ತೋಂಟದಾರ್ಯ ಶ್ರೀಗಳಿಗೆ ಶ್ರದ್ಧಾಂಜಲಿ
ಮೈಸೂರು

ತೋಂಟದಾರ್ಯ ಶ್ರೀಗಳಿಗೆ ಶ್ರದ್ಧಾಂಜಲಿ

October 23, 2018

ಮೈಸೂರು:  ಗದಗಿನ ತೋಂಟದಾರ್ಯ ಮಠದ ಶ್ರೀ ಸಿದ್ದಲಿಂಗೇ ಶ್ವರ ಸ್ವಾಮೀಜಿಯವರ ನಿಧನಕ್ಕೆ ಕರ್ನಾಟಕ ದಲಿತ ಪ್ಯಾಂಥರ್ಸ್, ಜಿಲ್ಲಾ ಘಟಕ ಶ್ರದ್ಧಾಂಜಲಿ ಸಲ್ಲಿಸಿತು. ಸಭೆಯಲ್ಲಿ ಪ್ರಧಾನ ಸಂಚಾಲಕ ವಿ.ವೆಂಕಟೇಶ್ ಮಾತನಾಡಿ, ಶ್ರೀಗಳ ನಿಧನ ದಿಂದ ಪ್ರಗತಿಪರ ಹೋರಾಟಕ್ಕೆ ತುಂಬಾ ನಷ್ಟ ಉಂಟಾ ಗಿದೆ. ಶ್ರೀಗಳು ಬುದ್ಧ, ಬಸವಣ್ಣನವರು ಕಂಡಂತಹ ಸಮಾಜದಲ್ಲಿ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ದಲಿತರ ಮತ್ತು ಹಿಂದುಳಿದವರ ಅಭಿವೃದ್ಧಿಗಳ ಬಗ್ಗೆ ವಿಚಾರವುಳ್ಳವರಾಗಿದ್ದರು ಎಂದರು. ಜಿಲ್ಲಾ ಸಂಚಾಲಕ ರಾಮಸ್ವಾಮಿ ಮಾತನಾಡಿ, ಶ್ರೀಗಳು ಬೆತ್ತಲೆ ಸೇವೆ, ಮಡೆ ಸ್ನಾನ, ಕಿರೀಟ ಧಾರಣೆ, ಫಲಕ ಉತ್ಸವ, ದೇವದಾಸಿ ಪದ್ಧತಿಯಂತಹ ಸಂಪ್ರದಾಯದ ವಿರೋಧಿಗಳಾಗಿದ್ದು, ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೊಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದರು. ಸಭೆಯಲ್ಲಿ ಹೆಚ್.ಬಿ. ರವಿ, ಶಿವಮಾದಯ್ಯ, ಜೋಗಿಸಿದ್ದಯ್ಯ, ಎಸ್. ರಾಜು, ದಿವ್ಯ ಲಿಂಗಯ್ಯ, ಶಿವಕುಮಾರ್, ಎಸ್. ಕೇಶವಮೂರ್ತಿ ಮತ್ತಿತರರು ಹಾಜರಿದ್ದರು.

Translate »