ಕಾರ್ಮಿಕ ಕಾಯ್ದೆ ದುರ್ಬಲಗೊಳಿಸದಂತೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಕಾರ್ಮಿಕ ಕಾಯ್ದೆ ದುರ್ಬಲಗೊಳಿಸದಂತೆ ಆಗ್ರಹಿಸಿ ಪ್ರತಿಭಟನೆ

May 14, 2020

ಮೈಸೂರು, ಮೇ 13(ಪಿಎಂ)- ಲಾಕ್ ಡೌನ್ ನೆಪದಲ್ಲಿ ಕಾರ್ಮಿಕ ಕಾಯ್ದೆ ದುರ್ಬಲ ಗೊಳಿಸುವ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಳ್ಳಬಾರದು. ವಲಸೆ ಕಾರ್ಮಿಕರು ಅವರ ಊರಿಗೆ ಹೋಗಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ `ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್’ನ (ಎಐ ಯುಟಿಯುಸಿ) ಮೈಸೂರು ಜಿಲ್ಲಾ ಸಮಿತಿ ಯಿಂದ ಬುಧವಾರ ನಗರದಲ್ಲಿ ಪ್ರತಿ ಭಟನೆ ನಡೆಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾ ಕಾರರು, ಕೊರೊನಾ ನೆಪದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಮುಂದಿನ ಮೂರು ವರ್ಷಕ್ಕೆ ಕಾರ್ಮಿಕ ಕಾಯ್ದೆ ದುರ್ಬಲ ಗೊಳಿಸುವ ಯತ್ನ ಮಾಡುತ್ತಿವೆ. ಕೆಲಸದ ಅವಧಿ ಹೆಚ್ಚಳ, ಕೆಲಸದಿಂದ ವಜಾ ಹಾಗೂ ವೇತನ ಕಡಿತ ಕ್ರಮಗಳ ಮೂಲಕ ಕಾರ್ಮಿಕರಿಗೆ ಸೇವಾ ಭದ್ರತೆ ಇಲ್ಲದಂತೆ ಮಾಡುವ ಪ್ರಯತ್ನ ನಡೆಯುತ್ತಿವೆ ಎಂದು ಆರೋಪಿಸಿದರು. ಕಾರ್ಪೊರೇಟ್ ಕಂಪನಿ ಗಳಿಗೆ ಅನುಕೂಲ ಮಾಡಿಕೊಡಲು ಈಗಿ ರುವ ಕಾರ್ಮಿಕ ಕಾನೂನುಗಳನ್ನು ಮುಂದಿನ ಮೂರು ವರ್ಷ ಅಮಾನತಿನಲ್ಲಿಡಲು ಮತ್ತು ಕಾರ್ಮಿಕರ ಕೆಲಸದ ಅವಧಿಯನ್ನು 8ರಿಂದ 12 ಗಂಟೆಗಳಿಗೆ ಹೆಚ್ಚಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಇದೇ ಮಾದರಿಯನ್ನು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳೂ ಅನುಸರಿಸಲು ಮುಂದಾ ಗಿವೆ. ಇಂತಹ ಕಾರ್ಮಿಕ ವಿರೋಧಿ ಕ್ರಮ ಗಳನ್ನು ಯಾವುದೇ ಕಾರಣಕ್ಕೂ ಕೈಗೊಳ್ಳ ಬಾರದು ಎಂದು ಒತ್ತಾಯಿಸಿದರು.

ವಲಸೆ ಕಾರ್ಮಿಕರು ತಮ್ಮ ಊರಿಗೆ ರೈಲು, ಬಸ್‍ಗಳಲ್ಲಿ ತೆರಳಲು ಪ್ರಯಾಣಕ್ಕೆ ಉಚಿತ ವ್ಯವಸ್ಥೆ ಮಾಡಬೇಕು. ಊಟೋ ಪಚಾರದ ವ್ಯವಸ್ಥೆ ಮಾಡಬೇಕು. ಕೊರೊನಾ ಸೋಂಕು ತಗುಲಿದವರಿಗೆ ಉಚಿತ ಚಿಕಿತ್ಸೆ ನೀಡಿ, ಅವರ ಕುಟುಂಬ ನಿರ್ವಹಣೆಗೆ ಆರ್ಥಿಕ ನೆರವು ಘೋಷಿಸ ಬೇಕು ಎಂದು ಆಗ್ರಹಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ವಿ.ಯಶೋಧರ್, ಜಿಲ್ಲಾ ಕಾರ್ಯ ದರ್ಶಿ ಚಂದ್ರಶೇಖರ್ ಮೇಟಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »