ಜ.5ರಂದು ರಮಾಗೋವಿಂದ ರಾಷ್ಟ್ರೀಯ ಪುರಸ್ಕಾರ ಪ್ರದಾನ
ಮೈಸೂರು

ಜ.5ರಂದು ರಮಾಗೋವಿಂದ ರಾಷ್ಟ್ರೀಯ ಪುರಸ್ಕಾರ ಪ್ರದಾನ

January 3, 2019

ಮೈಸೂರು: ಶ್ರೀಮತಿ ರಮಾಬಾಯಿ ಚಾರಿಟಬಲ್ ಫೌಂಡೇಷನ್, ಎಂ.ಗೋಪಿನಾಥ್ ಶೆಣೈ ಚಾರಿಟಬಲ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಜ.5ರÀಂದು ರಮಾ ಗೋವಿಂದ ರಾಷ್ಟ್ರೀಯ ಪುರಸ್ಕಾರ-2019 ಸಮಾರಂಭ ಆಯೋಜಿಸಲಾಗಿದೆ ಎಂದು ಟ್ರಸ್ಟ್‍ನ ಸದಸ್ಯ ಜಯರಾಮ ಪಾಟೀಲ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 6ಕ್ಕೆ ಮೈಸೂರಿನ ಕರ್ನಾಟಕ ಕಲಾಮಂದಿ ರದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಮತ್ತು ಲೇಖಕ ಟಿ.ಎಂ.ಕೃಷ್ಣ ಸಮಾ ರಂಭ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಎಂ.ರಮಾನಾಥ ಶೆಣೈ ದಂಪತಿ, ಎಂ. ಜಗನ್ನಾಥ ಶೆಣೈ ದಂಪತಿ ಮತ್ತು ಎಂ. ಗೋಪಿನಾಥ ಶೆಣೈ ದಂಪತಿ ಉಪಸ್ಥಿತಿ ಯಲ್ಲಿ ಸಫಾಯಿ ಕರ್ಮಚಾರಿ ಆಂದೋಲನ್'ನ ಸ್ಥಾಪಕ ಬೆಜವಾಡ ವಿಲ್ಸನ್ ಮತ್ತುಕಬೀರ್ ಸ್ಮಾರಕ ಶೋಧ ಸಂಸ್ಥಾನ’ದ ಸ್ಥಾಪಕ ಜಾನಪದ ಗಾಯಕ ಪ್ರಹ್ಲಾದ್‍ಸಿಂಗ್ ಟಿಪಾನ್ಯ ಅವರಿಗೆ ತಲಾ 5 ಲಕ್ಷ ರೂ. ನಗದಿ ನೊಂದಿಗೆ ರಮಾಗೋವಿಂದ ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಗು ವುದು ಎಂದು ತಿಳಿಸಿದರು.

ನಮ್ಮ ತಂದೆ ತಾಯಿ ಸ್ಮರಣಾರ್ಥ ಕಳೆದ 2016ರಿಂದಲೂ ಎಲೆಮರೆಯ ಕಾಯಿಯಂತೆ ಸಮಾಜದ ಹಿತಕ್ಕಾಗಿ ದುಡಿಯುತ್ತಿರುವ ಸಾಧಕÀರನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಟ್ರಸ್ಟ್‍ನ ಎಂ.ಜಗನ್ನಾಥ ಶೆಣೈ ತಿಳಿಸಿದರು.

ರಾಮೋನ್ ಮ್ಯಾಗ್ಸೆಸ್ಸೆ ಪುರಸ್ಕಾರ ಪಡೆದ ಬೆಜವಾಡ್ ವಿಲ್ಸನ್ ಅವರು ಮಲ ಹೊರುವ ಪದ್ಧತಿ ವಿರುದ್ಧ ಸತತ 35 ವರ್ಷಗಳ ಕಾಲ ಹೋರಾಟ ನಡೆಸಿ ದವರು. ಅದರಂತೆ ಜನಪದ ಗಾಯಕ ಪದ್ಮಶ್ರೀ ಪ್ರಹ್ಲಾದ್ ಸಿಂಗ್ ಟಿಪಾನ್ಯ ಅವರು ಕಬೀರರ ಬಗ್ಗೆ ಹಾಡುತ್ತಾ ದೇಶ ವಿದೇಶಗಳಲ್ಲಿಯೂ ಹಲವಾರು ಕಾರ್ಯ ಕ್ರಮ ನೀಡಿದ್ದಾರೆ. ಕಬೀರ್ ಸ್ಮಾರಕ ಶೋಧ ಸಂಸ್ಥಾನವನ್ನು ಸ್ಥಾಪಿಸಿ ಹಲವು ಕಲಾವಿ ದರನ್ನು ಹುಟ್ಟು ಹಾಕಿದ್ದು, ಇವರ ಸೇವೆ ಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದ ನಂತರ `ಸುಮಿರನ್’ ಎನ್ನುವ ಕಬೀರರೊಂದಿಗೆ ಒಂದು ಸಂಜೆ ಹಾಡುಗಳ ಕಾರ್ಯ ಕ್ರಮವನ್ನು ಪ್ರಹ್ಲಾದ್‍ಸಿಂಗ್ ಟಿಪಾನ್ಯ ಮತ್ತು ತಂಡ ನಡೆಸಿಕೊಡಲಿದೆ. ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ತಿಳಿಸಿದರು. ಟ್ರಸ್ಟ್‍ನ ಎಂ.ಗೋಪಿನಾಥ ಶೆಣೈ, ನಟ ಶಿವಾಜಿರಾವ್ ಜಾದವ್ ಗೋಷ್ಠಿಯಲ್ಲಿ ಇದ್ದರು.

Translate »