ಪರಿಶ್ರಮದಿಂದಷ್ಟೇ ಯಶಸ್ಸು ಸಾಧ್ಯ
ಮೈಸೂರು

ಪರಿಶ್ರಮದಿಂದಷ್ಟೇ ಯಶಸ್ಸು ಸಾಧ್ಯ

December 30, 2018

ಮೈಸೂರು: ನಿರಂತರ ಪ್ರಯತ್ನ, ಪರಿಶ್ರಮ ಮತ್ತು ಕಠಿಣಾಭ್ಯಾಸದಿಂದ ಯಶಸ್ಸು ಸಾಧ್ಯವೇ ಹೊರತು ಸೋಮಾರಿತನ ದಿಂದಲ್ಲ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಡಾ.ಎ.ಖಾದರ್‍ಪಾಷ ಅಭಿಪ್ರಾಯಪಟ್ಟರು.ಮುಕ್ತಗಂಗೋತ್ರಿಯ ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರ ಬೇತಿ ಕೇಂದ್ರದ ವತಿಯಿಂದ ನಡೆದ ಕೆ ಸೆಟ್ ಮತ್ತು ಯುಜಿಸಿ ನೆಟ್ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾ ರಂಭದಲ್ಲಿ ಮಾತನಾಡಿದರು.

ಓದಿಗೆ ನಿರ್ದಿಷ್ಟ ಸಮಯ, ಸಂದರ್ಭ ವಿಲ್ಲ. ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಎಂಬ ಭೇದವಿಲ್ಲ. ಒಬ್ಬ ವ್ಯಕ್ತಿ 13 ರಿಂದ 15 ಗಂಟೆ ಓದಿದರೆ, ಮತ್ತೊಬ್ಬ ಕೇವಲ 2 ಗಂಟೆ ಓದಬಹುದು. ಅಂತಿಮವಾಗಿ ಯಶಸ್ಸು ಕೇವಲ 2 ಗಂಟೆ ಓದಿದವನಿಗೆ ಲಭಿಸ ಬಹುದು. ಇದಕ್ಕೆ ಕಾರಣ, ಆತ ವಸ್ತುವಿಷ ಯದ ಮೇಲೆ ತೋರುವ ಆಸಕ್ತಿ, ಶ್ರದ್ಧೆ, ಪ್ರೀತಿ ಜತೆಗೆ ಅರ್ಥೈಸಿಕೊಳ್ಳುವ ಮನಸ್ಥಿತಿಯೇ ಹೊರತು ಮತ್ತೇನೂ ಅಲ್ಲ ಎಂದೂ ಅಭಿಪ್ರಾಯಪಟ್ಟರು.

ಕರಾಮುವಿ ಕುಲಸಚಿವ ಪ್ರೊ. ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಬ್ಬ ವ್ಯಕ್ತಿ ಹತ್ತಾರು ಬಾರಿ ಸೋಲಬಹುದು. ಆದರೆ, ಒಮ್ಮೆಯಾದರೂ ಗೆದ್ದೇಗೆಲ್ಲುತ್ತಾನೆ. ಅಂತಹ ಆತ್ಮವಿಶ್ವಾಸ ಬೆಳೆಸಿಕೊಂಡು ನಿರಂತರ ಶ್ರಮಿಸಿ, ಕಠಿಣಾಭ್ಯಾಸ ಮಾಡಿದರೆ ಸೋಲು ಹತ್ತಿರ ಸುಳಿಯುವುದಿಲ್ಲ. ಅದನ್ನು ಬಿಟ್ಟು ಸೋಮಾರಿತನ ಮೈಗೂಡಿಸಿಕೊಂಡರೆ ಗೆಲುವು ಸಹ ಲಭಿಸುವುದಿಲ್ಲ ಎಂದರು.

Translate »