ಬೆಂಗಳೂರು, ಅ.13 (ಕೆಎಂಶಿ)- ಗ್ರಾಮ ಠಾಣಾ ಪ್ರದೇಶದ ಆಸ್ತಿಗಳಿಗೆ ನಿಖರವಾದ ಹಕ್ಕು ದಾಖಲೆಗಳನ್ನು ಒದಗಿಸುವ ‘ಸ್ವಾಮಿತ್ವ’ ಯೋಜನೆಯನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಕೇಂದ್ರ ಸರ್ಕಾರದ ನೆರವಿನಿಂದ ಮೊದಲ ಹಂತದಲ್ಲಿ 16 ಜಿಲ್ಲೆಗಳ 16600 ಗ್ರಾಮ ಗಳಲ್ಲಿ ಕಾರ್ಡ್ ವಿತರಿಸಲಾಗುವುದು ಎಂದರು.
ಆಸ್ತಿ ಮಾರಾಟ ಮತ್ತು ಖರೀದಿ ಪ್ರಕ್ರಿಯೆಗೊಳಿ ಸುವ ಈ ಯೋಜನೆ ಗ್ರಾಮ ಠಾಣಾ ಪ್ರದೇಶದ ಆಸ್ತಿಗಳಿಗೆ ನಿಖರವಾದ ಹಕ್ಕು ದಾಖಲೆಗಳನ್ನು ಒದಗಿ ಸುವುದು. ಈಗಾಗಲೇ ಮೈಸೂರು, ರಾಮನಗರ, ಹಾಸನ, ಬೆಳಗಾವಿ ಮತ್ತು ತುಮಕೂರು ಜಿಲ್ಲೆಗಳ ಹತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ 83 ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಕಾರ್ಡ್ ವಿತರಣೆ ಮಾಡಲಾಗಿದೆ. ಅಲ್ಲದೆ, 763 ಗ್ರಾಮಗಳಲ್ಲಿ ಆಸ್ತಿ ಮಾಲೀಕರಿಗೆ ಆಸ್ತಿ ಕಾರ್ಡ್‍ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ಮುಂದಿನ ಮಾರ್ಚ್ 2021ರ ಅಂತ್ಯದೊಳಗೆ 16600 ಗ್ರಾಮಗಳಲ್ಲಿ ಈ ಕಾರ್ಡ್‍ಗಳನ್ನು ಪ್ರಥಮ ಹಂತದ 16 ಜಿಲ್ಲೆಗಳಲ್ಲಿ ವಿತರಿಸ ಲಾಗುವುದು ಎಂದರು. ಉಳಿದ 14 ಜಿಲ್ಲೆಗಳಲ್ಲಿ 2021 ಏಪ್ರಿಲ್‍ನಿಂದ ಆರಂಭಗೊಂಡು, ಅಕ್ಟೋಬರ್ 2ನೇ ವಾರದಲ್ಲಿ ಸ್ವಾಮಿತ್ವ ಯೋಜನೆ ಕುರಿತು ಗ್ರಾಮಸಭೆಗಳನ್ನು ಆಯೋ ಜಿಸಲಾಗುವುದು ಎಂದು ತಿಳಿಸಿದರು. ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿರುವ ಆಸ್ತಿ ಗಳನ್ನು ಗುರುತಿಸಲು 12 ಡ್ರೋಣ್‍ಗಳನ್ನು ಬಳಕೆ ಮಾಡಲಾಗುತ್ತಿದೆ. ಆಸ್ತಿ ಮಾಲೀಕರಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಭೂಮಾಪಕರ ಜಂಟಿ ಸಹಿ ಇರುವ ನಕ್ಷೆ ಸಹಿತ ಆಸ್ತಿ ಪ್ರಮಾಣ ಪತ್ರವನ್ನು ವಿತರಿಸಲಾಗುವುದು. ಸರ್ಕಾರದ ಈ ನಿರ್ಧಾರದಿಂದ ಪಂಚಾಯಿತಿಗಳಲ್ಲಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಸಹಕಾರಿ ಯಾಗಲಿದೆ. ಇದರಿಂದ ಪಂಚಾಯಿತಿ ಗಳು ಮತ್ತಷ್ಟು ಸದೃಢಗೊಳ್ಳಲು ಸಹಕಾರಿಯಾಗಲಿದೆ ಎಂದರು.
ಕೇಂದ್ರ ಸರ್ಕಾರವು ಮುಖ್ಯ ರಸ್ತೆ ಹಾಗೂ ಪ್ರಮುಖ ಕೂಡು ರಸ್ತೆಗಳ ಬಲವರ್ಧನೆ ಮತ್ತು ನವೀಕರಣಕ್ಕಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-IIIರಡಿ ಕರ್ನಾಟಕ ರಾಜ್ಯಕ್ಕೆ ಒಟ್ಟು 5612.50 ಕಿ.ಮೀ ಹಂಚಿಕೆ ಮಾಡಿರುತ್ತದೆ ಎಂದರು.
ಈ ಯೋಜನೆಗೆ ಕೇಂದ್ರ ಸರ್ಕಾರದ ಪಾಲು ಶೇ.60 ಮತ್ತು ರಾಜ್ಯ ಸರ್ಕಾರದ ಪಾಲು ಶೇ.40ರಷ್ಟಿ ರುತ್ತದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪತ್ರ ಸಂಖ್ಯೆ P-17024/12/2020/ಓo (369983) ದಿನಾಂಕ: 02.03.2020ರಲ್ಲಿ 445 ರಸ್ತೆ ಕಾಮಗಾರಿ ಗಳು ಹಾಗೂ 26 ಉದ್ದದ ಸೇತುವೆಗಳನ್ನೊಳಗೊಂ ಡಂತೆ 3226.21 ಕಿ.ಮೀ.ಗಳ ಉದ್ದದ ಗ್ರಾಮೀಣ ರಸ್ತೆಗಳನ್ನು ರೂ. 2729.66 ಕೋಟಿಗಳ ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಬ್ಯಾಚ್-1ರಡಿಯಲ್ಲಿ ಅನುಮೋದನೆ ನೀಡಲಾಗಿದೆ. ಬ್ಯಾಚ್-1ರ ಎಲ್ಲಾ ರಸ್ತೆ ಮತ್ತು ಸೇತುವೆ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ವಿವಿಧ ಹಂತದ ಪ್ರಗತಿಯಲ್ಲಿರುತ್ತವೆ. ಉಳಿಕೆ 2410.93 ಕಿಮಿ ಉದ್ದದ ರಸ್ತೆ ಕಾಮಗಾರಿಗಳ ಪ್ರಸ್ತಾವನೆ ಕೇಂದ್ರ ಸರ್ಕಾರದ ಅನುಮೋದನೆ ನಿರೀಕ್ಷೆಯಲ್ಲಿ ರುತ್ತದೆ. 2020-21ನೇ ಸಾಲಿಗೆ 13.00 ಕೋಟಿ ಮಾನವ ದಿನಗಳ ಗುರಿ ನೀಡಲಾಗಿದ್ದು, ಇಲ್ಲಿಯವ ರೆಗೆ 9.32 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ಈಗಾಗಲೇ ವಾರ್ಷಿಕ ಗುರಿಯ ಶೇ.71.68 ರಷ್ಟು ಸಾಧನೆ ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ವಿವರಿಸಿದರು.
ಪ್ರಸಕ್ತ ಸಾಲಿನಲ್ಲಿ ಕೂಲಿಗಾಗಿ ರೂ.2493.18 ಕೋಟಿ ಮತ್ತು ಸಾಮಗ್ರಿಗಳಿಗಾಗಿ ರೂ.609.65 ಕೋಟಿ ಸೇರಿ ಒಟ್ಟು ರೂ.3155.03 ಕೋಟಿ ವೆಚ್ಚ ಮಾಡಲಾ ಗಿದೆ. ಪ್ರಸ್ತುತ ವರ್ಷದಲ್ಲಿ 44.86 ಲಕ್ಷ ಕೂಲಿ ಕಾರ್ಮಿಕರಿಗೆ ಯೋಜನೆಯಡಿ ಕೆಲಸ ನೀಡಲಾಗಿದ್ದು, ಇದು ಕಳೆದ 5 ವರ್ಷಗಳಲ್ಲಿ ಅತೀ ಹೆಚ್ಚಿನ ಸಾಧನೆ ಯಾಗಿದೆ. ಪ್ರಸ್ತುತ ವರ್ಷದಲ್ಲಿ 8.34 ಲಕ್ಷ ಕಾಮಗಾರಿ ಗಳು ಪ್ರಗತಿಯಲ್ಲಿವೆ. ಮೇ-ಜೂನ್ ತಿಂಗಳಲ್ಲಿ ಕಂದಕ ಬದು ಅಭಿಯಾನ ಮತ್ತು ಅಕ್ಟೋಬರ್-ನವೆಂ ಬರ್ ತಿಂಗಳಲ್ಲಿ ಬಚ್ಚಲುಗುಂಡಿ ಮತ್ತು ಪೌಷ್ಟಿಕ ತೋಟ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.