ವೀರವನಿತೆ ಮಹಾದೇವಿ ಪಾತ್ರ ಸನ್ನಿ ಲಿಯೋನ್ ನಿರ್ವಹಣೆÉ ವಿರೋಧಿಸಿ ಪ್ರತಿಭಟನೆ
ಮೈಸೂರು

ವೀರವನಿತೆ ಮಹಾದೇವಿ ಪಾತ್ರ ಸನ್ನಿ ಲಿಯೋನ್ ನಿರ್ವಹಣೆÉ ವಿರೋಧಿಸಿ ಪ್ರತಿಭಟನೆ

October 23, 2018

ಮೈಸೂರು:  ಕನ್ನಡ ಚರಿತ್ರೆಯ ವೀರವನಿತೆ ಮಹಾದೇವಿ ಪಾತ್ರ ದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅಭಿ ನಯಿಸುತ್ತಿರುವುದನ್ನು ಖಂಡಿಸಿ ಕರ್ನಾ ಟಕ ರಕ್ಷಣಾ ವೇದಿಕೆಯ ಯುವಸೇನೆ ವತಿ ಯಿಂದ ಸೋಮವಾರ ಪ್ರತಿಭಟನೆ ನಡೆಸ ಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾ ಕಾರರು, ಕನ್ನಡ ನಾಡಿನ ಇತಿಹಾಸದಲ್ಲಿ ವೀರವನಿತೆ ಮಹಾದೇವಿಯವರು ತನ್ನದೇ ಛಾಪು ಮೂಡಿಸಿದ್ದಾರೆ. ಇಂತಹ ಮಹಾಸಾಧ್ವಿಗೆ ಸಂಬಂಧಿಸಿದಂತೆ ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ 5 ಭಾಷೆಗಳಲ್ಲಿ ಸಿನಿಮಾ ನಿರ್ಮಿಸಲಾಗು ತ್ತಿದೆ. ಆದರೆ ಮಹಾದೇವಿ ಪಾತ್ರದಲ್ಲಿ ನೀಲಿ ಚಿತ್ರ ಖ್ಯಾತಿಯ ನಟಿ ಸನ್ನಿಲಿಯೋನ್ ಕಾಣಿಸಿ ಕೊಳ್ಳುತ್ತಿದ್ದು, ಇದು ನಮ್ಮ ಸಂಸ್ಕøತಿಗೆ ಧಕ್ಕೆ ತರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾದೇವಿ ಅವರ ಜೀವನ ಚರಿತ್ರೆ ಆಧರಿಸಿ `ವೀರ ಮಹಾದೇವಿ’ ಶೀರ್ಷಿಕೆ ಯಲ್ಲಿ ಸಿನಿಮಾ ಮಾಡುತ್ತಿದ್ದು, ಮಹಾದೇವಿ ಪಾತ್ರ ನಿರ್ವಹಿಸುತ್ತಿರುವ ಸನ್ನಿಲಿಯೋನ್ ಅವರನ್ನು ಕೈಬಿಡಬೇಕು. ಇಂತಹ ಮಹತ್ವದ ಪಾತ್ರವನ್ನು ಸನ್ನಿಲಿಯೋನ್ ನಿರ್ವಹಿಸುತ್ತಿರು ವುದು ಮಹಾದೇವಿ ಅವರಿಗೆ ಅಪಮಾನಿಸಿ ದಂತೆ ಎಂದು ಕಿಡಿಕಾರಿದರು. ಯುವಸೇನೆ ಜಿಲ್ಲಾಧ್ಯಕ್ಷ ಜಿ.ಬಸವಣ್ಣ, ಕಾರ್ಯದರ್ಶಿ ಕೆ.ಸಿ.ಶಿವಣ್ಣ, ಕಾರ್ಯಕರ್ತರಾದ ಲೋಕೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »