ಪದವಿ, ಸ್ನಾತಕೋತ್ತರ ಪದವಿ ಪ್ರವೇಶ, ಪರೀಕ್ಷಾ ಶುಲ್ಕ ರದ್ದುಪಡಿಸಲು ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಮೈಸೂರು

ಪದವಿ, ಸ್ನಾತಕೋತ್ತರ ಪದವಿ ಪ್ರವೇಶ, ಪರೀಕ್ಷಾ ಶುಲ್ಕ ರದ್ದುಪಡಿಸಲು ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

June 2, 2022

ಮೈಸೂರು,ಜೂ.1(ಆರ್‍ಕೆಬಿ)-ಪದವಿ ಮತ್ತು ಸ್ನಾತ ಕೋತ್ತರ ಪದವಿ ಪ್ರವೇಶಾತಿ ಶುಲ್ಕ ಹಾಗೂ ಪರೀಕ್ಷಾ ಶುಲ್ಕವನ್ನು ರದ್ದುಪಡಿಸಬೇಕೇಂದು ಒತ್ತಾಯಿಸಿ ಮಾನಸ ಗಂಗೋತ್ರಿಯ ಕ್ಲಾಕ್ ಟವರ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇದ್ದಕ್ಕಿದ್ದ ಹಾಗೆ ಪ್ರವೇಶ ಶುಲ್ಕ ಮತ್ತು ಪರೀಕ್ಷಾ ಶುಲ್ಕ ವನ್ನು ಕೂಡಲೇ ಕಟ್ಟಬೇಕೆಂದು ಆದೇಶ ಹೊರಡಿಸಿರುವ ಮೈಸೂರು ವಿಶ್ವವಿದ್ಯಾನಿಲಯದ ಆಡಳಿತ ವ್ಯವಸ್ಥೆಯ ಧೋರಣೆಯನ್ನು ಖಂಡಿಸಿ, ರಾಜ್ಯ ಸಂಶೋಧಕ ಸಂಘದ ಅಧ್ಯಕ್ಷÀ ಎಸ್.ಮರಿದೇವಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

2021-22ನೇ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾನಿಲ ಯದ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶಾತಿ ಸಂದರ್ಭದಲ್ಲಿ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶದ ಅನುಸಾರ ಉಚಿತವಾಗಿ ಪ್ರವೇಶಾತಿ ನೀಡಿದ್ದು, ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ಬಂದಾಗ ಪ್ರವೇಶ ಶುಲ್ಕ ವನ್ನು ಕಡಿತ ಮಾಡಿಕೊಳ್ಳಬೇಕಿತ್ತು. ಆದರೆ ವಿದ್ಯಾರ್ಥಿ ಗಳಿಗೆ ಸ್ಕಾಲರ್‍ಶಿಪ್ ಬರುವ ಮುಂಚೆಯೇ ಎಲ್ಲರೂ ಪ್ರವೇಶ ಶುಲ್ಕ ಮತ್ತು ಪರೀಕ್ಷಾ ಶುಲ್ಕವನ್ನು 2022ರ ಮೇ 31 ಕಡೆಯ ದಿನದ ಒಳಗೆ ಕಟ್ಟುವಂತೆ ಸುತ್ತೋಲೆ ಹೊರಡಿಸಿದೆ. ಗ್ರಾಮೀಣ ಭಾಗದ ಬಡತನ ರೇಖೆಗಿಂತ ಕೆಳಗಿರುವ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳು 15 ರಿಂದ 20 ಸಾವಿರ ರೂ. ಕಟ್ಟಲು ಸಾಧ್ಯವಿಲ್ಲ, ಹೀಗಾಗಿ ಕೂಡಲೇ ಪ್ರವೇಶ ಶುಲ್ಕ ಮತ್ತು ಪರೀಕ್ಷಾ ಶುಲ್ಕವನ್ನು ರದ್ದುಪಡಿಸಿ, ಸ್ಕಾಲರ್‍ಶಿಪ್ ಬಂದ ನಂತರ ಪ್ರವೇಶ ಶುಲ್ಕವನ್ನು ಮತ್ತು ಪರೀಕ್ಷಾ ಶುಲ್ಕವನ್ನು ಕಡಿತಗೊಳಿಸಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್‍ಕುಮಾರ್, ಜೂ.3ರೊಳಗೆ ವಿದ್ಯಾರ್ಥಿಗಳ ಬೇಡಿಕೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈಬಿಟ್ಟರು. ಪ್ರತಿ ಭಟನೆಯಲ್ಲಿ ಸಂಶೋಧಕರ ಸಂಘದ ಅಧ್ಯಕ್ಷ ಶಶಿಕುಮಾರ್ ಸಂಶೋಧಕ ಕೆಂಪರಾಜು, ದಿಲೀಪ್ ವಿದ್ಯಾರ್ಥಿಗಳಾದ ಗೌತಮ್, ಶ್ರೀನಿವಾಸ್, ಕಾರ್ತಿಕ್, ಕಿರಣ್‍ಕುಮಾರ್, ದೀಪಿಕಾ, ಮಹೇಶ್ ಬನ್ನವಾಡಿ, ಗಣೇಶ್, ದಿವ್ಯಶ್ರೀ, ಗೌತಮ್, ಅಭಿಷೇಕ್, ಮೇಘನಾ, ದರ್ಶನ್, ನಂಜುಂಡಸ್ವಾಮಿ, ಪ್ರವೀಣ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Translate »