ಹಾಡಿಗಳಿಗೆ ಅಂಡರ್‍ಗ್ರೌಂಡ್ ಕೇಬಲ್ ಮೂಲಕ ವಿದ್ಯುತ್ ಸೌಲಭ್ಯ ಕಲ್ಪಿಸಲು ಸೆಸ್ಕ್‍ನಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ
ಮೈಸೂರು

ಹಾಡಿಗಳಿಗೆ ಅಂಡರ್‍ಗ್ರೌಂಡ್ ಕೇಬಲ್ ಮೂಲಕ ವಿದ್ಯುತ್ ಸೌಲಭ್ಯ ಕಲ್ಪಿಸಲು ಸೆಸ್ಕ್‍ನಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ

June 16, 2020

ಮೈಸೂರು, ಜೂ.15(ಎಂಕೆ)- ಮೈಸೂರು ಜಿಲ್ಲೆ ಯಲ್ಲಿ ಬುಡಕಟ್ಟು ಜನರು ವಾಸಿಸುವ ಹಾಡಿಗಳಿಗೆ ಯುಜಿ(ಅಂಡರ್ ಗ್ರೌಂಡ್) ಕೇಬಲ್ ಮೂಲಕ ವಿದ್ಯುತ್ ಸೌಲಭ್ಯ ಕಲ್ಪಿಸಲು ಅನುಮತಿ ಕೋರಿ ಕೇಂದ್ರ ಸರ್ಕಾ ರಕ್ಕೆ ಮತ್ತೆ ಮನವಿ ಸಲ್ಲಿಸಲು ಸೆಸ್ಕ್ ನಿರ್ಧರಿಸಿದೆ.

ಹಾಡಿ ಪ್ರದೇಶಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಡಿಡಿಜಿ(ವಿಕೇಂದ್ರೀಕೃತ ವಿತರಣಾ ಉತ್ಪಾದನೆ) ಯೋಜನೆಯಡಿ ಕಳೆದ 2 ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಕೇಂದ್ರ ಸರ್ಕಾ ರದ ಅರಣ್ಯ ಸಚಿವಾಲಯದ ಅನುಮತಿ ದೊರೆ ಯದೆ ಯೋಜನೆ ನೆನೆಗುದಿಗೆ ಬಿದ್ದಿದೆ.

ಹಾಡಿಗಳಲ್ಲಿಯೇ ಸೋಲಾರ್ ಪ್ಲಾಂಟ್‍ಗಳನ್ನು ನಿರ್ಮಿಸಿ ಅಲ್ಲಿರುವ ಮನೆಗಳಿಗೆ ವಿದ್ಯುತ್ ಪೂರೈಕೆ ಮಾಡುವ ಯೋಜನೆ ಇದಾಗಿದ್ದು, ಈಗಾಗಲೇ ಸೆಸ್ಕ್ ವತಿಯಿಂದ ಯೋಜನೆಯನ್ನು ಸಿದ್ದಪಡಿಸಿ, ಖಾಸಗಿ ಕಂಪನಿಗೆ ಗುತ್ತಿಗೆ ನೀಡಿ ಕೇಂದ್ರ ಸರ್ಕಾರದ ಅನುಮತಿಗಾಗಿ ಸೆಸ್ಕ್ ಕಾಯು ತ್ತಿದೆ. ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ಸರಗೂರು ಮತ್ತು ಹೆಚ್.ಡಿ.ಕೋಟೆ ತಾಲೂಕು ವ್ಯಾಪ್ತಿಯಲ್ಲಿ 11 ಹಾಡಿ ಗಳಿದ್ದು, 653 ಬುಡಕಟ್ಟು ಕುಟುಂಬಗಳಿವೆ. ಪ್ರಾಯೋಗಿಕ ವಾಗಿ ಹೆಚ್.ಡಿ.ಕೋಟೆಯ ಮೇಟಿಕುಪ್ಪೆ ಹಾಡಿಯಲ್ಲಿ ರುವ 29 ಬುಡಕಟ್ಟು ಜನರ ಮನೆಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಸೆಸ್ಕ್‍ನ ಮೈಸೂರು ಕಾರ್ಯ ಮತ್ತು ಪಾಲನ ವೃತ್ತ ಅಧೀಕ್ಷಕ ಇಂಜಿ ನಿಯರ್ ಕೆ.ಎಂ.ಮುನಿಗೋಪಾಲರಾಜು ‘ಮೈಸೂರು ಮಿತ್ರ’ನಿಗೆ ತಿಳಿಸಿದರು. 11 ಹಾಡಿಗಳಲ್ಲಿ 113 ಸೋಲಾರ್ ಪ್ಲಾಂಟ್‍ಗಳನ್ನು ನಿರ್ಮಿಸಿ ಅಲ್ಲಿಯೇ ವಿದ್ಯುತ್ ಉತ್ಪಾ ದಿಸಿ, ವಿತರಣೆ ಮಾಡುವ ಯೋಜನೆ ಇದಾಗಿದೆ. ಈ ಸಂಬಂಧ ಈಗಾಗಲೇ ಒಂದು ಬಾರೀ ಕೇಂದ್ರ ಸರ್ಕಾರದ ಅರಣ್ಯ ಸಚಿವಾಲಯಕ್ಕೆ ಅನುಮತಿ ಕೋರಿ ಪತ್ರ ಬರೆಯಲಾಗಿತ್ತು. ಆದರೆ, ಹಾಡಿ ಪ್ರದೇಶಗಳು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಡು ವುದು ಹಾಗೂ ಕಾಡಿನಲ್ಲಿ ವಿದ್ಯುತ್ ಕಂಬಗಳನ್ನು ನಿಲ್ಲಿಸುವುದರಿಂದ ಪ್ರಾಣಿಗಳಿಗೆ ತೊಂದರೆಯಾಗಲಿದೆ ಎಂದು ಮನವಿಯನ್ನು ತಿರಸ್ಕರಿಸಿದೆ ಎಂದರು.

ಹಾಡಿ ಪ್ರದೇಶದಲ್ಲಿರುವ ಬುಡಕಟ್ಟು ಜನರಿಗೆ ವಿದ್ಯುತ್ ಸೌಲಭ್ಯ ಕಲ್ಪಿಸುವುದು ಮುಖ್ಯ ಉದ್ದೇಶ ವಾಗಿದೆ. ಆದ್ದರಿಂದ ಯುಜಿ(ಅಂಡರ್ ಗ್ರೌಂಡ್) ಕೇಬಲ್ ಮೂಲಕ ವಿದ್ಯುತ್ ಸೌಲಭ್ಯ ಕಲ್ಪಿಸುವುದಕ್ಕೆ ನಿರ್ಧರಿಸಲಾಗಿದ್ದು, ಅನುಮತಿ ಕೋರಿ ಕೇಂದ್ರ ಸರ್ಕಾ ರಕ್ಕೆ ಮತ್ತೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು. ರಾಜ್ಯ ಸರ್ಕಾರ ಒಪ್ಪಿಗೆ ನೀಡಿರುವ ಹಿನ್ನೆಲೆ ಕಾಮಗಾರಿ ಸಂಬಂಧ ಅರಣ್ಯ ಇಲಾಖೆಗೆ 61.65 ಲಕ್ಷ ರೂ.ಗಳನ್ನು ಸೆಸ್ಕ್‍ನಿಂದ ಪಾವತಿ ಮಾಡಲಾ ಗಿದೆ. ಅಲ್ಲದೆ ಟೆಂಡರ್ ಕರೆದು ಖಾಸಗಿ ಕಂಪನಿ ಯೊಂದಕ್ಕೆ ಕಾಮಗಾರಿ ಗುತ್ತಿಗೆಯನ್ನು ನೀಡಿ, ಸಿದ್ದತೆ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಅರಣ್ಯ ಸಚಿವಾ ಲಯ ಅನುಮತಿ ನೀಡುತ್ತಿದ್ದಂತೆ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು

Translate »