ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ
Uncategorized

ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ

January 23, 2020

ನಂಜನಗೂಡು, ಜ.22(ರವಿ)-ಅಕ್ರಮ ವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 30ಕ್ಕೂ ಹೆಚ್ಚು ಜಾನುವಾರುಗಳನ್ನು ನಗರ ಠಾಣೆ ಪೊಲೀಸ್ ಸಿಬ್ಬಂದಿ ರಕ್ಷಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಕಾರ್ಯದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರು ನೆರವಾದರು. ಮೈಸೂರಿನ ಶಾಂತಿ ನಗರ ನಿವಾಸಿ ನಸ್ರುಲ್ಲಾ, ಮಂಡ್ಯ ಜಿಲ್ಲೆಯ ಬಸರಾಳು ಗ್ರಾಮದ ನಿವಾಸಿ ಸಿದ್ದೇಗೌಡ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರದ ಸಿದ್ದಯ್ಯ ರಾಜು ಬಂಧಿತರು.

ಕರ್ನಾಟಕದಿಂದ ಕೇರಳ ರಾಜ್ಯದ ಕಸಾಯಿಖಾನೆಗೆ ನಂಜನಗೂಡು ಮಾರ್ಗದಲ್ಲಿ ಟ್ರಕ್(ಕೆಎಲ್19, 6894)ನಲ್ಲಿ ಅಕ್ರಮವಾಗಿ 30ಕ್ಕೂ ಹೆಚ್ಚು ಜಾನುವಾರು ಗಳನ್ನು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಮಂಗಳವಾರ ರಾತ್ರಿ 10ಗಂಟೆ ಸುಮಾರಿಗೆ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ ಬಳಿ ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರು ಹಾಗೂ ನಗರ ಠಾಣೆ ಪೊಲೀಸರು ಟ್ರಕ್ ತಡೆದು ಪರಿಶೀಲಿಸಿದಾಗ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದುದು ಪತ್ತೆಯಾಗಿದೆ. ಕೂಡಲೇ ಜಾನುವಾರುಗಳನ್ನು ರಕ್ಷಿಸಿ, ಮೈಸೂರು ಪಿಂಜರಾಪೆÇೀಲ್‍ಗೆ ರವಾನಿಸಲಾಯಿತು. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »