`ಲಾಕ್‍ಡೌನ್’ ಆರ್ಥಿಕ ನೆರವಿಗೆ ಆಗ್ರಹಿಸಿ ವಕೀಲರ ಪ್ರತಿಭಟನೆ
ಮೈಸೂರು

`ಲಾಕ್‍ಡೌನ್’ ಆರ್ಥಿಕ ನೆರವಿಗೆ ಆಗ್ರಹಿಸಿ ವಕೀಲರ ಪ್ರತಿಭಟನೆ

June 23, 2020

ಮೈಸೂರು, ಜೂ.22 (ಆರ್‍ಕೆಬಿ)- ಮೂರು ತಿಂಗಳಿಂದ ಲಾಕ್‍ಡೌನ್ ನಿಂದಾಗಿ ನ್ಯಾಯಾಲಯದ ಕಾರ್ಯ ಕಲಾಪ ನಡೆಯದ ಹಿನ್ನೆಲೆಯಲ್ಲಿ ವಕೀ ಲರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವು ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಕೂಡಲೇ ವಕೀಲರಿಗೆ ಆರ್ಥಿಕ ಸಹಾಯ ಮಾಡಬೇಕು ಎಂದು ಆಗ್ರಹಿಸಿ ಮೈಸೂರು ವಕೀಲರ ಸಂಘದ ಆಶ್ರಯ ದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಆನಂದ್‍ಕುಮಾರ್, ಕಾರ್ಯದರ್ಶಿ ಬಿ. ಶಿವಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆ ಯಿತು. ಈ ವೇಳೆ ಮಾತನಾಡಿದ ಕಾರ್ಯ ದರ್ಶಿ ಬಿ.ಶಿವಣ್ಣ, ಈ ಹಿಂದೆಯೇ ನಮ್ಮ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತಂದಿ ದ್ದೇವೆ. ಸರ್ಕಾರ ಬಿಡುಗಡೆ ಮಾಡಿರುವ 5 ಕೋಟಿ ರೂ. ಸಾಕಾಗುವುದಿಲ್ಲ. ಹಾಗಾಗಿ 50 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಾಜಿ ಅಧ್ಯಕ್ಷ ಬಸವರಾಜು, ಹಿರಿಯ ವಕೀಲರಾದ ವಿಜಯಕುಮಾರ್, ನರಸೇ ಗೌಡ, ಲಕ್ಷ್ಮಣ್, ಎಸ್.ಡಿ.ಶಿವಣ್ಣೇಗೌಡ, ನಾಗರಾಜು ಇನ್ನಿತರರು ಭಾಗವಹಿಸಿದ್ದರು.

Translate »