ಸಿಎಫ್‍ಟಿಆರ್‍ಐನಲ್ಲಿ ಕನ್ನಡದ ಕಲರವ
ಮೈಸೂರು

ಸಿಎಫ್‍ಟಿಆರ್‍ಐನಲ್ಲಿ ಕನ್ನಡದ ಕಲರವ

November 6, 2018

ಮೈಸೂರು: ಮೈಸೂ ರಿನ ಕೇಂದ್ರೀಯ ಆಹಾರ ಸಂಶೋಧನಾ ಲಯ(ಸಿಎಫ್‍ಟಿಆರ್‍ಐ) ಸಂಸ್ಥೆಯ ಆವ ರಣದಲ್ಲಿ ಸೋಮವಾರ ಎಲ್ಲೆಡೆ ಕನ್ನಡದ ಬಾವುಟಗಳೇ ಹಾರಾಡುತ್ತಿದ್ದವು. ಮೂರು ವರ್ಷದ ನಂತರ ವಿಜೃಂಭಣೆಯಿಂದ ಆಚರಿ ಸಿದ ಕನ್ನಡ ಹಬ್ಬದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕನ್ನಡಿಗ ಸಿಬ್ಬಂದಿಗಳು ಸಂಭ್ರಮ ದಿಂದ ಪಾಲ್ಗೊಂಡು ಕನ್ನಡಾಂಬೆಗೆ ಜಯಕಾರ ಹಾಕಿದರು.
ಕಳೆದ ಹಲವು ವರ್ಷಗಳಿಂದ ಸಿಎಫ್ ಟಿಆರ್‍ಐ ಸಂಸ್ಥೆಯ ಆವರಣದಲ್ಲಿ ವಿಜೃಂ ಭಣೆಯಿಂದ ನಡೆಯುತ್ತಿದ್ದ ಕನ್ನಡದ ಹಬ್ಬಕ್ಕೆ ಕಳೆದ ಮೂರ್ನಾಲ್ಕು ವರ್ಷದಿಂದ ಕೆಲವು ಕಾರಣಗಳಿಂದ ಅಡ್ಡಿಪಡಿಸಲಾಗಿತ್ತು. ಇದ ರಿಂದ ವಿವಿಧ ಕನ್ನಡಪರ ಸಂಘಟನೆಗಳ ಹೋರಾಟಗಾರರು ಹಾಗೂ ಸಂಸ್ಥೆಯ ಈ ಹಿಂದಿನ ನಿರ್ದೇಶಕರ ನಡುವೆ ತಿಕ್ಕಾಟ ಆರಂಭವಾಗಿ ಸುದೀರ್ಘ ಹೋರಾಟವೇ ನಡೆದಿತ್ತು. ಆದರೆ ನಿರ್ದೇಶಕರು ಬದಲಾಗಿ ದ್ದರಿಂದ ಹಾಗೂ ಕನ್ನಡ ಹಬ್ಬದ ಆಚ ರಣೆಗೆ ಹಾಲಿ ನಿರ್ದೇಶಕರು ಸಹಕಾರ ನೀಡಿದ್ದರಿಂದ ಇಂದು ಕನ್ನಡ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಸಿಎಫ್‍ಟಿಆರ್ ಸಂಸ್ಥೆಯ ಕನ್ನಡ ಸಹೃ ದಯ ಬಳಗದ ವತಿಯಿಂದ ಇಂದು ಬೆಳಗ್ಗೆ ನಡೆದ ಕನ್ನಡ ಹಬ್ಬ-2018ರ ಕಾರ್ಯ ಕ್ರಮದಲ್ಲಿ ಮೈಸೂರಿನ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಕನ್ನಡ ಸಹೃದಯ ಬಳಗದ ಸದಸ್ಯರು, ಸಿಎಫ್ ಟಿಆರ್‍ಐ ಸಂಸ್ಥೆಯ ಇತರೆ ಸಿಬ್ಬಂದಿಗಳು ಪಾಲ್ಗೊಂಡು ಕನ್ನಡ ಭಾಷೆಯ ಮೇಲಿನ ಪ್ರೇಮವನ್ನು ಪ್ರದರ್ಶಿಸಿದರು. ಕಾರ್ಯ ಕ್ರಮದ ಹಿನ್ನೆಲೆಯಲ್ಲಿ ಸಂಸ್ಥೆಯ ಆವ ರಣದಲ್ಲಿ ಕನ್ನಡದ ಬಾವುಟ ಹಾಗೂ ಬಂಟಿಂಗ್ಸ್ ಕಟ್ಟಿ ಸಿಂಗರಿಸಲಾಗಿತ್ತು. ಹಬ್ಬದ ವಾತಾವರಣ ನಿರ್ಮಿಸಲಾಗಿತ್ತು.

ಶಾಶ್ವತ ಕಚೇರಿ: ಮೂರು ವರ್ಷದಿಂದ ಸ್ಥಗಿತಗೊಂಡಿದ್ದ ಕನ್ನಡದ ಹಬ್ಬ ಕಾರ್ಯ ಕ್ರಮ ಇಂದು ಆಚರಿಸಿದ ಹಿನ್ನೆಲೆಯಲ್ಲಿ ಸಂಸ್ಥೆಯ ಆವರಣದಲ್ಲಿ ಕನ್ನಡ ಸಹೃದಯ ಬಳಗಕ್ಕೆ ಶಾಶ್ವತ ಕಚೇರಿಯನ್ನು ತೆರೆಯ ಲಾಯಿತು. ಮುಖ್ಯ ಕಟ್ಟಡದ ಹಿಂಬದಿ ಕೊಠಡಿ ಯೊಂದರಲ್ಲಿ ಕನ್ನಡ ಸಹೃದಯ ಬಳಗ ಕಚೇರಿ ಆರಂಭಿಸಲಾಯಿತು. ಈ ಕಚೇರಿ ಯನ್ನು ಕನ್ನಡಪರ ಹೋರಾಟಗಾರ ಪ.ಮಲ್ಲೇಶ್ ಹಾಗೂ ಸಿಎಫ್‍ಟಿಆರ್‍ಐ ನಿರ್ದೇಶಕ ಡಾ.ಕೆ.ಎಸ್.ಎಂ.ಎಸ್. ರಾಘವರಾವ್ ಅವರು ಉದ್ಘಾಟಿಸಿದರು. ಇದೇ ವೇಳೆ ವೀರಗಾಸೆ ಕುಣಿತ ಹಾಗೂ ವಿವಿಧ ಜಾನಪದ ಕಲಾತಂಡಗಳು ಕಾರ್ಯ ಕ್ರಮದ ಮೆರಗು ಹೆಚ್ಚಿಸಿದವು.

ಕಾರ್ಯಕ್ರಮ: ಸಿಎಫ್‍ಟಿಆರ್‍ಐ ಸಂಸ್ಥೆಯ ಐಎಫ್‍ಟಿಟಿಸಿ ಸಭಾಂಗಣದಲ್ಲಿ ನಡೆದ ಕನ್ನಡ ಹಬ್ಬವನ್ನು ಪ.ಮಲ್ಲೇಶ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ದರು. ಬಳಿಕ ಮಾತನಾಡಿದ ಅವರು, ರಾಜ್ಯ ದಲ್ಲಿ ಮಾತೃಭಾಷೆ ಕಲಿಯುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಕನ್ನಡ ಶಾಲೆಗಳ ಸಂಖ್ಯೆಯೂ ಕ್ಷೀಣಿಸುತ್ತಿದೆ. ಕಳೆದ 50 ವರ್ಷ ಗಳಿಂದ ಕನ್ನಡ ಭಾಷೆಯ ಉಳಿವಿಗಾಗಿ ಹೋರಾಟ ಮಾಡುತ್ತಿz್ದÉೀವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿ ಕನ್ನಡ ಹೋರಾಟ ಕಳೆಗುಂದಿದೆ. ಯುವಕರ ಹೋರಾಟ ಮುಂಚೂಣಿಗೆ ತರಬೇಕು. ಈ ಹಿಂದೆ ಸಿಎಫ್ ಟಿಆರ್‍ಐನ ನಿರ್ದೇಶಕರು ಕನ್ನಡವನ್ನು ಹಾಳು ಮಾಡಿದ್ದರು. ಕನ್ನಡ ಸಂಘಟನೆ ಗಳನ್ನು ಕತ್ತು ಹಿಸುಕಿದ್ದರು. ನಿರಂತರ ಹೋರಾಟದ ಫÀಲವಾಗಿ ಇಂದು ಕನ್ನಡ ಸಂಘವನ್ನು ಬಲಗೊಳಿಸಿರುವುದು ಸಂತೋಷ ತಂದಿದೆ ಎಂದು ಅವರು ಹೇಳಿದರು.

ಇಂಗ್ಲಿಷ್ ವ್ಯಾಮೋಹ: ಪ್ರಸ್ತುತ ಸಂದರ್ಭ ದಲ್ಲಿ ಕನ್ನಡ ಕಲಿಕೆಗೆ ನಿರಾಸಕ್ತಿ ಕಂಡು ಬರು ತ್ತಿದೆ. ಮಕ್ಕಳು, ಮೊಮ್ಮಕ್ಕಳು, ಪೋಷಕ ರಿಗೆ ಕನ್ನಡ ಬೇಕಾಗಿಲ್ಲ ಎಂಬಂತಾಗಿದೆ. ಇಂಗ್ಲಿಷ್ ಭಾಷೆ ಎಲ್ಲರ ಮೇಲೆ ಸವಾರಿ ಮಾಡುತ್ತಿದೆ. ಉದ್ಯೋಗಕ್ಕಾಗಿ ಇಂಗ್ಲೀಷ್ ಭಾಷೆಯ ಮೇಲಿನ ವ್ಯಾಮೋಹ ಹೆಚ್ಚಾಗು ತ್ತಿದೆ ಎಂದು ಅವರು ವಿಷಾದಿಸಿದ ಅವರು, ಇಂಗ್ಲಿಷ್ ಭಾಷೆ ಕಲಿಯುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಕನ್ನಡ ಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕಾದ ಅನಿವಾರ್ಯತೆ ಯಿದೆ ಎಂದರು. ಕಾರ್ಯಕ್ರಮದಲ್ಲಿ ಸಿಎ ಎಫ್‍ಆರ್‍ಐನ ನಿರ್ದೇಶಕ ಡಾ. ಕೆಎಸ್ ಎಂಎಸ್ ರಾಘವರಾವ್, ಕಸಾಪ ಜಿಲ್ಲಾ ಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕನ್ನಡ ಸಹೃದಯ ಬಳಗದ ಅಧ್ಯಕ್ಷ ರಂಗದಾಮಯ್ಯ, ಉಪಾ ಧ್ಯಕ್ಷ ಡಾ.ಕೆ.ವೆಂಕಟೇಶ ಮೂರ್ತಿ ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ಪ್ರಗತಿಪರ ಚಿಂತಕ ಪೆÇ್ರ.ಕಾಳೇಗೌಡ ನಾಗವಾರ, ನಿವೃತ್ತ ಪ್ರಾಧ್ಯಾಪಕ ಪೆÇ್ರ.ಕಾಳೇಚೆನ್ನಗೌಡ, ಇತಿಹಾಸ ತಜ್ಞ ಪೆÇ್ರ.ಪಿ.ವಿ.ನಂಜರಾಜ ಅರಸ್, ಸಂಸ್ಕøತಿ ಸುಬ್ರಹ್ಮಣ್ಯ, ಕೆ.ಎಸ್.ಶಿವರಾಮು ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು. ಇದೇ ವೇಳೆ ಕನ್ನಡ ಪರ ಹೋರಾಟಗಾರರು, ವಿದ್ವಾಂಸರನ್ನು ಸನ್ಮಾನಿಸಲಾಯಿತು. ಗಾಯಕ ಅಮ್ಮ ರಾಮಚಂದ್ರ ತಂಡದಿಂದ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲದೆ ಕನ್ನಡ ಪುಸ್ತಕ ಮಾರಾಟ ಹಾಗೂ ಪ್ರದರ್ಶನ ವನ್ನು ಏರ್ಪಡಿಸಲಾಗಿತ್ತು.

Translate »