ಮುಡಾ ಅಧ್ಯಕ್ಷಗಾದಿ ಮೇಲೆ ಮೈಸೂರು ಬಿಜೆಪಿ ಮುಖಂಡರ ಕಣ್ಣು
ಮೈಸೂರು

ಮುಡಾ ಅಧ್ಯಕ್ಷಗಾದಿ ಮೇಲೆ ಮೈಸೂರು ಬಿಜೆಪಿ ಮುಖಂಡರ ಕಣ್ಣು

December 16, 2019

ಮೈಸೂರು. ಡಿ.15- ರಾಜ್ಯದಲ್ಲಿ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾ ವಣೆಯಲ್ಲಿ ಬಿಜೆಪಿ 12 ಸ್ಥಾನ ಗಳಿಸಿರುವ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಭದ್ರವಾಗುತ್ತಿದ್ದಂ ತೆಯೇ ಖಾಲಿ ಇರುವ ವಿವಿಧ ನಿಗಮ- ಮಂಡಳಿ ನೇಮಕಾತಿ ಪ್ರಕ್ರಿಯೆಗೆ ಚಟು ವಟಿಕೆ ಆರಂಭವಾಗಿದೆ.

ಗೆಲುವು ಸಾಧಿಸಿರುವ ಹಾಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಪತನ ಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿರುವ 12 ಶಾಸಕರು ಹಾಗೂ ಸೋಲುಂಡಿರುವವರಿಗೂ ಭರವಸೆಯಂತೆ ಅಧಿಕಾರ ಹಂಚಿಕೆ ಮಾಡುವತ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ವರಿಷ್ಠರು ಅಳೆದು -ಸುರಿದು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಸಚಿವ ಸಂಪುಟ ವಿಸ್ತರಣೆಗೆ ಪಕ್ಷದ ವರಿ ಷ್ಠರು ಸಕಲ ಸಿದ್ಧತೆ ನಡೆಸುತ್ತಿದ್ದು ಆ ವೇಳೆ ಸಚಿವ ಸ್ಥಾನ ಎಷ್ಟು ಮಂದಿಗೆ ದಕ್ಕುತ್ತದೆ ಎಂಬು ದನ್ನು ನೋಡಿಕೊಂಡು ಉಳಿದ ಶಾಸಕರಿಗೆ ಅಧಿಕಾರ ನೀಡುವುದರ ಸಂಬಂಧ ವರಿಷ್ಠರು ತಲೆಕೆಡಿಸಿಕೊಂಡಿದ್ದಾರೆ. ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾದ ನಂತರ ರಾಜ್ಯದಲ್ಲಿ ಖಾಲಿ ಇರುವ ವಿವಿಧ ನಿಗಮ- ಮಂಡಳಿ ಅಧ್ಯಕ್ಷರುಗಳು ಸ್ಥಾನ ಭರ್ತಿ ಮಾಡುವ ಪ್ರಕ್ರಿಯೆ ಆರಂಭವಾಗುತ್ತದೆ.

ಮುಡಾ ಮೇಲೆ ಹಲವರ ಕಣ್ಣು: ಮೈಸೂರು ಭಾಗದಲ್ಲಿ ಹಲವು ನಿಗಮ-ಮಂಡಳಿಗಳಿವೆಯಾದರೂ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಅಧ್ಯಕ್ಷ ಸ್ಥಾನದ ಮೇಲೆ ಬಹುತೇಕ ಆಕಾಂಕ್ಷಿಗಳ ಕಣ್ಣು ಬಿದ್ದಿದೆ.

ಪ್ರಮುಖರ ಹೆಸರು: ಮುಡಾ ಅಧ್ಯಕ್ಷ ಗಾದಿಗಾಗಿ ತೀವ್ರ ಪೈಪೋಟಿ ಉಂಟಾಗಿದೆ ಯಾದರೂ, ಆ ಸ್ಥಾನ ಗಿಟ್ಟಿಸಲೇಬೇಕೆಂದು ಪ್ರಯತ್ನಿಸುತ್ತಿರುವವರ ಪೈಕಿ ಪಕ್ಷ ಸಂಘಟನೆ ಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಕೌಟಿಲ್ಯ ಆರ್.ರಘು, ಹೆಚ್.ವಿ.ರಾಜೀವ್, ಮೈವಿ ರವಿಶಂಕರ್, ಟಿ.ಎಸ್.ಶ್ರೀವತ್ಸ, ಯಶಸ್ವಿನಿ ಸೋಮಶೇಖರ್ ಅವರ ಹೆಸರು ಕೇಳಿಬರು ತ್ತಿದೆ. ಅವರಷ್ಟೇ ಅಲ್ಲದೆ ಬಿಜೆಪಿ ಮೈಸೂರು ನಗರಾಧ್ಯಕ್ಷ ಡಾ.ಹೆಚ್.ಪಿ. ಮಂಜುನಾಥ್, ಜಿಲ್ಲಾಧ್ಯಕ್ಷ ಎಂ.ಶಿವಣ್ಣ, ಮಾಜಿ ಜಿಲ್ಲಾಧ್ಯಕ್ಷ ಹೇಮಂತ್‍ಕುಮಾರ್‍ಗೌಡ, ಮಾಜಿ ಶಾಸಕರಾದ ಹೆಚ್.ಸಿ.ಬಸವರಾಜು. ಡಾ.ಭಾರತಿ ಶಂಕರ್, ಸಿ.ರಮೇಶ್, ಮುಖಂಡರಾದ ಹೆಚ್.ಜಿ.ಗಿರಿಧರ್, ಎಂ.ಅರುಣ್‍ಕುಮಾರ್‍ಗೌಡ, ಮಲ್ಲಪ್ಪಗೌಡ, ಎನ್.ಆರ್.ಮೊಹಲ್ಲಾ ರಮೇಶ್, ಬಿ.ಸಿದ್ದರಾಜು, ನಾಗರಾಜ್ ಮಲ್ಲಾಡಿ, ಫಣೀಶ್ ಸೇರಿದಂತೆ ಹಲವಾರು ಹಲವು ಬಿಜೆಪಿ ಮುಖಂಡರು ತೀವ್ರ ಲಾಬಿ ನಡೆಸುತ್ತಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.

ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ಎಲ್.ಸಂತೋಷ್ ಅವರ ವಲಯದಲ್ಲಿ ಗುರ್ತಿಸಿಕೊಂಡಿರುವ ಹಾಗೂ ಆರ್‍ಎಸ್‍ಎಸ್ ಸಂಘಟನೆಯಿಂದ ಬಂದ ಕೆಲವರು ನಿಗಮ-ಮಂಡಳಿಗಳ ಸ್ಥಾನ ಗಿಟ್ಟಿಸಲು ತಮ್ಮ ಗಾಡ್‍ಫಾದರ್‍ಗಳ ಮುಖಾಂತರ ಒತ್ತಡ ಹೇರುತ್ತಿದ್ದಾರಂತೆ. ಮುಡಾ ಕೈತಪ್ಪಿದರೆ ಉಳಿದ ಮೈಸೂರು ಪಾಂತದಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ, ಕಾಡಾ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ, ಚಾಮರಾಜನಗರ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಏIಂಆಃ) ಗಳಂತಹ ಹಲವು ಸಂಸ್ಥೆಗಳ ಅಧ್ಯಕ್ಷ ಸ್ಥಾನವನ್ನಾದರೂ ಅಲಂಕರಿಸಬೇಕೆಂಬುದು ಆಕಾಂಕ್ಷಿ ಗಳ ಪ್ರಯತ್ನವಾಗಿದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯಲ್ಲಿ ಆಕಾಂಕ್ಷಿಗಳು ಸಂಖ್ಯೆ ಹೆಚ್ಚಾಗಿರುವುದರಿಂದ ಪಟ್ಟಿ ತರಿಸಿಕೊಂಡು ಪಕ್ಷಕ್ಕಾಗಿ ದುಡಿದಿರುವ ಹಾಗೂ ವಿವಿಧ ಚುನಾವಣೆಗಳಲ್ಲಿ ಅಭ್ಯರ್ಧಿಗಳ ಗೆಲುವಿಗೆ ಶ್ರಮಿಸಿದವರು ಹಾಗೂ ಶಿಸ್ತು ನಿಷ್ಠೆಯುಳ್ಳವರ ಕುರಿತು ವರಿಷ್ಠರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸಚಿವ ಸಂಪುಟ ವಿಸ್ತರಣೆ ಮುಗಿಯುತ್ತಿದ್ದಂತೆಯೇ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಚುರುಕುಗೊಳ್ಳುವುದರಿಂದ ಮೈಸೂರು ಬಿಜೆಪಿ ಮುಖಂಡರು ಚಟುವಟಿಕೆ ಆರಂಭವಾಗಿದೆ

ಎಸ್.ಟಿ.ರವಿಕುಮಾರ್

Translate »