ್ಲಿ ತಿಳಿಸಿದ್ದಾರೆ. ಆದರೆ ಎರಡೂ ಪ್ರಕರಣಗಳು ದಾಖಲಾಗಿಲ್ಲ. ಶರತ್ ಮತ್ತು ಚಂದ್ರಶೇಖರ್ ಮರ್ಯಾದೆಗೆ ಅಂಜಿ ಪೊಲೀಸರಿಗೆ ದೂರು ಸಲ್ಲಿಸದೇ ಇದ್ದಿರಬಹುದು ಎಂದು ಹೇಳಲಾಗಿದೆ. ಈ ಪ್ರಕರಣಗಳ ಕುರಿತು ಕೂಡ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಹಾಸನ ಜಿಲ್ಲೆಯಲ್ಲಿ 3 ಹನಿಟ್ರ್ಯಾಪ್ ಪ್ರಕರಣಗಳು ದಾಖಲಾಗುತ್ತಿದ್ದಂತೆಯೇ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಎಸ್ಪಿ ಡಾ. ಪ್ರಕಾಶ್‍ಗೌಡ ಅವರು, ಎರಡು ಪ್ರತ್ಯೇಕ ತಂಡಗಳನ್ನು ರಚಿಸಿದ್ದರು. ಡಿವೈಎಸ್‍ಪಿ ಸದಾನಂದ ಅ.ತಿಮ್ಮಣ್ಣನವರ ಅವರ ಮಾರ್ಗ ದರ್ಶನದಲ್ಲಿ ಅರಸೀಕೆರೆ ಗ್ರಾಮಾಂತರ ಠಾಣೆಯ ಇನ್ಸ್‍ಪೆಕ್ಟರ್ ಎಸ್.ಸಿದ್ದರಾಮೇ ಶ್ವರ, ಸಬ್ ಇನ್ಸ್‍ಪೆಕ್ಟರ್ ಎಸ್.ಪಿ.ವಿನೋದ್ ರಾಜ್, ಗಂಡಸಿ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶಬ್ಬೀರ್ ಹುಸ್ಸೇನ್, ಸಿಬ್ಬಂದಿ ಗಳಾದ ಗಂಗಾಧರ್, ಹೀರಾಸಿಂಗ್, ಲೋಕೇಶ್, ಮಂಜುನಾಥ್, ರವಿ, ಮೋಹನ್ ಕುಮಾರ್, ಶೇಖರ್ ಗೌಡ ಸಿರಿಗೇರಿ, ಪ್ರಕೃದ್ದೀನ್, ವರುಣ್, ನಂಜುಂಡೇಗೌಡ, ಮಹಿಳಾ ಸಿಬ್ಬಂದಿಗಳಾದ ಪುನೀತಾ, ಹರ್ಷಿತಾ, ಕೆ.ಪಿ.ವಾಣಿಶ್ರೀ, ಚಾಲಕ ರಾದ ವಸಂತಕುಮಾರ್, ಸಿದ್ದೇಶ್, ಗೋಪಿ ಅವರುಗಳು ಈ ಆರೋಪಿಗಳ ಪತ್ತೆ ಕಾರ್ಯದಲ್ಲಿ ಕಾರ್ಯಾಚರಣೆ ನಡೆಸಿದ್ದು, ಇವರುಗಳಿಗೆ ಹಾಸನ ನಗರ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಪ್ರಮೋದ್ ಕುಮಾರ್ ಹಾಗೂ ಕಂಪ್ಯೂಟರ್ ಘಟಕದ ಫೀರ್ ಖಾನ್ ಅವರುಗಳು ತಾಂತ್ರಿಕ ಸಹಾಯ ಒದಗಿ ಸಿದ್ದು, ಅವರುಗಳನ್ನು ಪ್ರಶಂಸಿಸಿರುವ ಎಸ್ಪಿ ಪ್ರಕಾಶ್‍ಗೌಡ ಅವರು 10 ಸಾವಿರ ರೂ. ನಗದು ಬಹುಮಾನ ಘೋಷಿಸಿದ್ದಾರೆ.

Translate »