ಬೇಲೂರಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಹಾಸನ

ಬೇಲೂರಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

January 9, 2019

ಬೇಲೂರು: ದೇಶವ್ಯಾಪ್ತಿ ಮಂಗಳವಾರ ಕರೆ ನೀಡಿದ್ದ ಸಾರ್ವತ್ರಿಕ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳ ಸಮಿತಿಯ ಮಹಿಳಾ ಕಾರ್ಯಕರ್ತರು ಬೆಂಬಲ ಸೂಚಿಸಿ, ಪಟ್ಟಣದ ಪ್ರವಾಸಿ ಮಂದಿರದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಕೆಂಪೇಗೌಡ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

ಬೇಲೂರಿನಲ್ಲಿ ಕರೆಯಲಾಗಿದ್ದ ಬಂದ್ ಆಚರಣೆಗೆ ನೀರಸ ಪ್ರತಿಕ್ರಿಯೆ ಕಂಡು ಬಂದಿತು. ಎಂದಿನಂತೆ ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳು ಬಾಗಿಲು ತೆರೆದು ವ್ಯಾಪಾರ ನಡೆಸು ತ್ತಿದ್ದವು. ಎಂದಿನಂತೆ ಖಾಸಗಿ ವಾಹನ ಗಳು, ಆಟೋ, ಮ್ಯಾಕ್ಸಿ ಕ್ಯಾಬ್, ಕಾರು, ಗೂಡ್ಸ್ ವಾಹನಗಳು ಸಂಚರಿಸಿದವು. ಆದರೆ ಕೆಎಸ್‍ಆರ್‍ಟಿಸಿ ಸಂಚಾರ ಮಾತ್ರ ನಿಲುಗಡೆಯಾದ ಸನ್ನಿವೇಶ ಕಂಡು ಬಂದಿತ್ತು. ಇದರಿಂದ ಶಾಲಾ ಮಕ್ಕಳಿಗೆ ಹಾಗೂ ಪ್ರಯಾ ಣಿಕರಿಗೆ ತೊಂದರೆಯುಂಟಾಯಿತು. ಇದನ್ನು ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ.

ಕೆಂಪೇಗೌಡ ವೃತ್ತದ ಬಳಿ ಸಮಾವೇಶ ಗೊಂಡ ನೂರಾರು ಮಹಿಳಾ ಕಾರ್ಯ ಕರ್ತೆಯರು ರಸ್ತೆ ತಡೆ ನಡೆಸಿದರು. ಕಾರ್ಮಿಕ ಸಂಘಟನೆಯ ತಾಲೂಕು ಅಧ್ಯಕ್ಷೆ ಇಂದಿರಮ್ಮ ಮಾತನಾಡಿ, ದೇಶಕ್ಕೆ ಅನ್ನ ಕೊಡುವ ರೈತರು, ದೇಶಕ್ಕೆ ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರು, ದೇಶಕ್ಕೆ ಸೇವೆ ಯನ್ನು ಮಾಡುವ ನೌಕರರು ಹಾಗೂ ಕೂಲಿಯನ್ನು ನಂಬಿರುವ ಕೃಷಿ ಕೂಲಿ ಕಾರ್ಮಿಕರು, ಸಣ್ಣಪುಟ್ಟ ಉದ್ಯಮ ಮಾಡುವ ವ್ಯಾಪಾರಿಗಳು ಮತ್ತು ಮಾರಾಟಗಾರರ ಬದುಕು ಅತಂತ್ರವಾಗಿದ್ದು, ಹಲವು ಗಂಭೀರವಾದ ಪರಿಸ್ಥಿತಿಯನ್ನು ಎದುರಿ ಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶದ ಆರ್ಥಿಕ ಸಾರ್ವಭೌಮತೆಗೆ ಧಕ್ಕೆ ತರು ವಂತಹ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದು ದೂರಿದರು.

ಮುಂದಿನ ದಿನಗಳಲ್ಲಿ ದೇಶದ ಜನರು ಮೋದಿ ಸರ್ಕಾರಕ್ಕೆ ತಕ್ಕ ಉತ್ತರ ನೀಡಲಿ ದ್ದಾರೆ. ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರವನ್ನು ವಿರೋಧಿಸಲು ದೇಶದ ಕಾರ್ಮಿಕ ಸಂಘಟನೆಗಳು ಹಾಗೂ ಹಲವು ಸಂಘಟನೆಗಳು ಒಂದಾಗಿ ದೇಶವ್ಯಾಪ್ತಿ ಮುಷ್ಕರವನ್ನು ಯಶಸ್ವಿಯಾಗಿ ನಡೆಸುತ್ತಿವೆ. ಇದಕ್ಕೆ ತಾಲೂಕಿನ ಜನರು ಸಹಕಾರ ನೀಡಬೇಕು. ನಾಳಿನ ಬಂದ್‍ಗೂ ಬೆಂಬಲ ಸೂಚಿಸಿ, ಸ್ವಯಂಪ್ರೇರಿತವಾಗಿ ಬಂದ್ ಆಚರಿಸಬೇಕು ಎಂದು ಮನವಿ ಮಾಡಿದರು.

ಮುಷ್ಕರದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ರುದ್ರಯ್ಯ, ಉಪಾಧ್ಯಕ್ಷೆ ವಿನೋದ, ಕಾರ್ಯದರ್ಶಿ ಸಾವಿತ್ರಿ, ಸಹ ಕಾರ್ಯದರ್ಶಿ ಕಾಮಾಕ್ಷಿ ರಾಜು, ಖಜಾಂಚಿ ಮಂಜುಳಾ, ಮುಖಂಡ ಅಂಥೋನಿ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

Translate »