ಆಸ್ಪತ್ರೆಯಿಂದ ಸಿದ್ದರಾಮಯ್ಯ ಡಿಸ್ಚಾರ್ಜ್
ಮೈಸೂರು

ಆಸ್ಪತ್ರೆಯಿಂದ ಸಿದ್ದರಾಮಯ್ಯ ಡಿಸ್ಚಾರ್ಜ್

December 16, 2019

ಬೆಂಗಳೂರು, ಡಿ.15- ಕಳೆದ 5 ದಿನ ಗಳಿಂದ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಡಿಸ್ಚಾರ್ಜ್ ಆಗಿದ್ದಾರೆ. ಈ ಸಂದರ್ಭದಲ್ಲಿ ಆಸ್ಪ ತ್ರೆಯ ವೈದ್ಯರ ಜೊತೆಗೆ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ನಾನೀಗ ಸಂಪೂರ್ಣ ಗುಣಮುಖ ನಾಗಿದ್ದೇನೆ, ಒಂದು ವಾರಗಳ ಕಾಲ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಇನ್ನೊಂದು ವಾರ ಮನೆಯಲ್ಲಿದ್ದು ನಂತರ ಎಂದಿನಂತೆ ರಾಜಕೀಯ ಜೀವನಕ್ಕೆ ಮರಳುವುದಾಗಿ ಹೇಳಿದರು.

ನನಗೆ 2000ನೇ ಇಸವಿ ಆಗಸ್ಟ್ ತಿಂಗ ಳಲ್ಲಿ ಎರಡೂ ರಕ್ತನಾಳಗಳು ಬ್ಲಾಕ್ ಆಗಿ ದ್ದವು, ಆಗ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ದೆಹಲಿ ಆಸ್ಪತ್ರೆಯಲ್ಲಿ ಆಂಜಿಯೊಪ್ಲಾಸ್ಟಿ ಮಾಡಿಸಿ ಸ್ಟಂಟ್ ಅಳ ವಡಿಸಲಾಗಿತ್ತು. 19 ವರ್ಷಗಳ ನಂತರ 2 ರಕ್ತನಾಳಗಳಲ್ಲಿ ಒಂದು ರಕ್ತನಾಳ ಮತ್ತೆ ಶೇ.95ರಷ್ಟು ಬ್ಲಾಕ್ ಆಗಿತ್ತು. ಆಂಜಿ ಯೊಪ್ಲಾಸ್ಟಿ ಚಿಕಿತ್ಸೆ ಮಾಡಿಸಿ ಎಂದು ವೈದ್ಯರು ಹೇಳಿದರು.

ಅದರಂತೆ ಚಿಕಿತ್ಸೆ ಪಡೆದು ರಕ್ತನಾಳ ಬ್ಲಾಕ್ ಆಗಿದ್ದನ್ನು ನಿವಾರಿಸಿ ರಕ್ತ ಚಲನೆಯಾಗು ವಂತೆ ಮಾಡಿದ್ದಾರೆ. ನಂತರ ಸ್ಟಂಟ್ ಅಳವಡಿಸಿದ್ದಾರೆ. ನಾನೀಗ ಸಂಪೂರ್ಣ ಗುಣಮುಖ ನಾಗಿದ್ದು ಯಾರೂ ಯಾವುದೇ ಕಳವಳಪಡುವ ಅಗತ್ಯವಿಲ್ಲ ಎಂದರು. ರಾಜಕಾರಣ ದಲ್ಲಿ ಯಾರೂ ಶಾಶ್ವತವಾಗಿ ವೈರಿಗಳೂ ಇರುವುದಿಲ್ಲ, ಸ್ನೇಹಿತರೂ ಇರುವುದಿಲ್ಲ. ಮನುಷ್ಯತ್ವದಿಂದ ಎಲ್ಲಾ ಪಕ್ಷದವರು ನನ್ನನ್ನು ನೋಡಲು ಬಂದಿದ್ದಾರೆ. ಅವರಿಗೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ನಾನು ಗುಣಮುಖನಾಗಲೆಂದು ಹಲವರು ಪ್ರಾರ್ಥನೆ ಮಾಡಿ ದ್ದಾರೆ. ಪ್ರಸಾದ ತಂದುಕೊಟ್ಟಿದ್ದಾರೆ, ಅವರ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳು ಎಂದರು.

ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ಸಲ್ಲಿಸಿದರು. ಬಳಿಕ ನಾಟಿಕೋಳಿ ಸಾರಿನ ರುಚಿ ನೆನಪಿಸಿಕೊಂಡು, ನಿತ್ಯವೂ ನಾಟಿಕೋಳಿ ಸಾರು ತಂದುಕೊಟ್ಟ ವೈದ್ಯರ ಪತ್ನಿಗೂ ಧನ್ಯವಾದ ಹೇಳಿದರು. ಸಿದ್ದರಾಮಯ್ಯ ಅವರು ಆಸ್ಪತ್ರೆಯಲ್ಲಿದ್ದ 5 ದಿನವೂ ಅವರಿಗೆ ಮನೆ ಊಟ ತಂದುಕೊಟ್ಟಿದ್ದು ಆಸ್ಪತ್ರೆಯ ವೈದ್ಯ ಡಾ.ನಾರಾಯಣಸ್ವಾಮಿ ಅವರ ಪತ್ನಿ. ಈ ವಿಚಾರ ವನ್ನು ಪತ್ರಿಕಾಗೋಷ್ಠಿಯಲ್ಲಿ ಉಲ್ಲೇಖಿಸಿದ ಸಿದ್ದರಾಮಯ್ಯ, ಡಾ.ನಾರಾಯಣಸ್ವಾಮಿ ಅವರ ಪತ್ನಿಗೆ ಧನ್ಯವಾದ ಸಲ್ಲಿಸಿದರು. ಅಲ್ಲದೆ ಪಕ್ಷಾತೀತವಾಗಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಎಲ್ಲಾ ರಾಜಕೀಯ ಮುಖಂಡರಿಗೂ ಧನ್ಯವಾದ ಸಲ್ಲಿಸಿದರು.

Translate »