ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಿಷೇಧ: ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಆದೇಶ
ಮೈಸೂರು

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಿಷೇಧ: ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಆದೇಶ

December 16, 2019

ಮೈಸೂರು,ಡಿ.15(ಎಸ್‍ಪಿಎನ್)- ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ವಿರೋ ಧಿಸಿ ಡಿ.16ರಂದು ಬೆಳಿಗ್ಗೆ 6ರಿಂದ ರಾತ್ರಿ 12 ಗಂಟೆವರೆಗೆ ಮೈಸೂರಲ್ಲಿ ಯಾವುದೇ ಪ್ರತಿಭಟನೆ, ಸಭೆ-ಸಮಾರಂಭ, ಮೆರವಣಿಗೆ ಮತ್ತು ಬೈಕ್‍ರ್ಯಾಲಿ ನಡೆಸುವುದನ್ನು ನಿಷೇಧಿ ಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಭಾನುವಾರ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲೂ ವಿವಿಧ ಸಂಘ-ಸಂಸ್ಥೆ ಗಳು ಡಿ.16ರಂದು ಮಧ್ಯಾಹ್ನ 2 ಗಂಟೆಗೆ ಪುರಭವನದ ಬಳಿ ಪ್ರತಿಭಟನೆ ನಡೆ ಸುವ ಬಗ್ಗೆ ಮಾಹಿತಿ ಬಂದಿದ್ದು, ದೇಶದ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆ ವೇಳೆ ಗಲಾಟೆ ಉಂಟಾಗಿ, ಹಿಂಸಾ ಚಾರಕ್ಕೆ ತಿರುಗಿ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟಾಗುವುದರ ಜೊತೆ ಪ್ರಾಣ ಹಾನಿ ಸಹ ಸಂಭವಿಸಿದೆ. ಈ ಪ್ರಯುಕ್ತ ಮೈಸೂರು ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಯಾವುದೇ ರೀತಿಯ ಪ್ರತಿಭಟನೆ, ಸಭೆ-ಸಮಾರಂಭ, ಮೆರವಣಿಗೆ, ಬೈಕ್ ರ್ಯಾಲಿ ನಡೆಸಿದಲ್ಲಿ ಕಾನೂನು ಸುವ್ಯವಸ್ಥೆಗೆ ಹದಗೆಡುವ ಸಂಭವವಿದೆ. ಆದ್ದರಿಂದ ಪುರಭವನದ ಆವರಣವನ್ನು ಹೊರತುಪಡಿಸಿ, ಪುರಭವನದ ಮುಂಭಾಗದ ಅಶೋಕರಸ್ತೆ, ಎ.ವಿ.ರಸ್ತೆ, ಮಹಾವೀರ ವೃತ್ತ, ಗೌಂಧಿಚೌಕದ 500 ಮೀಟರ್ ಸುತ್ತಲೂ ಯಾವುದೇ ಸಭೆ-ಸಮಾರಂಭ, ಪ್ರತಿಭಟನೆ, ಬೈಕ್ ರ್ಯಾಲಿ ನಡೆಸುವುದನ್ನು ಪೊಲೀಸ್ ಆಕ್ಟ್ ಕಲಂ 35ರ ಪ್ರಕಾರ ನಿಷೇ ಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »