ಅ.18ಕ್ಕೆ ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ನೇಮಕಾತಿಗೆ ಲಿಖಿತ ಪರೀಕ್ಷೆ
ಮೈಸೂರು

ಅ.18ಕ್ಕೆ ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ನೇಮಕಾತಿಗೆ ಲಿಖಿತ ಪರೀಕ್ಷೆ

October 15, 2020

ಮೈಸೂರು, ಅ.14-ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ (ಪುರುಷ) ನೇಮಕಾತಿಗಾಗಿ ಅ.18ರಂದು ಲಿಖಿತ ಪರೀಕ್ಷೆ ನಡೆಯಲಿದ್ದು, ಮೈಸೂರು ನಗರದಲ್ಲಿ 6,801 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ನಗರದ 14 ಪರೀಕ್ಷಾ ಕೇಂದ್ರಗಳಾದ ಎಸ್‍ಬಿಆರ್‍ಆರ್ ಮಹಾಜನ ಪಿಯು ಕಾಲೇಜ್, ಮಹಾಜನ ಪಬ್ಲಿಕ್ ಸ್ಕೂಲ್, ಜ್ಞಾನಗಂಗಾ ವಿದ್ಯಾಪೀಠ, ವಿದ್ಯಾವರ್ಧಕ ಪಾಲಿಟೆಕ್ನಿಕ್ ಕಾಲೇಜು, ಸೆಂಟ್ ಫಿಲೋಮಿನ ಪಿಯು ಕಾಲೇಜು, ವಿವೇಕಾನಂದ ಕಾಂಪೋಸೈಟ್ ಜ್ಯೂನಿಯರ್ ಕಾಲೇಜು, ವಿದ್ಯಾವರ್ಧಕ ಕಾಂಪೋಸೈಟ್ ಪಿಯು ಕಾಲೇಜು, ಎಸ್‍ಬಿಆರ್‍ಆರ್ ಮಹಾಜನ ಫಸ್ಟ್‍ಗ್ರೇಡ್ ಕಾಲೇಜು, ಕಾವೇರಿ ಸ್ಕೂಲ್, ಸರ್ಕಾರಿ ಪಿಯು ಕಾಲೇಜು, ವಿಜಯ ವಿಠಲ ಕಾಂಪೋಸೈಟ್ ಪಿಯು ಕಾಲೇಜು, ವಿಜಯ ವಿಠಲ ವಿದ್ಯಾಶಾಲಾ, ಜೆಎಲ್‍ಬಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ಕಲಾ ಕಾಲೇಜು, ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಪರೀಕ್ಷೆ ನಡೆಸಲಾಗುವುದು. ಅರ್ಹ ಅಭ್ಯರ್ಥಿಗಳು ಕರೆ ಪತ್ರದ ಜೊತೆಗೆ ಭಾವಚಿತ್ರವಿರುವ ಗುರುತಿನ ಪತ್ರದೊಂದಿಗೆ ನಿಗದಿತ ಸಮಯಕ್ಕಿಂತ 90 ನಿಮಿಷ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾಗಿರಬೇಕು. ಅಭ್ಯರ್ಥಿಗಳು ಮಾಸ್ಕ್ ಧರಿಸುವುದು. ಅಲ್ಲದೆ ಪ್ಯಾಕೇಟ್‍ನಲ್ಲಿ ಹ್ಯಾಂಡ್ ಸ್ಯಾನಿಟೈಸರ್‍ನ್ನು ತರುವಂತೆ ತಿಳಿಸಲಾಗಿದೆ.

 

Translate »