ಅತಿವೃಷ್ಟಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಿ:ಹೆಚ್‍ಡಿಡಿ
ಹಾಸನ

ಅತಿವೃಷ್ಟಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಿ:ಹೆಚ್‍ಡಿಡಿ

August 28, 2018

ಹಾಸನ: ಜಿಲ್ಲೆಯ ಸಕಲೇಶಪುರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ನಷ್ಟವನ್ನು ನಿಖರವಾಗಿ ಅಂದಾಜಿಸಿ, ಸಂತ್ರಸ್ತರಿಗೆ ಸೂಕ್ತ ಹೆಚ್ಚಿನ ಪರಿಹಾರ ಕಲ್ಪಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಅಧಿ ಕಾರಿಗಳ ಸಭೆ ನಡೆಸಿದ ಅವರು, ಸಕಲೇಶಪುರ ಹಾಗೂ ಅರಕಲಗೂಡು ತಾಲೂಕುಗಳಲ್ಲಿ ಮಳೆ, ಪ್ರವಾಹದಿಂದ ಹೆಚ್ಚು ಹಾನಿ ಯಾಗಿದ್ದು, ಎಲ್ಲಾ ಸಂತ್ರಸ್ತರಿಗೂ ಸೂಕ್ತ ರೀತಿ ಯಲ್ಲಿ ಪರಿಹಾರ ದೊರೆಯಬೇಕು ಎಂದರು.

ಸಕಲೇಶಪುರ ತಾಲೂಕಿನ ಯಸಳೂರು, ಹೆತ್ತೂರು ಹೊಬಳಿಗಳಲ್ಲಿ ಅಪಾರ ಪ್ರಮಾ ಣದ ಭೂಮಿ, ಬೆಳೆ, ರಸ್ತೆ, ಕಟ್ಟಡಗಳು ಹಾನಿ ಗೀಡಾಗಿವೆ. ತಾವೂ ಅದನ್ನು ಕಣ್ಣಾರೇ ಕಂಡಿದ್ದು, ನಷ್ಟ ಅಂದಾಜಿಸುವಾಗ ಅಧಿಕಾರಿಗಳ ಮಾನವೀಯತೆ ತೋರಬೇಕು ಎಂದು ಸಲಹೆ ನೀಡಿದರಲ್ಲದೆ, ಹಲವೆಡೆ ಭೂಕುಸಿತದಿಂದ ಜಮೀನುಗಳ ಮೇಲೆ ಮಣ್ಣು ಸಂಗ್ರಹವಾಗಿದೆ. ಕೆಲವೆಡೆ ಜಮೀನೇ ಕುಸಿದಿದೆ. ಮಾಲೀಕರು ಮತ್ತೇ ಮೊದಲಿನಿಂದ ಬದುಕು ಕಟ್ಟಿಕೊಳ್ಳಬೇಕಿದೆ. ಹಾಗಾಗಿ ನಷ್ಟದ ಸಮೀಕ್ಷೆ ವೇಳೆ ಅಧಿಕಾರಿಗಳು ಎಲ್ಲಾ ರೀತಿಯ ಹಾನಿಗಳನ್ನು ಅವಲೋಕಿಸಬೇಕು ಎಂದು ಸಲಹೆ ನೀಡಿದರು.

ಸಕಲೇಶಪುರ ತಾಲೂಕಿನಲ್ಲಿ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಈ ಬಾರಿ ಬೆಳೆದು ನಿಂತಿದ್ದ ಫಸಲು ಹಾನಿಯಾಗಿದೆ. ಮೆಣಸು ಬೆಳೆ ಕೊಳೆತು ಹೋಗಿದೆ. ಇದು ಸುದೀರ್ಘ ಕಾಲದವರೆಗೆ ರೈತರ ಅರ್ಥಿ ಕತೆ ಮೇಲೆ ಪರಿಣಾಮ ಬೀರುತ್ತದೆ. ಇದೇ ರೀತಿ ಶುಂಠಿ, ಜೋಳ, ಭತ್ತ, ರಾಗಿ ಬೆಳೆ ನಾಶವಾಗಿದ್ದು, ರೈತರಿಗೆ ಮಾರುಕಟ್ಟೆ ದರದನ್ವಯ ಪರಿಹಾರ ದೊರಕಬೇಕು. ಹಿಜ್ಜನಹಳ್ಳಿಯಲ್ಲಿ ಸಂಭವಿಸಿದ ಭೂಕುಸಿತ ದಿಂದ ಭೂಮಿ ಕಳೆದು ಕೊಂಡಿರುವ ರೈತರಿಗೆ ಸೂಕ್ತ ಪರಿಹಾರ ಸಿಗಬೇಕು. ರಾಮ ನಾಥಪುರದಲ್ಲಿ ಕಾವೇರಿ ನದಿ ನೀರಿನ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಬದಲಿ ನಿವೇಶನ, ಜಲಾವೃತಗೊಳ್ಳುವ ಪ್ರದೇಶಗಳಲ್ಲಿ ಮನೆಗಳ ಸ್ಥಳಾಂತರಿಸುವ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಚಚಿಸಲಾಗುವುದು ಎಂದು ದೇವೇಗೌಡರು ತಿಳಿಸಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ, ಪ್ರಕೃತಿ ವಿಕೋಪದಿಂದ ಜಿಲ್ಲೆಯ ಸಕಲೇಶಪುರ, ಅರಕಲಗೂಡು, ಬೇಲೂರು ಮತ್ತು ಆಲೂರು ತಾಲೂಕು ಗಳಲ್ಲಿ 307 ಕೋಟಿ ರೂ. ನಷ್ಟ ಸಂಭವಿ ಸಿದೆ. ಕೃಷಿ, ತೋಟಗಾರಿಕಾ, ಲೋಕೋಪ ಯೋಗಿ, ಸಣ್ಣ ನೀರಾವರಿ, ವಿವಿಧ ಇಲಾಖೆಗಳು ನಷ್ಟವನ್ನು ಅಂದಾಜಿಸಿವೆ. ತುರ್ತು ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಮಾತನಾಡಿ ಹಾನಿಯ ವಿವರ ನೀಡಿದರು.

ಶಾಸಕ ಹೆಚ್.ಕೆ.ಕುಮಾರ್ಸ್ವಾಮಿ ಸಕಲೇಶಪುರ ತಾಲೂಕಿನ ಅತಿವೃಷ್ಟಿ ಗಂಭೀರತೆ, ರೈತರ ಸಂಕಷ್ಟಗಳನ್ನು ವಿವರಿಸಿದರು.

ಶಾಸಕ ಲಿಂಗೇಶ್ ಬೇಲೂರು ತಾಲೂಕಿನ ಅತಿವೃಷ್ಟಿ, ಅನಾವೃಷ್ಟಿ ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »