ಮೈಸೂರಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ 2ನೇ ರಾಜ್ಯ ಮಟ್ಟದ ಸಮ್ಮೇಳನ ಆರಂಭ
ಮೈಸೂರು

ಮೈಸೂರಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ 2ನೇ ರಾಜ್ಯ ಮಟ್ಟದ ಸಮ್ಮೇಳನ ಆರಂಭ

December 30, 2018

ಮೈಸೂರು: ಎರಡು ದಿನಗಳ ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ರಾಜ್ಯ ಮಟ್ಟದ 2ನೇ ಸಾಹಿತ್ಯ ಸಮ್ಮೇಳನವು ಇಂದು ಮೈಸೂರಿನಲ್ಲಿ ಮಾನಸ ಗಂಗೋತ್ರಿಯಲ್ಲಿರುವ ಸೆನೆಟ್ ಭವನದಲ್ಲಿ ಆರಂಭವಾಗಿದೆ.

ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕ ಮತ್ತು ಅಖಿಲ ಭಾರ ತೀಯ ಸಾಹಿತ್ಯ ಪರಿಷದ್ ಮೈಸೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ `ಸಾಹಿತ್ಯದಲ್ಲಿ ಭಾರತೀಯತೆ’ ವಿಷಯ ಕುರಿತ ರಾಜ್ಯ ಸಮ್ಮೇಳನವನ್ನು ರಾಜಮಾತೆ ಪ್ರಮೋದಾದೇವಿ ಒಡೆಯರ್ ದೀಪ ಬೆಳಗಿ ಸುವ ಮೂಲಕ ಉದ್ಘಾಟಿಸಿದರು.ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ಧ, ಸಾಹಿತ್ಯಾಸಕ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದ ರಾಜಮನೆತನದ ಪ್ರತಿನಿಧಿಯಾಗಿ ಸಮ್ಮೇಳನದಲ್ಲಿ ಭಾಗವಹಿ ಸಲು ಸಂತೋಷವಾಗುತ್ತಿದೆ ಎಂದರು.

ಬೇರೆಯವರು ಕಂಡಾಗ `ನಮಸ್ಕಾರ’ ಎಂಬ ಸಂಬೋಧನೆಯು ದೇಶದ ಉದ್ದ ಗಲದಲ್ಲಿ ಚಾಲ್ತಿಯಲ್ಲಿದೆ, ಹಿರಿಯರಿಗೆ ಗೌರವ ನೀಡಿ ಆಶೀರ್ವಾದ ಪಡೆಯು ವುದು, ದೀಪ ಬೆಳಗಿಸುವುದು ಭಾರತೀಯ ಸಂಸ್ಕøತಿಯ ಪ್ರತೀಕವಾಗಿದೆ ಎಂದು ನುಡಿದರು

ಋಗ್ವೇದ, ರಾಮಾಯಣ, ಮಹಾ ಭಾರತವನ್ನು ಸಂಸ್ಕøತದಿಂದ ದೇಶದ ಇನ್ನಿತರ ಭಾಷೆಗಳಿಗೂ ಅನುವಾದ ಮಾಡಿದಲ್ಲಿ ಭಾರತೀಯ ಸಂಸ್ಕøತಿಯನ್ನು ವಿಸ್ತರಿಸಿದಂತಾಗು ತ್ತದೆ. ನಮ್ಮ ಸಾಹಿತ್ಯ ಶ್ರೀಮಂತಿಕೆ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಮ್ಮೇಳನದ ಸರ್ವಾಧ್ಯಕ್ಷರಾದ ಖ್ಯಾತ ಸಾಹಿತಿ ಪ್ರೊ.ಪ್ರೇಮಶೇಖರ ಅಧ್ಯಕ್ಷತೆ ವಹಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಋಷಿಕುಮಾರ್ ಮಿಶ್ರಾ ಅವರು ದಿಕ್ಸೂಚಿ ಭಾಷಣ ಮಾಡಿದರು.ಪರಿಷದ್ ರಾಜ್ಯ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ, ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್, ಪರಿಷದ್ ಮೈಸೂರು ಅಧ್ಯಕ್ಷ ಸಾತನೂರು ದೇವರಾಜ್, ಕಾರ್ಯದರ್ಶಿ ಡಾ.ಇ.ಸಿ. ನಿಂಗ ರಾಜ್‍ಗೌಡ, ಸ್ವಾಗತ ಸಮಿತಿಯ ಹರೀಶ್ ಶೆಣೈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ವಿಸ್ಮಯ ಮತ್ತು ನಿಸರ್ಗ ಪ್ರಾರ್ಥಿಸಿದರೆ. ನಿಂಗರಾಜ್ ಮತ್ತು ತಂಡದವರು ನಾಡ ಗೀತೆಯನ್ನು ಪ್ರಸ್ತುತಪಡಿಸಿದರು.ಸಾಹಿತ್ಯ ಪರಿಷದ್ ಹೊರತಂದಿರುವ `ಆಪ್ಯಾಯ’ ಸಾಹಿತ್ಯ ಸಂಗ್ರಹಗಳ ಕಿರು ಹೊತ್ತಿಗೆಯನ್ನು ಪ್ರಮೋದಾದೇವಿ ಒಡೆ ಯರ್ ಬಿಡುಗಡೆ ಮಾಡಿದರು.

ಅದಕ್ಕೂ ಮೊದಲು ಸಮ್ಮೇಳನದ ಸರ್ವಾ ಧ್ಯಕ್ಷ ಪ್ರೊ.ಪ್ರೇಮಶೇಖರ್ ಮತ್ತು ಪರಿಷದ್ ರಾಜ್ಯ ಅಧ್ಯಕ್ಷರಾದ ಸಾಹಿತಿ ಡಾ.ದೊಡ್ಡ ರಂಗೇಗೌಡ ಅವರನ್ನು ಮಾನಸಗಂಗೋತ್ರಿಯ ಬೋಗಾದಿ ರಸ್ತೆಯಲ್ಲಿರುವ ರಾಷ್ಟ್ರಕವಿ ಕುವೆಂಪು ಪ್ರತಿಮೆ ಬಳಿಯಿಂದ ಸಾರೋಟಿನಲ್ಲಿ ಪೂರ್ಣ ಕುಂಭ ಸ್ವಾಗತ ನೀಡಿ ಜಾನಪದ ಕಲಾ ತಂಡ ಗಳೊಂದಿಗೆ ಮೆರವಣಿಗೆಯಲ್ಲಿ ಕಾರ್ಯಕ್ರಮ ನಡೆಯುವ ಸೆನೆಟ್ ಭವನಕ್ಕೆ ಕರೆತರಲಾಯಿತು.

ಎರಡು ದಿನಗಳ ಸಮ್ಮೇಳನದಲ್ಲಿ ರಾಜ್ಯ ದಾದ್ಯಂತ ವಿವಿಧ ಜಿಲ್ಲೆಗಳಿಂದ ಸಾಹಿತಿಗಳು, ಸಾಹಿತ್ಯಾಸಕ್ತರು ಭಾಗವಹಿಸಿದ್ದು, ಅವರಿಗೆ ಊಟ, ತಿಂಡಿ, ವಸತಿ ವ್ಯವಸ್ಥೆ ಮಾಡಲಾಗಿದೆ. `ಕರ್ನಾ ಟಕದಲ್ಲಿ ಭಾಷೆಗಳ ಸಾಹಿತ್ಯದಲ್ಲಿ ಭಾರತೀ ಯತೆ’ `ಸಂಸ್ಕøತಿ ಸಾಹಿತ್ಯದಲ್ಲಿ ಭಾರತೀಯತೆ’ ಕುರಿತ ಗೋಷ್ಠಿಗಳು ಮಧ್ಯಾಹ್ನ ನಡೆದವು.

ಸಾಹಿತ್ಯದಿಂದ ಸಮುದಾಯದ ಶುದ್ಧೀಕರಣ ಸಾಧ್ಯ

ಮೈಸೂರು: ಸಾಹಿತ್ಯದಿಂದ ಸಮಾಜ ಹಾಗೂ ಸಮುದಾಯದ ಶುದ್ಧೀಕರಣ ಸಾಧ್ಯ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕ ಅಧ್ಯಕ್ಷರಾದ ನಾಡಿನ ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಮೈಸೂರಿನ ಸೆನೆಟ್ ಭವನದಲ್ಲಿ ಏರ್ಪಡಿಸಿರುವ 2ನೇ ರಾಜ್ಯ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಜನರಲ್ಲಿ ಸಹಬಾಳ್ವೆ, ಸಾಮರಸ್ಯ, ಮಾನವೀಯತೆ ಮೂಡಿಸುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಿಸುವುದೇ ಸಾಹಿತ್ಯದ ಹಾಗೂ ಸಾಹಿತಿಗಳ ಮೂಲ ಉದ್ದೇಶವಾಗಿದೆ ಎಂದರು.
ಭಾರತದ ಪರಂಪರೆಯಲ್ಲಿ ಸರ್ವಧರ್ಮ ಸಹಿಷ್ಣುತೆ, ಧಾರ್ಮಿಕ ನಂಬಿಕೆ ಚಿರಂತನವಾಗಿದೆ. ಜಾನಪದ, ವಚನ ಸಾಹಿತ್ಯ ಹಾಗೂ ಕೀರ್ತನೆಗಳಲ್ಲೂ ಮಾನವೀಯತೆಗಳಿವೆ. ಹಿತಾತ್ಮಕ ಚಿಂತನೆಯು ಭಾರತದ ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ ಎಂದ ಅವರು, ಮಾನಸ ಗಂಗೋತ್ರಿ ಕಲ್ಪನೆ ಮೂಡಿಸಿದ ರಾಷ್ಟ್ರಕವಿ ಕುವೆಂಪು ‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ಸೌಹಾರ್ದಿಕ ಸಂಬಂಧ ಬೆಸೆದಿರುವುದು ಸಾಹಿತ್ಯಕ್ಕೆ ಸೌಹಾದರ್À ಸಹಬಾಳ್ವೆ ಮೂಡಿಸುವ ಶಕ್ತಿ ಇದೆ ಎಂಬುದಕ್ಕೆ ನಿದರ್ಶನ ಎಂದರು.

ಆಂಗ್ಲರು ಗುಲಾಮರಂತೆ ಕಂಡು ಜೀತ ಪದ್ಧತಿಯನ್ನು ಅನುಸರಿಸಿದರೂ, ಅವರ ದರ್ಪಕ್ಕೆ ಭಾರತ ಜಗ್ಗಲಿಲ್ಲ, ಅಖಂಡ ಭಾರತ ಒಗ್ಗಟ್ಟಾಗಿ ನಿಂತು ನಮ್ಮ ಪರಂಪರೆ, ಸಂಸ್ಕøತಿ ಯನ್ನು ಸದೃಢಗೊಳಿಸಿದೆ ಎಂದ ಡಾ.ದೊಡ್ಡರಂಗೇಗೌಡರು, ಸಮಾಜದ ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಯೇ ಸಾಹಿತಿಗಳ ಮೂಲ ಉದ್ದೇಶವಾಗಿದೆ ಎಂದರು.
ನಮ್ಮ ಸಂಸ್ಕಾರ ಸರಿಯಿದ್ದರೆ ಸಮಾಜವನ್ನು ಪರಿವರ್ತಿಸಬಹುದು, ವಿದ್ವಜರ ಸಂಪರ್ಕ ನಮ್ಮ ಸಾಹಿತ್ಯದಲ್ಲಿ ಹಾಸು ಹೊಕ್ಕಾಗಿದೆ. ನಮ್ಮ ಗುರುಕುಲ ಶಿಕ್ಷಣ ಪದ್ಧತಿಯಿಂದ ಭಕ್ತಿ, ಗೌರವ ಭಾವನೆ ಮೂಡುವುದಲ್ಲದೆ, ಜಾತಿ ಪದ್ಧತಿ ನಿರ್ಮೂಲನೆ, ವಿಶಾಲ ಮನೋಭಾವ ಮೂಡಿಸಬಹುದಾಗಿದೆ ಎಂದು ಅವರು ಇದೇ ವೇಳೆ ನುಡಿದರು.
ತಾಯಿ ಭಾರತಾಂಬೆ ಪೂಜಿಸುತ್ತಿದ್ದ ದ.ರಾ.ಬೇಂದ್ರೆ ಅವರ ಕವಿತೆಗಳಲ್ಲಿ ಭಾರತೀಯತೆ ಕಂಡು ಬಂದರೆ, ಪು.ತಿ.ನ ಅವರು ತಮ್ಮ ಕೃತಿಗಳಲ್ಲಿ ದೇಶ ಪ್ರೇಮ ಮೂಡಿಸುವ ಪ್ರತಿಬಿಂಬಿಸಿದ್ದರೆ, ಶಿವರಾಮ ಕಾರಂತರ ಸಾಹಿತ್ಯದಲ್ಲಿ ಜೀತ ಪದ್ಧತಿ ನಿರ್ಮೂಲನೆ ಮನೋಧರ್ಮವನ್ನು ಕಾಣಬಹುದು ಎಂದು ನುಡಿದರು.

ವಿಕಾಸದಿಂದ ಸಮಾಜದ ಬದಲಾವಣೆ ಸಾಧ್ಯ; ಕ್ರಾಂತಿಯಿಂದಲ್ಲ

ಮೈಸೂರು: ಕ್ರಾಂತಿಯಿಂದ ಸಮಾಜ ಬದಲಾಯಿಸಲಾಗದು, ಅದು ವಿಕಾಸದಿಂದ ಮಾತ್ರ ಸಾಧ್ಯ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಸಮ್ಮೇಳನಾಧ್ಯಕ್ಷ ಪ್ರೊ.ಪ್ರೇಮಶೇಖರ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಮಾನಸ ಗಂಗೋತ್ರಿಯಲ್ಲಿರುವ ಸೆನೆಟ್ ಭವನದಲ್ಲಿ ಇಂದು ಆರಂಭವಾದ ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ 2ನೇ ರಾಜ್ಯ ಸಮ್ಮೇಳನ ಉದ್ಘಾಟನಾ ಸಮಾ ರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಕ್ರಾಂತಿ ಯಿಂದ ಸಮಾಜವನ್ನು ಬದಲಾಯಿಸಲಾಗದು, ಅದಾಗು ವುದು ವಿಕಾಸದಿಂದ. ಕ್ರಾಂತಿ ತರುವ ಬದಲಾವಣೆಗಳು ತಾತ್ಕಾಲಿಕ. ಆದರೆ ಉತ್ಕ್ರಾಂತಿ ತರುವ ಬದಲಾವಣೆಗಳು ಶಾಶ್ವತ ಎಂದರು.

ಕ್ರಾಂತಿಗಳು ಜೀವ ಹಾನಿಗೆ, ಸಾಮಾಜಿಕ ಅಲ್ಲೋಲ- ಕಲ್ಲೋಲಕ್ಕೆ ಕಾರಣವಾಗುತ್ತವೆ ಎಂಬುದನ್ನು ಫ್ರಾನ್ಸ್, ರಷ್ಯಾ, ಚೀನಾಗಳಂತಹ ದೇಶದಲ್ಲಿ ಕಂಡಿದ್ದೇವೆಯಾದ್ದರಿಂದ ವಿಕಾಸದ ಮೂಲಕವೇ ನಾವು ಬದಲಾವಣೆ ತರೋಣ. ನಮ್ಮಲ್ಲಿ ಭಾರತೀಯತೆಯನ್ನು ಮತ್ತೊಮ್ಮೆ ಜಾಗೃತಗೊಳಿಸಿ ನಮ್ಮ ಬದುಕು, ಬರಹಗಳಲ್ಲಿ ಅದು ಶಾಶ್ವತವಾಗಿ ನೆಲೆಗೊಳ್ಳಲಿ ಎಂದರು.ಜಗತ್ತಿಗೆ ಸಾಹಿತ್ಯ ನೀಡಿದ ನಾವು ಇಂದು ಸಾಹಿತ್ಯದಲ್ಲಿ ಭಾರತೀಯತೆ ಹುಡುಕುವಂತಾಗಿರುವುದು ನೋವುಂಟು ಮಾಡುವ ಸಂಗತಿ. ಭಾರತೀಯತೆಯ ಅರ್ಥ, ಮಹತ್ವವನ್ನು ಸಾಹಿತ್ಯದಲ್ಲಿ ಅರಿಯುವ ಪ್ರಯತ್ನ ಮಾಡದ ವರ್ಗವೊಂದು ಪ್ರಭುತ್ವದ ಜತೆ ಸೇರಿಕೊಂಡು ವೈಚಾರಿಕ ಕ್ಷೇತ್ರಗಳನ್ನು ಆಕ್ರಮಿಸಿ ಕೊಂಡಿರುವುದು ವಿಪರ್ಯಾಸ ಎಂದು ಅವರು ನುಡಿದರು.

ಭಾರತೀಯರಾದ ನಮಗೆ ಹಕ್ಕಿಗಿಂತ ಕರ್ತವ್ಯ, ಜವಾಬ್ದಾರಿ. ನಿರ್ವಹಣೆಯ ಅಗತ್ಯಕ್ಕನುಗುಣವಾಗಿ ವ್ಯಕ್ತಿ ಮತ್ತು ಸಮುದಾಯವು ಕೌಟುಂಬಿಕ, ಸಾಮಾಜಿಕ, ರಾಷ್ಟ್ರೀಯ ಬದುಕಿನಲ್ಲಿ ನಡೆಸುವ ಸಂಘರ್ಷವು ಈ ನೆಲದ ಜೀವನ ಮೌಲ್ಯ ಎಂದ ಪ್ರೊ.ಪ್ರೇಮಶೇಖರ್ ಅವರು, ಪ್ರತಿಯೊಬ್ಬನ ನಡೆ-ನುಡಿಯಲ್ಲಿ ಕರ್ತವ್ಯ ಮತ್ತು ಜವಾಬ್ದಾರಿಯ ಅರಿವು ಮತ್ತು ಆಚರಣೆ ಇದ್ದರೆ ಆತ ನಿಸ್ವಾರ್ಥಿಯಾಗುತ್ತಾನೆ ಎಂದರು.ವ್ಯಕ್ತಿ ಸ್ವಾರ್ಥಿಯಾಗಬಲ್ಲ, ಅವಿವೇಕಿಯಾಗಲೂ ಬಲ್ಲ. ಆದರೆ ಸಮಾಜ ಮಾತ್ರ ಎಂದಿಗೂ ನಿಸ್ವಾರ್ಥಿಯೇ. ಅದು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತದೆ ಎಂದೂ ಇದೇ ವೇಳೆ ನುಡಿದರು.

Translate »