ಮೈಸೂರಲ್ಲಿ ಹೆಲಿ ಟೂರಿಸಂ ಆರಂಭವಾಗಬೇಕು: ಪ್ರತಾಪ್ ಸಿಂಹ
ಮೈಸೂರು

ಮೈಸೂರಲ್ಲಿ ಹೆಲಿ ಟೂರಿಸಂ ಆರಂಭವಾಗಬೇಕು: ಪ್ರತಾಪ್ ಸಿಂಹ

November 6, 2018

ಮೈಸೂರು: ಯೋಗದ ಮೂಲಕ ವಿಶ್ವ ವಿಖ್ಯಾತಿ ಗಳಿಸಿರುವ ಮೈಸೂರಿನಲ್ಲಿ ಹೆಲಿ ಟೂರಿಸಂ ಆರಂಭಗೊಳ್ಳಬೇಕು ಎಂದು ಸಂಸದ ಪ್ರತಾಪ ಸಿಂಹ ಅವರು ಇಂದಿಲ್ಲಿ ಸಲಹೆ ನೀಡಿದರು.

ಮೈಸೂರಿನ ವಿಜಯನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೀ ಶಕ್ತಿ ಭವನದಲ್ಲಿ ರಾಜ್ಯ ಸರಕಾರ, ರಾಷ್ಟ್ರೀಯ ಆಯುಷ್ ಅಭಿಯಾನ, ಜಿಲ್ಲಾ ಪಂಚಾಯತ್ ಮತ್ತು ಆಯುಷ್ ಇಲಾಖೆ ಸಹಯೋಗದಲ್ಲಿ ಸೋಮವಾರ ಬೆಳಗ್ಗೆ ಏರ್ಪಡಿಸಿದ್ದ 3ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಉಚಿತ ಆಯುರ್ವೇದ ಸ್ವಾಸ್ಥ್ಯ ಸಂರಕ್ಷಣಾ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಆಯುರ್ವೇದ ಸೇರಿದಂತೆ ನಾನಾ ವೈದ್ಯಕೀಯ ಪದ್ಧತಿಯ ಮೂಲಕ ಚಿಕಿತ್ಸೆ ಪಡೆಯಲು ನೆರೆ ರಾಜ್ಯ ಕೇರಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ತೆರಳುತ್ತಾರೆ. ಅದೇ ರೀತಿ ಮೈಸೂರಿನಲ್ಲಿಯೂ ಸಹ ನಾನಾ ವೈದ್ಯಕೀಯ ಪದ್ಧತಿಗಳ ಚಿಕಿತ್ಸಾ ಸೌಲಭ್ಯ ಸಿಕ್ಕರೆ ಮೈಸೂರು ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಲಿ ಟೂರಿಸಂನಿಂದ ಗುರು ತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಹಿತ್ತಲ್ಲ ಗಿಡ ಮದ್ದಲ್ಲ ಎಂಬ ನಾಣ್ಣುಡಿ ಯಂತೆ ನಮ್ಮ ಹಿತ್ತಲ್ಲಿನ ಕೆಲವು ಔಷ ಧೀಯ ಸಸ್ಯಗಳ ಬಗ್ಗೆ ನಮಗೆ ಅರಿವು ಇರಲಿಲ್ಲ. ಇದರಿಂದ ನಮ್ಮ ವೈದ್ಯ ಪದ್ಧ ತಿಯ ಮಹತ್ವ ಮತ್ತು ಪಾತ್ರದ ಬಗ್ಗೆ ಹೆಚ್ಚು ತಿಳಿದುಕೊಳ್ಳುವತ್ತ ಗಮನಹರಿಸಲಿಲ್ಲ. ಪ್ರಧಾನಿ ಮೋದಿಯವರ ಸರಕಾರ ಭಾರ ತೀಯ ವೈದ್ಯ ಪದ್ಧತಿಯ ಮಹತ್ವ ಅರಿತು ಮೊದಲ ಬಾರಿಗೆ ಆಯುಷ್ ಸಚಿವಾಲಯ ತೆರೆದು ನಮ್ಮ ಆಯುರ್ವೇದ ಪದ್ಧತಿಯ ವೈದ್ಯಕೀಯ ಚಿಕಿತ್ಸಾ ಕ್ರಮಗಳಿಗೆ ಉತ್ತೇಜನ ನೀಡುತ್ತಿದೆ ಎಂದ ಅವರು, ಅನೇಕ ವಿದ್ಯಾರ್ಥಿಗಳು ಸರಕಾರಿ ಕೆಲಸ ಕ್ಕಾಗಿಯೇ ಪರದಾಡುತ್ತಾರೆ. ಆದರೆ, ಆಯುರ್ವೇದ ವೈದ್ಯಕೀಯ ಶಿಕ್ಷಣ ಪಡೆದವರು ಸರಕಾರಿ ಕೆಲಸ ಸಿಗಲಿಲ್ಲವಲ್ಲ ಎಂಬ ಬೇಸರ ಹೊರಹಾಕಿ ತಾವೇ ಸ್ವತಃ ಕ್ಲಿನಿಕ್‍ಗಳನ್ನು ತೆರೆಯಿರಿ. ನಮ್ಮ ವೈದ್ಯಕೀಯ ಪದ್ಧತಿಗೆ ನಮ್ಮ ದೇಶದಲ್ಲಿ ಉತ್ತಮ ಮಾರುಕಟ್ಟೆ ದೊರೆತರೆ ಮಾತ್ರ ಅದು ವಿದೇಶಗಳಿಗೆ ವಿಸ್ತಾರವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಚಂದ್ರಿಕಾ ಸುರೇಶ್, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ನಗರ ಪಾಲಿಕೆ ಸದಸ್ಯ ಸುಬ್ಬಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಕೆ.ರಾಧಾ, ಸರಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಗೋಪಿನಾಥ್, ವೇದಾವತಿ ಇದ್ದರು.

ಕೆಲ ಪರಿಸವಾದಿಗಳು ಮರ ಕಡಿಯ ಬಾರದು ಎಂದು ಅನಗತ್ಯವಾಗಿ ಬೊಬ್ಬೆ ಹೊಡೆಯುತ್ತಾರೆ. ಅಂತವರು ಎಷ್ಟು ಮರಗಳನ್ನು ನೆಟ್ಟಿದ್ದಾರೆ ಎಂದು ಪ್ರಶ್ನಿಸಿದ ಸಂಸದ ಪ್ರತಾಪ ಸಿಂಹ ಅವರು, ಸಂಪೂರ್ಣ ಕೇಂದ್ರ ಸರಕಾರದ ಅನುದಾನದಲ್ಲಿ ಮೈಸೂರು ಮತ್ತು ಬೆಂಗಳೂರು ಟೆನ್ ಲೈನ್ ಹೈವೈ ಮಾಡುತ್ತಿದ್ದು, ಈ ಕಾಮಗಾರಿ ವೇಳೆ ಒಂದು ಮರ ಕಡಿದರೆ, ಬೇರೆಡೆ 20 ಮರ ನೆಡಲು ಯೋಜನೆ ಹಾಕಲಾಗಿದೆ. ಜಲದರ್ಶಿನಿ ಬಳಿಯ ಅಪಾಯಕಾರಿ ತಿರುವಿನಿಂದ ಕೂಡಿದ್ದ ರಸ್ತೆಯನ್ನು ಅಗಲೀಕರಣ ಮಾಡು ವಾಗ 5 ಮರ ಕಡಿದಿದ್ದಕ್ಕೆ ಪರಿಸರ ಉಳಿ ಸಲು ಒಂದೇ ಒಂದು ಮರವನ್ನು ನೆಡದ ಪರಿಸರವಾದಿಗಳು ಪ್ರತಿಭಟಿಸಿದ್ದರು. ಪರಿಸರದ ಬಗ್ಗೆ ಮಾತನಾಡುವವರು ಮೊದಲು ಪರಿಸರ ಉಳಿಸುವ ಕಾರ್ಯ ದಲ್ಲಿ ನಾವೆಷ್ಟು ಪಾತ್ರವಹಿಸಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು. ಮರ ಕಡಿದರೆ ಮತ್ತೊಂದು ಮರ ನೆಡಬಹುದು. ಆದರೆ ಜೀವ ಹೋದರೆ ಮತ್ತೆ ತರಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಇದೇ ವೇಳೆ ಆಯೋಜಿಸಿದ್ದ ಆಯು ರ್ವೇದ ಔಷಧ ಪ್ರಕಾರ, ಸಸ್ಯಗಳು, ಚಿಕಿತ್ಸಾ ವಿಧಾನಗಳ ಕುರಿತ ವಸ್ತು ಪ್ರದರ್ಶನವನ್ನು ಪ್ರತಾಪ್ ಸಿಂಹ ಅವರು ವೀಕ್ಷಿಸಿದರು. ಜಿಲ್ಲೆಯ 50ಕ್ಕೂ ಹೆಚ್ಚು ಆಯು ರ್ವೇದ ವೈದ್ಯರು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Translate »