ಮೈಸೂರು: ಮೈಸೂ ರಿನ ಮಹಾರಾಜ ಕಾಲೇಜು ಮೈದಾನ ದಲ್ಲಿ ಮಾಗಿ ಉತ್ಸವದ ಅಂಗವಾಗಿ ಏರ್ಪ ಡಿಸಿದ್ದ ಪ್ಯಾರಾ ಮೋಟರಿಂಗ್ ಅನ್ನು ತಾಂತ್ರಿಕ ದೋಷದ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿದೆ ಎಂದು ಬೆಂಗಳೂರು ಮೂಲದ ಏವಿಯೇಷನ್ ಅಂಡ್ ಸ್ಪೋಟ್ರ್ಸ್ ಎಂಟರ್ ಪ್ರೈಸಸ್ (ಬೇಸ್) ಸ್ಪಷ್ಟಪಡಿಸಿದೆ.
ಈ ಕುರಿತು ಬೇಸ್ ಮುಖ್ಯಸ್ಥ ಕುಮಾರ್ `ಮೈಸೂರು ಮಿತ್ರ’ನಿಗೆ ಪ್ರತಿ ಕ್ರಿಯಿಸಿ ಡಿ.26 ಸಂಜೆ 4.30ರ ವೇಳೆಯಲ್ಲಿ ಪ್ಯಾರಾ ಮೋಟರ್ ಲ್ಯಾಂಡಿಂಗ್ ವೇಳೆ ಮೈಸೂರು ವಿಶ್ವವಿದ್ಯಾನಿಲಯ ಮೈದಾ ನದ ಸಿಬ್ಬಂದಿ ಅಡ್ಡ ಬಂದಿದ್ದರು. ಇದನ್ನು ಗಮನಿಸದ ಚಾಲಕ, ಮೈದಾನ ಸಿಬ್ಬಂದಿಗೆ ಅಪ್ಪಳಿಸುವುದನ್ನು ತಪ್ಪಿಸಲು ಅದರ ದಿಕ್ಕು ಬದಲಾಯಿಸಿ ಸುರಕ್ಷಿತವಾಗಿ ಕೆಳಗಿಳಿಸಿದ್ದರು. ಈ ವೇಳೆ ಪ್ಯಾರಾ ಮೋಟರ್‍ನ ಕೇಬಲ್‍ಗೆ ಸ್ವಲ್ಪ ಹಾನಿಯಾಗಿತ್ತು. ಆದರೆ ಪ್ಯಾರಾ ಮೋಟರ್ ನೆಲಕ್ಕೆ ಅಪ್ಪಳಿಸಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.