ಅರಸು ಹೆಸರಲ್ಲಿ ಪ್ರಶಸ್ತಿ ನೀಡದ್ದಕ್ಕೆ ಶಾಸಕ ಹೆಚ್‍ಪಿಎಂ ನೇತೃತ್ವದಲ್ಲಿ ಪ್ರತಿಭಟನೆ
ಮೈಸೂರು

ಅರಸು ಹೆಸರಲ್ಲಿ ಪ್ರಶಸ್ತಿ ನೀಡದ್ದಕ್ಕೆ ಶಾಸಕ ಹೆಚ್‍ಪಿಎಂ ನೇತೃತ್ವದಲ್ಲಿ ಪ್ರತಿಭಟನೆ

August 21, 2020

ಮೈಸೂರು, ಆ.20(ಆರ್‍ಕೆಬಿ)- ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಹೆಸರಿನಲ್ಲಿ 2 ವರ್ಷದಿಂದ ಪ್ರಶಸ್ತಿ ನೀಡದೆ ದೇವರಾಜ ಅರಸು ಅವರನ್ನು ಅವಮಾನಿಸ ಲಾಗಿದೆ ಎಂದು ಕಲಾಮಂದಿ ರದ ಮೆಟ್ಟಿಲುಗಳ ಮೇಲೆ ಪ್ರತಿಭಟನೆ ನಡೆಯಿತು.

ಜಿಲ್ಲಾಡಳಿತ ಗುರುವಾರ ಆಯೋಜಿಸಿದ್ದ ಅರಸು 105ನೇ ಜನ್ಮದಿನಾಚರಣೆ ಕಾರ್ಯಕ್ರಮ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಉಪಸ್ಥಿತಿಯಲ್ಲಿ ಕಲಾಮಂದಿರ ಮನೆಯಂಗಳದಲ್ಲಿ ನಡೆಯುತ್ತಿದ್ದರೆ, ಹೊರಗೆ ಹುಣಸೂರು ಶಾಸಕ ಹೆಚ್.ಪಿ.ಮಂಜುನಾಥ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿ ಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸಿದ್ದರಾಮಯ್ಯ ಸರ್ಕಾರ ಇದ್ದಾಗ ಪ್ರತಿವರ್ಷ ದೇವರಾಜ ಅರಸು ಪ್ರಶಸ್ತಿ ನೀಡಲಾಗುತ್ತಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ 2019 ಮತ್ತು 2020ರಲ್ಲಿ ಈ ಪ್ರಶಸ್ತಿ ನೀಡದೆ ಅರಸು ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದರು. ಲೋಕೇಶ್ ಕುಮಾರ್, ರವಿ, ದಲಿತ ಸಂಘಟನೆಗಳ ಒಕ್ಕೂಟದ ಪಿ.ರಾಜು, ಸತ್ಯನಾರಾಯಣ ಪ್ರತಿಭಟನೆಯಲ್ಲಿದ್ದರು.

Translate »