10 ದಿನಗಳ ಮಾನವಶಾಸ್ತ್ರ ಸಂಶೋಧನಾ ವಿಧಾನ ಕೋರ್ಸ್ ಕಾರ್ಯಾಗಾರಕ್ಕೆ ಚಾಲನೆ
ಮೈಸೂರು

10 ದಿನಗಳ ಮಾನವಶಾಸ್ತ್ರ ಸಂಶೋಧನಾ ವಿಧಾನ ಕೋರ್ಸ್ ಕಾರ್ಯಾಗಾರಕ್ಕೆ ಚಾಲನೆ

October 23, 2018

ಮೈಸೂರು:  ಮೈಸೂರು ವಿಶ್ವ ವಿದ್ಯಾನಿಲಯದ ಮಾನವಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ರೀಸರ್ಚ್ (ಐಸಿಎಸ್‍ಎಸ್‍ಆರ್) ಆಶ್ರಯದಲ್ಲಿ ಆಯೋಜಿಸಿದ್ದ 10 ದಿನಗಳ ಎಂಫಿಲ್, ಪಿಹೆಚ್.ಡಿ, ಪಿಡಿಎಫ್ ಸಂಶೋಧಕರ ಸಂಶೋಧನಾ ವಿಧಾನ ಕೋರ್ಸ್ ಕಾರ್ಯಾಗಾರಕ್ಕೆ ಸೋಮವಾರ ಚಾಲನೆ ದೊರೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಪ್ರೊ.ಆಯಿಷಾ ಎಂ.ಶರೀಫ್, 10 ದಿನಗಳ ಕಾರ್ಯಾ ಗಾರದಲ್ಲಿ ಮಾನವಶಾಸ್ತ್ರದ ಮೂಲಕ ಎಲ್ಲಾ ಸಮುದಾಯ ಗಳನ್ನು ವಿವಿಧ ದೃಷ್ಟಿಕೋನಗಳಿಂದ ಅಧ್ಯಯನ ನಡೆಸಲಾಗು ತ್ತದೆ. ಇದರಿಂದ ಸಮುದಾಯಗಳು ಮತ್ತು ದೇಶಗಳ ನಡುವಿನ ತಿಳುವಳಿಕೆ ಉಂಟಾ ಗುತ್ತದೆ ಎಂದರು. ನಮ್ಮ ಜೀವನದಲ್ಲಿ ಮಾನವ, ಮಾನವನ ವರ್ತನೆ, ಹಿಂದಿನ ಮತ್ತು ಪ್ರಸ್ತುತತೆ ಕುರಿತು ತಿಳಿಯಬಹುದಾಗಿದೆ. ನಮ್ಮ ಜೀವನಕ್ಕೆ ಅರ್ಥ ನೀಡಲು ಈ ಅಧ್ಯಯನ ನೆರವಾಗುತ್ತದೆ. ಮಾನವಶಾಸ್ತ್ರದ ಜೈವಿಕ ಅಭಿವೃದ್ಧಿ, ಮಾನವ ಸಂಸ್ಕøತಿ, ಸಾಮಾಜಿಕ ಜೀವನದ ಮೇಲಿನ ಪರಿಣಾಮ ಕುರಿತಂತೆ ಅಧ್ಯಯನಕ್ಕೆ ಇದು ಸುಲಭವಾಗಲಿದೆ ಎಂದು ಹೇಳಿದರು.

ಪ್ರಖ್ಯಾತ ಮಾನವಶಾಸ್ತ್ರಜ್ಞ ಪ್ರೊ.ರುಥ್ ಬೆನೆಡಿಕ್ಟ್ ಪ್ರಕಾರ, ವಿಶ್ವದಲ್ಲಿ ಮಾನವನನ್ನು ಸುರಕ್ಷಿತವಾಗಿಡುವುದೇ ಮಾನವಶಾಸ್ತ್ರದ ಉದ್ದೇಶ. ಮಾನವಶಾಸ್ತ್ರ ಜ್ಞಾನದ ಕಲಿಕೆಯಿಂದ ಸಮಕಾಲೀನ ಪ್ರಪಂಚದ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಅಭಿಪ್ರಾಯ ಪಟ್ಟರು. ಕಾರ್ಯಾಗಾರ ಹಮ್ಮಿಕೊಂಡಿದ್ದಕ್ಕಾಗಿ ಐಸಿಎಸ್‍ಎಎಸ್‍ಆರ್‍ಗೆ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಒಡಿಷಾ ರಾಜ್ಯದ ಸಂಬಲ್‍ಪುರ್ ವಿಶ್ವವಿದ್ಯಾನಿಲಯದ ಮಾನವ ಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಪ್ರೇಮಾನಂದ ಪಂಡ, ನೆದರ್‍ಲ್ಯಾಂಡ್‍ನ ಯುರೋಪಿಯನ್ ಯೂನಿವರ್ಸಿಟಿ ಆಫ್ ವೆಸ್ಟ್‍ನ ಕುಲಪತಿ ಪ್ರೊ.ಮೋಹನ್ ಕೆ.ಗೌತಮ್, ಮೈಸೂರು ವಿವಿ ಕುಲಸಚಿವ ಡಾ.ಆರ್.ರಾಜಣ್ಣ, ಮಾನವಶಾಸ್ತ್ರ ಅಧ್ಯಯನ ವಿಭಾಗದ ಛೇರ್ಮನ್ ಪ್ರೊ.ಎಂ.ಆರ್.ಗಂಗಾಧರ್ ಇನ್ನಿತರರು ಉಪಸ್ಥಿತರಿದ್ದರು.

Translate »