ಪ್ರಾಂಶುಪಾಲ ಡಾ. ರವಿ, ವಿಭಾಗದ ಮುಖ್ಯಸ್ಥರಾದ ಡಾ.ಪದ್ಮನಾಭರ ಸಮಯಪ್ರಜ್ಞೆ, ಎಚ್ಚರಿಕಾ ಕ್ರಮದಿಂದ ತಪ್ಪಿದ ಭಾರೀ ಅನಾಹುತ
ಮೈಸೂರು

ಪ್ರಾಂಶುಪಾಲ ಡಾ. ರವಿ, ವಿಭಾಗದ ಮುಖ್ಯಸ್ಥರಾದ ಡಾ.ಪದ್ಮನಾಭರ ಸಮಯಪ್ರಜ್ಞೆ, ಎಚ್ಚರಿಕಾ ಕ್ರಮದಿಂದ ತಪ್ಪಿದ ಭಾರೀ ಅನಾಹುತ

October 22, 2022

ಮೈಸೂರು, ಅ.21(ಎಂಟಿವೈ)- ಪ್ರಾಂಶುಪಾಲರ ಎಚ್ಚರಿಕಾ ಕ್ರಮ ಹಾಗೂ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರ ಸಮಯ ಪ್ರಜ್ಞೆಯಿಂದ ಮಹಾರಾಣಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರು ದೊಡ್ಡ ಗಂಡಾಂತ ರದಿಂದ ಪಾರಾಗಿದ್ದಾರೆ.

ಗುರುವಾರದವರೆಗೂ ಈಗ ಕುಸಿದಿ ರುವ ಭಾಗದಲ್ಲಿನ ಕಟ್ಟಡದಲ್ಲಿ ಪ್ರಯೋ ಗಾಲಯ ಹಾಗೂ ತರಗತಿಗಳಲ್ಲಿ ವಿದ್ಯಾರ್ಥಿನಿಯರು ಪಾಠ ಆಲಿಸಿದ್ದರು. ಇಂದು ಎಂದಿನಂತೆ ಪ್ರಯೋಗಾಲ ಯದಲ್ಲಿ ಶೈಕ್ಷಣಿಕ ಚಟುವಟಿಕೆಗೆ ಬಾಗಿಲು ತೆರೆಯಲಾಗಿತ್ತು.

ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಕೆ.ಪದ್ಮನಾಭ ಅವರು ಸಿಬ್ಬಂದಿ ಗಳೊಂದಿಗೆ ಬೆಳಗ್ಗೆ 10.15ಕ್ಕೆ ಬಂದು, ಪ್ರಯೋಗಾಲಯ ಒಂದು ಸುತ್ತು ಹಾಕಿದ್ದಾರೆ. ಈ ವೇಳೆ ಕೊಠಡಿಯ ಮೇಲ್ಛಾವಣಿಯಿಂದ ಗಾರೆ ಉದು ರುತ್ತಿದ್ದು, ಪ್ರಯೋಗಾಲಯದ ಗೋಡೆ ಯಲ್ಲಿ ನೀರು ಜಿನುಗುತ್ತಿದ್ದದ್ದನ್ನು ಗಮನಿಸಿದ್ದಾರೆ. ಕೂಡಲೇ ಪ್ರಾಂಶು ಪಾಲ ಡಾ.ಡಿ.ರವಿ ಅವರನ್ನು ಕರೆದು ಕೊಂಡು ಬಂದು ಪ್ರಯೋಗಾಲಯದ ದುಸ್ಥಿತಿಯನ್ನು ತೋರಿಸಿದ್ದಾರೆ. ಪರಿ ಸ್ಥಿತಿಯ ಗಂಭೀರತೆ ಅರಿತ ಪ್ರಾಂಶು ಪಾಲರು ಬೆಳಗ್ಗೆ 10.28ರಿಂದ 10.30 ರೊಳಗೆ ಪ್ರಯೋಗಾಲಯದ ಮೇಲ್ಛಾ ವಣಿಯ ಫೋಟೋ ತೆಗೆದುಕೊಂಡಿ ದ್ದಾರೆ. ಅಲ್ಲದೆ, ತತ್‍ಕ್ಷಣದಿಂದಲೇ ಪ್ರಯೋಗಾಲಯಕ್ಕೆ ಯಾರೂ ಪ್ರವೇಶಿ ಸದಂತೆ ಸೂಚನೆ ನೀಡಿದ್ದಾರೆ. ಈ ವೇಳೆ ಪ್ರಯೋಗಾಲಯದಲ್ಲಿ ಸೋರಿದ್ದ ನೀರು ಒರೆಸಲು ಅಟೆಂಡರ್ ಬಂದಿ ದ್ದಾರೆ. ಕೂಡಲೇ ಅವರನ್ನು ಹೊರಗೆ ಕಳುಹಿಸಿ, 10.35ರ ವೇಳೆಗೆ ಪ್ರಯೋ ಗಾಲಯದ ಕೊಠಡಿ ಬಾಗಿಲಿಗೆ ಬೀಗ ಹಾಕಿ, ತಮ್ಮ ಕೊಠಡಿಗೆ ಬಂದು, ಕಾಲೇಜು ಆಡಳಿತ ಮಂಡಳಿಯ ಅಧ್ಯ ಕ್ಷರೂ ಆದ ಶಾಸಕ ಎಲ್.ನಾಗೇಂದ್ರ ಅವರಿಗೆ ಕರೆ ಮಾಡಿ ಪರಿಸ್ಥಿತಿಯ ಗಂಭೀರತೆ ಬಗ್ಗೆ ಮಾಹಿತಿ ನೀಡಿದ್ದಾರೆ.

7 ನಿಮಿಷದಲ್ಲಿ ಕುಸಿತ: ಪ್ರಯೋ ಗಾಲಯ ಕೊಠಡಿ ಬಾಗಿಲಿಗೆ ಬೀಗ ಹಾಕಿದ 7 ನಿಮಿಷದಲ್ಲಿ ಕಟ್ಟಡ ಭಾಗಶಃ ಕುಸಿದಿದೆ. ಪ್ರಾಂಶುಪಾಲರು ಹಾಗೂ ವಿಭಾಗದ ಮುಖ್ಯಸ್ಥರು ಸಮಯಪ್ರಜ್ಞೆ ವಹಿಸಿ ಎಚ್ಚರ ವಹಿಸದಿದ್ದರೆ ಪ್ರಯೋಗಾಲಯದಲ್ಲಿ ಸಾಮಾನ್ಯವಾಗಿ 40 ವಿದ್ಯಾರ್ಥಿನಿಯರು ಇರುತ್ತಿದ್ದರು. ಈ ವೇಳೆ ಕಟ್ಟಡ ಕುಸಿದಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು.

ಕೊಠಡಿಗೆ ಬೀಗ ಹಾಕಿಸಿದೆ: ಪ್ರಾಂಶು ಪಾಲ ಡಾ.ಡಿ.ರವಿ ಮಾತನಾಡಿ, ಪ್ರಯೋ ಗಾಲಯದ ಕಟ್ಟಡವನ್ನು ಬೆಳಗ್ಗೆ ವೀಕ್ಷಣೆ ಮಾಡಿದಾಗ ಅಪಾಯ ಸ್ಥಿತಿ ಕಂಡು ಬಂದಿತು. ಕೂಡಲೇ ಕಟ್ಟಡದ ಸ್ಥಿತಿಯನ್ನು ಮೊಬೈಲ್‍ನಲ್ಲಿ ಫೋಟೋ ತೆಗೆದು ಕೊಂಡು, ಕೂಡಲೇ ರಸಾಯನಶಾಸ್ತ್ರದ ಪ್ರಯೋಗಾಲಯಕ್ಕೆ ಬೀಗ ಹಾಕುವಂತೆ ಸೂಚನೆ ನೀಡಿದೆ. ಬಳಿಕ ಶಾಸಕರಿಗೆ ಕರೆ ಮಾಡಿ ವಸ್ತುಸ್ಥಿತಿ ತಿಳಿಸುತ್ತಿದ್ದ ವೇಳೆಯೇ ಕಟ್ಟಡ ಕುಸಿದಿದೆ. ಬೀಗ ಹಾಕಿದ 7 ನಿಮಿಷದಲ್ಲಿ ಕಟ್ಟಡ ಕುಸಿದಿದೆ. ಒಂದು ವೇಳೆ ಪ್ರಯೋಗಾಲಯ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಕುಸಿತವಾಗಿದ್ದರೆ, ದೊಡ್ಡ ಪ್ರಮಾಣದ ಅನಾಹುತ ಸಂಭವಿ ಸುತ್ತಿತ್ತು. ಅದೃಷ್ಟವಶಾತ್ ಯಾರಿಗೂ ತೊಂದರೆ ಯಾಗಿಲ್ಲ ಎಂದು ನಿಟ್ಟುಸಿರು ಬಿಟ್ಟರು.

ಅಂದಾಜು 15 ಲಕ್ಷ ನಷ್ಟ: ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಕೆ. ಪದ್ಮನಾಭ ಮಾತನಾಡಿ, ಬೆಳಗ್ಗೆ ಪ್ರಯೋಗಾಲಯದ ಬಾಗಿಲು ತೆರೆದಾಗ ನೀರು ಹಾಗೂ ಮಣ್ಣು ಉದುರಿತ್ತು. ಮೇಲ್ಛಾವಣಿಯಿಂದ ಇನ್ನು ಗಾರೆ ಉದುರುತ್ತಿತ್ತು. ಅಪಾಯದ ಸ್ಥಿತಿ ಇದೆ ಎಂದು ಅರಿತು, ಪ್ರಾಂಶುಪಾಲರನ್ನು ಕರೆದುಕೊಂಡು ಬಂದು ತೋರಿಸಿದಾಗ ಪ್ರಯೋಗಾಲಯ ಬಂದ್ ಮಾಡುವಂತೆ ಸೂಚನೆ ನೀಡಿದರು. ಎಲ್ಲಾ ಸಿಬ್ಬಂದಿ ಗಳನ್ನು ಹೊರಗೆ ಕಳುಹಿಸಿ ಬೀಗ ಹಾಕ ಲಾಯಿತು. ಕೆಲವೇ ನಿಮಿಷದಲ್ಲಿ ಕಟ್ಟಡ ಕುಸಿಯಿತು. ಪ್ರಯೋಗಾಲಯದಲ್ಲಿ 15-20 ಲಕ್ಷ ರೂ. ಮೌಲ್ಯದ ಉಪಕರಣ ಗಳಿವೆ. ಅವುಗಳು ಯಾವ ಸ್ಥಿತಿಯಲ್ಲಿವೆ ಎಂದು ತಿಳಿದಿಲ್ಲ ಎಂದರು.

ಬೆಚ್ಚಿಬಿದ್ದು, ಚೀರಿದ ವಿದ್ಯಾರ್ಥಿನಿಯರು: ವಿಜ್ಞಾನ ಕಾಲೇಜಿನ ಭಾಗಶಃ ಕಟ್ಟಡ ಕುಸಿಯುತ್ತಿದ್ದಂತೆಯೇ ಸಮೀಪದಲ್ಲಿ ಗುಂಪುಗೂಡಿ ಮಾತನಾಡುತ್ತಿದ್ದ ಕಲಾ ಕಾಲೇಜಿನ ವಿದ್ಯಾರ್ಥಿನಿಯರು ಭಯ ದಿಂದ ಚೀರಿದರು. ಕಲಾ ಕಾಲೇಜಿನ ಪ್ರಾಂಗಣದಲ್ಲಿ ಸದಾ ನೂರಾರು ವಿದ್ಯಾರ್ಥಿ ನಿಯರು ಕುಳಿತುಕೊಂಡು ಮಾತನಾಡು ವುದರಿಂದ ಕಟ್ಟಡ ಬಿದ್ದ ಶಬ್ದಕ್ಕೆ ಬೆಚ್ಚಿದ್ದಾರೆ. ವಿದ್ಯಾರ್ಥಿನಿಯರು ಚೀರಿದ ಶಬ್ದಕ್ಕೆ ಸಿಬ್ಬಂದಿ ಆತಂಕಕ್ಕೀಡಾಗಿದ್ದಾರೆ. ಅವಶೇಷಗಳಡಿ ವಿದ್ಯಾರ್ಥಿನಿಯರು ಸಿಲುಕಿರಬಹುದು ಎಂಬ ಶಂಕೆ ತಕ್ಷಣಕ್ಕೆ ವ್ಯಕ್ತವಾಗಿದೆ. ಪ್ರಾಂಶುಪಾಲರು ಪ್ರಯೋ ಗಾಲಯಕ್ಕೆ ಬೀಗ ಹಾಕಿದ ನಂತರ ಕಟ್ಟಡ ಕುಸಿದಿದೆ ಎಂದು ಹೇಳಿದರೂ ಕೆಲಕಾಲ ಆತಂಕ ಮನೆ ಮಾಡಿತ್ತು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಿಂದ ಅವಶೇಷಗಳಡಿ ಯಾರೂ ಸಿಕ್ಕಿ ಹಾಕಿ ಕೊಂಡಿಲ್ಲ ಎಂಬುದು ದೃಢಪಟ್ಟ ನಂತರ ಆತಂಕ ನಿವಾರಣೆಯಾಯಿತು.

ಮೊಬೈಲ್‍ನಲ್ಲಿ ಚಿತ್ರೀಕರಣ: ಕಾಲೇಜಿನ ಉಪನ್ಯಾಸಕರೊಬ್ಬರು ಗೇಟ್ ಬಳಿ ಬರುತ್ತಿದ್ದಾಗ ಕಟ್ಟಡದಿಂದ ಮಣ್ಣು ಉದುರುತ್ತಿದ್ದುದ್ದನ್ನು ಗಮನಿಸಿದ್ದಾರೆ. ಕೂಡಲೇ ಅವರು ಸಹ ಮೊಬೈಲ್‍ನಲ್ಲಿ ಫೋಟೋ ಕ್ಲಿಕ್ಕಿಸಲು ಮುಂದಾ ಗುತ್ತಿದ್ದಂತೆ ಕಟ್ಟಡ ಕುಸಿಯ ಲಾರಂಭಿಸಿದೆ. 10 ಸೆಕೆಂಡ್‍ನಲ್ಲಿ ಕಟ್ಟಡ ಕುಸಿದಿದೆ. ಕಟ್ಟಡ ಕುಸಿತದ ಭಯಾನಕ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

Translate »