ಶಾಸಕ ರಾಮದಾಸ್‍ರಿಂದ ಬೆಮೆಲ್ ನಗರದಲ್ಲಿ ಸ್ವಚ್ಛತಾ ಅಭಿಯಾನ
ಮೈಸೂರು

ಶಾಸಕ ರಾಮದಾಸ್‍ರಿಂದ ಬೆಮೆಲ್ ನಗರದಲ್ಲಿ ಸ್ವಚ್ಛತಾ ಅಭಿಯಾನ

November 6, 2018

ಮೈಸೂರು:  ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಪಾಲಿಕೆಯ 63ನೇ ವಾರ್ಡ್ ವ್ಯಾಪ್ತಿಯ ಬೆಮೆಲ್ ನಗರದಲ್ಲಿ ಸ್ಥಳೀಯರೊಂದಿಗೆ ಸೇರಿ ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಗಮನ ಸೆಳೆದರು.

ಬೆಮಲ್ ನಗರದ ಗಣಪತಿ ದೇವಾಲಯದ ಬಳಿ ಯಿಂದ ಸ್ವಚ್ಛತಾ ಅಭಿಯಾನ ಆರಂಭಿಸಿದ ಶಾಸಕ ಎಸ್.ಎ.ರಾಮದಾಸ್ ಅವರು ಪಾಲಿಕೆ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಕಾರ್ಯಕರ್ತರೊಂದಿಗೆ ವಿವಿಧ ರಸ್ತೆಗಳಲ್ಲಿ, ಉದ್ಯಾನವನಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಇದೇ ವೇಳೆ ಮಾತನಾಡಿದ ಎಸ್.ಎ. ರಾಮದಾಸ್ ಅವರು, ಈಗಾಗಲೇ ಸ್ವಚ್ಛತಾ ಅಭಿಯಾನ ಕ್ಷೇತ್ರದಾದ್ಯಂತ ಆರಂಭಿಸಲಾಗಿದ್ದು, ಒಂದೊಂದು ಬಡಾವಣೆಯನ್ನು ಅಥವಾ ವಾರ್ಡ್‍ಗಳನ್ನು ಆಯ್ಕೆ ಮಾಡಿಕೊಂಡು ಸ್ವಚ್ಛತೆಯನ್ನು ನಡೆಸಲಾಗುತ್ತಿದೆ. ಪಾರ್ಕ್ ಗಳಲ್ಲಿ ಬಿದ್ದಿರುವ ಮರ-ಗಿಡದ ಎಲೆಗಳನ್ನು ಬಳಸಿ ಕೊಂಡು ಅದೇ ಪಾರ್ಕ್‍ನಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಉದ್ದೇಶದಿಂದ ಅಲ್ಲಿಯೇ ಗುಂಡಿಯನ್ನು ತೆಗೆದು ಆ ಗುಂಡಿಗೆ ಎಲೆಗಳನ್ನು ತುಂಬು ವಂತಹ ಕೆಲಸವನ್ನು ಇಂದಿನಿಂದ ಪ್ರಾರಂಭ ಮಾಡಿದ್ದೇವೆ. ಕೆಲವೆಡೆ ಪೌರಕಾರ್ಮಿಕರ ಸಂಖ್ಯೆ ಕಡಿಮೆ ಇರುವುದರಿಂದ ಪೂರ್ಣ ಪ್ರಮಾಣದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಗತ್ಯಕ್ಕನುಗುಣ ವಾಗಿ ಪೌರಕಾರ್ಮಿಕರನ್ನು ನಿಯೋಜಿಸಬೇಕು. ಈ ಹಿನ್ನೆಲೆಯಲ್ಲಿ ನಾವಾಗಿಯೇ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕೆ.ಆರ್.ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಆರಂಭಿಸಿರುವ ಸ್ವಚ್ಛತಾ ಅಭಿಯಾನದೊಂದಿಗೆ ವಾರ್ಡ್ ಗಳ ವ್ಯಾಪ್ತಿ, ಮನೆಗಳ ಸಂಖ್ಯೆ, ರಸ್ತೆ, ಉದ್ಯಾನವನ ಸೇರಿ ದಂತೆ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿ ಯಾವ ವಾರ್ಡ್‍ಗೆ ಪೌರಕಾರ್ಮಿಕರ ಕೊರತೆಯಿದೆ ಎನ್ನುವುದನ್ನು ಅವಲೋಕಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸ್ವಚ್ಛತಾ ಕಾರ್ಯ ಇನ್ನಷ್ಟು ಪರಿಣಾಮಕಾರಿ ಯಾಗಿ ನಡೆಯುತ್ತದೆ. ಅಭಿಯಾನ ಮುಗಿದ ನಂತರ ನಾವು ಕಸ ರಹಿತ ಅಡುಗೆ ಮನೆ ಎಂಬ ಹೊಸ ಯೋಜನೆಯನ್ನು ನಮ್ಮ ಕೃಷ್ಣರಾಜ ಕ್ಷೇತ್ರದಲ್ಲಿ ತರಬೇಕೆಂಬ ಉದ್ದೇಶ ವನ್ನು ಇಟ್ಟುಕೊಂಡಿದ್ದೇವೆ. ಕಸ ಉತ್ಪತ್ತಿಯಾಗುವ ಮೂಲದಿಂದಲೇ ವೈಜ್ಞಾನಿಕವಾಗಿ ವಿಲೇವಾರಿ ಮಾಡುವು ದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಮನೆಯೊಳಗೆ ಆ ಕಸವನ್ನು ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬ ವಿಶೇಷತೆಯನ್ನು ಜಾರಿಗೆ ತರಬೇಕೆಂಬ ಒಂದು ಚಿಂತನೆಯನ್ನು ಇಟ್ಟುಕೊಂಡು ನಾವು ಪ್ರತಿ ಭಾನುವಾರ ದಂದು ಸ್ವಚ್ಛತಾ ಅಭಿಯಾನ ಕೈಗೊಂಡಿದ್ದೇವೆ ಎಂದು ಶಾಸಕ ರಾಮದಾಸ್ ಹೇಳಿದರು.

Translate »