ಮೈಸೂರು: ಸರ್ಕಾರಿ ಉದ್ಯೋಗದಿಂದ ಮಾತ್ರ ದೀರ್ಘಕಾಲ ಸಮಾಜ ಸೇವೆ ಮಾಡಲು ಸಾಧ್ಯ ಎಂದು ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅಭಿಪ್ರಾಯ ಪಟ್ಟರು.
ಮೈಸೂರಿನ ಕುವೆಂಪುನಗರದ ಪ್ರಮತಿ ಹಿಲ್ ವ್ಯೂ ಅಕಾಡೆಮಿ ಆವರಣದಲ್ಲಿ ನಡೆದ ನವೋದಯ ಫೌಂಡೇಷನ್ ಮತ್ತು ಪ್ರಮತಿ ಹಿಲ್ ವ್ಯೂ ಅಕಾಡೆಮಿ ಸಹಯೋಗದೊಂ ದಿಗೆ ‘ನವೋ-ಪ್ರಮತಿ’ ಸ್ಕೂಲ್ ಆಫ್ ಸಿವಿಲ್ ಸರ್ವೀಸಸ್ ವತಿಯಿಂದ ನಡೆಯುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಶಿಬಿರ ವನ್ನು ಉದ್ಘಾಟಿಸಿ ಮಾತನಾಡಿದರು.
ಮಂತ್ರಿಗಳ ಮಕ್ಕಳು ರಾಜಕೀಯ ಪ್ರವೇ ಶಿಸಿ ಅಧಿಕಾರ ಹಿಡಿಯುವಂತೆ ಸರ್ಕಾರಿ ಹುದ್ದೆಗಳನ್ನು ಪಡೆಯಲಾಗುವುದಿಲ್ಲ. ನೋವು, ಕಷ್ಟಗಳನ್ನು ಮೆಟ್ಟಿನಿಂತು ಓದಬೇಕು. ಆಗ ಮಾತ್ರ ಸರ್ಕಾರಿ ನೌಕರಿ ದೊರೆಯುತ್ತದೆ ಎಂದರು.
ಪ್ರಸ್ತುವ ಹಲವಾರು ಉನ್ನತ ವಿದ್ಯಾ ಸಂಸ್ಥೆಗಳು, ಉತ್ತಮ ಸೌಲಭ್ಯಗಳು ಇದ್ದು, ಅದನ್ನು ಸದುಪಯೋಗ ಪಡಿಸಿಕೊಂಡು ಅಭ್ಯಾಸ ಮಾಡಬೇಕು. ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದವರು ಸಾಧನೆ ಮಾಡಿ ರುವ ಉದಾಹರಣೆ ಸಾಕಷ್ಟಿವೆ. ಹಟಕ್ಕೆ ಬಿದ್ದಂತೆ ಓದಬೇಕು. ಇಂದಿನÀ ವ್ಯವಸ್ಥೆ ಯಲ್ಲಿ ಗೌರವಯುತ ಜೀವನ ಸಾಗಿಸಲು ಅಧಿಕಾರ ಬೇಕಾಗಿದೆ. ಐಎಎಸ್ ಮಾಡಲು ಸಾಧ್ಯವಾಗಲಿಲ್ಲ ಎಂದು ಬೇಸರ ಪಡದೇ ಮರಳಿ ಯತ್ನವ ಮಾಡಿ ಎಂದು ಉತ್ತೇ ಜನದ ಮಾತನಾಡಿದರು.
ಐಎಎಸ್, ಐಪಿಎಸ್ ಅಧಿಕಾರಿಯಾ ದವರು ತಾವು ಬೆಳೆದು ಬಂದ ದಾರಿಯನ್ನು ಮರೆಯದೆ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ರಾಜಕಾರಣಿಗಳಾದ ನಾವು 5 ವರ್ಷ ಮಾತ್ರ ಸಮಾಜ ಸೇವೆಯನ್ನು ಮಾಡುತ್ತೇವೆ. ಆದರೆ, ಸರ್ಕಾರಿ ಉದ್ಯೋಗಿ ಗಳು 30 ವರ್ಷಕ್ಕಿಂತ ಹೆಚ್ಚು ಕಾಲ ಸಮಾಜ ಸೇವೆಯನ್ನು ಮಾಡಬಹುದು ಎಂದರು.
ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸ್ ಉಪ ಆಯುಕ್ತ ರವಿ ಡಿ.ಚನ್ನಣ್ಣನವರ್ ಮಾತನಾಡಿ, ಮನುಷ್ಯ ಶಿಕ್ಷಣ ಪಡೆಯು ವುದು ಸ್ವ ಹಿತಾಸಕ್ತಿ ಮತ್ತು ಸಮಾಜದ ಹಿತಾಸಕ್ತಿಗಾಗಿ. ಸರ್ಕಾರಿ ಸೌಲಭ್ಯಗಳು ಸಿಗು ತ್ತಿಲ್ಲ ಎಂದು ಕೋಪಗೊಂಡಿದ್ದರೆ ಐಎಎಸ್, ಐಪಿಎಸ್ ಮಾಡಿ ಎಂದರು.
ವಿದ್ಯಾರ್ಥಿಗಳು ಯಾತಕ್ಕಾಗಿ ಓದುತ್ತಿ ದ್ದೇನೆ ಎಂಬುದನ್ನು ಮೊದಲು ನಿರ್ಧರಿಸ ಬೇಕು. ಯುಪಿಎಸ್ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಲು ಶೇ.50ರಷ್ಟು ಅಂಕ ಪಡೆಯಬೇಕಷ್ಟೆ. ಅದಕ್ಕಾಗಿ ಆತ್ಮವಿಶ್ವಾಸದಿಂದ ತಯಾರಾಗ ಬೇಕು. ಕಾಡಿನಲ್ಲಿ ಅಪಾಯದಲ್ಲಿರುವ ಜಿಂಕೆ ಓಡುವ ವೇಗದಂತೆ ನಿಮ್ಮ ಓದುವ ಉತ್ಸಾಹವಿರಬೇಕು ಎಂದು ಮಾರ್ಗ ದರ್ಶನ ಮಾಡಿದರು.
‘ನಾನು ಜಗತ್ತಿನ ಯಾವ ವ್ಯಕ್ತಿಗೂ ಕಮ್ಮಿ ಯಿಲ್ಲ’ ಎಂಬ ಆತ್ಮವಿಶ್ವಾಸ ರೂಢಿಸಿಕೊಂಡು, ಗುರಿಯನ್ನು ಮುಟ್ಟಿ ಸಾಧನೆ ತೋರಬೇಕು. ನಿಮ್ಮೊಳಗಿನ ಆಸೆ, ಆಕಾಂಕ್ಷೆಗಳು ಸಕಾರಾತ್ಮಕ ವಾಗಿರಬೇಕು. ನಿರಂತರ ಓದಬೇಕು. ಆಸೆ ಗಳನ್ನು ಬದಿಗೊತ್ತಿ ಅಭ್ಯಾಸ ನಿರತರಾದರೆ ಮಾತ್ರ ಯಶಸ್ಸು ದೊರಕುತ್ತದೆ. ಹಾಗೆಯೇ ಕಲಿಕಾ ಕೌಶಲಗಳನ್ನು ಅಳವಡಿಸಿಕೊಳ್ಳ ಬೇಕು ಎಂದು ಕಿವಿಮಾತು ಹೇಳಿದರು.
ಓದುವ ಹಂಬಲ ಕಡಿಮೆಯಾಗಲು ಬಿಡಬಾರದು. ಜತೆಗೆ ನಿರಂತರತೆ, ಕಾಲ ಮಿತಿ ಬಹಳ ಮುಖ್ಯ. ಜತೆಗೆ ಬಲ ಮತ್ತು ಬಲಹೀನತೆಗಳನ್ನು ಪಟ್ಟಿ ಮಾಡಿಕೊಳ್ಳ ಬೇಕು. ಮಾರ್ಗದರ್ಶಕರಿಗಾಗಿ ಅಲೆದಾಡದೆ ಮಾರ್ಗವನ್ನು ಸೃಷ್ಟಿ ಮಾಡಿಕೊಳ್ಳಬೇಕು. ಲಭ್ಯವಿರುವ ತಂತ್ರಜ್ಞಾನವನ್ನೂ ಬಳಸಿ ಕೊಳ್ಳಿ ಎಂದು ಸಲಹೆ ನೀಡಿದರು.
ಭಾರತ ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಸಿ.ವಿ.ಗೋಪಿನಾಥ್, ಲೋಕಾ ಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸುಜೀತಾ ಮಹಮದ್, ಪ್ರಮತಿ ಹಿಲ್ ವ್ಯೂ ಅಕಾ ಡೆಮಿ ಕಾರ್ಯದರ್ಶಿ ಹೆಚ್.ವಿ.ರಾಜೀವ್, ನವೋದಯ ಫೌಂಡೇಷನ್ ಕಾರ್ಯದರ್ಶಿ ಡಾ.ಎಸ್.ಆರ್.ರವಿ, ಪ್ರಮತಿ ಹಿಲ್ ವ್ಯೂ ಅಕಾಡೆಮಿ ಪ್ರಾಂಶುಪಾಲ ಸಿ.ಎಸ್. ಸುದ ರ್ಶನ್, ನವೋ-ಪ್ರಮತಿ ಸ್ಕೂಲ್ ಆಫ್ ಸಿವಿಲ್ ಸರ್ವೀಸಸ್ ಸಂಯೋಜಕ ಬಿ.ಎಸ್. ರವಿಶಂಕರ್ ಉಪಸ್ಥಿತರಿದ್ದರು.