ಬೆಮೆಲ್ ಕಾರ್ಖಾನೆಯ ಆವರಣ ದಲ್ಲಿ ಹಾಡಹಗಲೇ ಜೋಡಿ ಚಿರತೆ ಪ್ರತ್ಯಕ್ಷ
ಮೈಸೂರು

ಬೆಮೆಲ್ ಕಾರ್ಖಾನೆಯ ಆವರಣ ದಲ್ಲಿ ಹಾಡಹಗಲೇ ಜೋಡಿ ಚಿರತೆ ಪ್ರತ್ಯಕ್ಷ

December 16, 2019

ಮೈಸೂರು, ಡಿ.15(ಎಂಟಿವೈ)-ಮೈಸೂರಿನ ಬೆಮೆಲ್ ಕಾರ್ಖಾನೆಯ ಆವರಣ ದಲ್ಲಿ ಹಾಡಹಗಲೇ ಜೋಡಿ ಚಿರತೆಗಳು ಪ್ರತ್ಯಕ್ಷವಾಗಿ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿ ಸಿದೆ. ಬೆಮೆಲ್ ಆವರಣ ದಲ್ಲಿ ಚಿರತೆ ಹಾವಳಿ ಹೆಚ್ಚಾ ಗುತ್ತಿದ್ದು, ಕಳೆದ 3 ವರ್ಷ ದಿಂದ 4 ಚಿರತೆಗಳನ್ನು ಸೆರೆ ಹಿಡಿದು ಕಾಡಿಗೆ ಬಿಡಲಾ ಗಿದೆ. ಆದರೂ ಮತ್ತೆ ಮತ್ತೆ ಚಿರತೆ ಪ್ರತ್ಯಕ್ಷವಾಗಿ ಬೆಮೆಲ್ ಸಿಬ್ಬಂದಿ ಹಾಗೂ ಅಲ್ಲಿನ ವಸತಿನಿಲಯಗಳಲ್ಲಿ ವಾಸಿ ಸುತ್ತಿರುವವರಿಗೆ ಭಯದ ವಾತಾವರಣ ಉಂಟು ಮಾಡಿದೆ. ಕಳೆದ 15 ದಿನದ ಹಿಂದಷ್ಟೇ ಬೆಮೆಲ್ ಆವರಣದಲ್ಲಿ ಇಡಲಾಗಿದ್ದ ಬೋನ್‍ಗೆ ನಾಲ್ಕು ವರ್ಷದ ಗಂಡು ಚಿರತೆಯೊಂದು ಬಿದ್ದಿತ್ತು. ಇದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಎರಡು ದಿನಗಳ ಹಿಂದೆ ಬೆಮೆಲ್ ಆವರಣದ ಖಾಲಿ ಜಾಗದ ಮಣ್ಣಿನ ರಸ್ತೆಯಲ್ಲಿ 2 ಚಿರತೆಗಳು ಹಾಡಹಗಲೇ ರಾಜಾರೋಷವಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಕುಳಿತುಕೊಂಡು ಮತ್ತೆ ಆತಂಕ ಉಂಟು ಮಾಡಿವೆ.

ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ರಸ್ತೆಯ ಮೇಲೆ ಕುಳಿತ್ತಿದ್ದ ಎರಡೂ ಚಿರತೆಗಳ ದೃಶ್ಯ ಸಮೀಪದಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸುಮಾರು ಮೂರು ನಿಮಿಷ ಆ ಚಿರತೆಗಳು ಅಲ್ಲಿಯೇ ಕುಳಿತ್ತಿದ್ದು ನಂತರ ಪಕ್ಕದಲ್ಲಿಯೇ ಇದ್ದ ಪೊದೆಗೆ ತೆರಳಿರುವುದು ವೀಡಿಯೋದಲ್ಲಿ ದಾಖಲಾಗಿದೆ. ಡಿಸಿಎಫ್‍ಗಳಾದ ಅಲೆಕ್ಸಾಂಡರ್ ಹಾಗೂ ಡಾ.ಕೆ.ಸಿ.ಪ್ರಶಾಂತ್ ಅವರ ಸೂಚನೆ ಮೇರೆಗೆ ಆರ್‍ಎಫ್‍ಓ ದೇವರಾಜು ಸ್ಥಳ ಪರಿಶೀಲನೆ ಮಾಡಿದ್ದು, ಸಿಸಿ ಟಿವಿ ಫುಟೇಜ್ ಪರಿಶೀಲಿಸಿ ಆ ಸ್ಥಳದಲ್ಲಿ ಬೋನ್ ಇಡಲು ಕ್ರಮ ಕೈಗೊಂಡಿದ್ದಾರೆ.

 

Translate »