ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿ  ಅಭಿಮಾನಿಗಳಿಂದ ವಿನೂತನ ಪ್ರತಿಭಟನೆ
ಮೈಸೂರು

ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿ ಅಭಿಮಾನಿಗಳಿಂದ ವಿನೂತನ ಪ್ರತಿಭಟನೆ

December 30, 2018

ಮೈಸೂರು: ಚಲನಚಿತ್ರ ನಟ ದಿ.ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ಮೈಸೂರಿನಲ್ಲೇ ನಿರ್ಮಿಸುವಂತೆ ಆಗ್ರಹಿಸಿ ಪಾತಿ ಫೌಂಡೇಷನ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗದ ಕಾರ್ಯಕರ್ತರು ಶನಿವಾರ ಭಿಕ್ಷೆ ಬೇಡುವ ಮೂಲಕ ವಿನೂತನ ರೀತಿ ಮೈಸೂರಿನ ಜಗನ್ಮೋಹನ ಅರಮನೆ ಮುಂಭಾಗ ಶನಿವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು.

ಸರ್ಕಾರ ಕನ್ನಡ ಚಲನಚಿತ್ರ ರಂಗದ ಮೇರುನಟ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ವಿಷಯ ದಲ್ಲಿ ಮೀನಾಮೇಷ ಎಣಿಸುತ್ತಿದೆ. ಕೂಡಲೇ ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ವೇಳೆ ಬಳಗದ ಮುಖಂಡ ಎಂ.ಡಿ.ಪಾರ್ಥಸಾರಥಿ ಮಾತನಾಡಿ, ವಿಷ್ಣುವರ್ಧನ್ ಅವರು ಮೈಸೂರಿನಲ್ಲಿ ಹುಟ್ಟಿ, ಮೈಸೂರಿನಲ್ಲೇ ಕೊನೆಯುಸಿರೆಳೆದರು. ಶಾಂತಿಪ್ರಿಯರಾದ ವಿಷ್ಣುವರ್ಧನ್ ಎಂದಿಗೂ, ಯಾರೊಂದಿಗೂ ತಕರಾರು ಮಾಡಿಕೊಂಡವರಲ್ಲ. ನಾವು ಕೂಡ ಕಳೆದ 9 ವರ್ಷಗಳಿಂದ ಅವರ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ಶಾಂತಿಯುತ ಹೋರಾಟ ಮಾಡುತ್ತಿದ್ದೇವೆ. ಆದರೆ ಸರ್ಕಾರಗಳು ಅವರ ಪ್ರತಿಮೆ ಮತ್ತು ಸ್ಮಾರಕ ನಿರ್ಮಿಸಲು ನಿರಾಸಕ್ತಿ ತೋರುತ್ತಿವೆ ಎಂದು ದೂರಿದರು.

ವಿಕ್ರಮ್ ಅಯ್ಯಂಗಾರ್ ಮಾತನಾಡಿ, ಕೆಲವು ರಾಜ ಕಾರಣಿಗಳು ವಿಷ್ಣುವರ್ಧನ್ ಚಿತ್ರ ನಿರ್ಮಿಸಿ, ಹಣ ಮಾಡಿ ಕೊಂಡರು. ಆದರೆ ಇಂದು ಅವರ ಸ್ಮಾರಕ ನಿರ್ಮಿಸುವ ವಿಷಯದಲ್ಲಿ ಆಸಕ್ತಿ ತೋರದೆ ದಿವ್ಯ ನಿರ್ಲಕ್ಷ್ಯ ವಹಿಸುತ್ತಿ ದ್ದಾರೆ. ಇದು ಒಬ್ಬ ಜನಪ್ರಿಯ ನಟನಿಗೆ ಮಾಡುತ್ತಿರುವ ಅವಮಾನ. ಮೈಸೂರಿಗೆ ಮಂಜೂರಾಗಿದ್ದ ಚಿತ್ರ ನಗರಿ ಯನ್ನು ರಾಮನಗರಕ್ಕೆ ಸ್ಥಳಾಂತರಿಸಿದರು. ಈಗಲೂ ವಿಷ್ಣುವರ್ಧನ್ ಸ್ಮಾರಕವನ್ನು ಬೆಂಗಳೂರಿಗೆ ಸ್ಥಳಾಂತರಿಸಿ ಪ್ರವಾಸಿ ತಾಣವಾದ ಮೈಸೂರನ್ನು ನಿರ್ಲಕ್ಷ್ಯ ಮಾಡು ತ್ತಿದ್ದಾರೆ. ಈ ಕೂಡಲೇ ಪ್ರವಾಸೋದ್ಯಮ ಸಚಿವ ಸಾರಾ. ಮಹೇಶ್ ಅವರು ಮಧ್ಯಸ್ಥಿಕೆ ವಹಿಸಿ, ವಿಷ್ಣುವರ್ಧನ್ ಸ್ಮಾರಕವನ್ನು ಮೈಸೂರಿನಲ್ಲೇ ನಿರ್ಮಿಸುವಂತೆ ಒತ್ತಾಯಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈಕಾ ಪ್ರೇಮ್ ಕುಮಾರ್, ಇಳೈ ಆಳ್ವಾರ್ ಸ್ವಾಮೀಜಿ, ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ, ಮೈಸೂರು ರಕ್ಷಣಾ ವೇದಿಕೆ ಯುವ ಘಟಕದ ಅಧ್ಯಕ್ಷ ಗುರುರಾಜ್ ಶೆಟ್ಟಿ, ವಿಷ್ಣು ಸೇನಾ ಅಧ್ಯಕ್ಷ ಸುರೇಶ್, ಜಯಸಿಂಹ ಶ್ರೀಧರ್, ಹರೀಶ್ ನಾಯ್ಡು, ಫೆÇೀಟೋ ಗಣೇಶ್, ಏರ್‍ಟೆಲ್ ಮಂಜು, ಟಿ.ಎಸ್.ಅರುಣ್, ನವೀನ್, ರಂಗನಾಥ್, ಮಹದೇವ್, ಕುಮಾರ್, ದೀಪಕ್, ಜಡೇಜಾ, ಕೆ.ಆರ್.ಎಸ್.ರಾಜಣ್ಣ, ಮಹಾಲಿಂಗು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »