ಸಿಬಿಐ, ಇಡಿ, ಎನ್‍ಐಎ, ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮರಾ ಹಾಕಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ
ಮೈಸೂರು

ಸಿಬಿಐ, ಇಡಿ, ಎನ್‍ಐಎ, ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮರಾ ಹಾಕಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ

December 3, 2020

ನವದೆಹಲಿ,ಡಿ.2-ಸಿಬಿಐ, ಇಡಿ ಮತ್ತು ರಾಷ್ಟ್ರೀಯ ತನಿಖಾ ಏಜೆನ್ಸಿಯಂತಹ ಕೇಂದ್ರೀಯ ತನಿಖಾ ಸಂಸ್ಥೆಗಳ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಮತ್ತು ರೆಕಾರ್ಡಿಂಗ್ ಸಾಧನಗಳನ್ನು ಅಳವಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಬುಧವಾರ ನಿರ್ದೇಶನ ನೀಡಿದೆ. ಪ್ರತಿಯೊಂದು ಪೆÇಲೀಸ್ ಠಾಣೆಗಳ ಎಲ್ಲಾ ಆಗಮನ, ನಿರ್ಗಮನ ದ್ವಾರಗಳು, ಮುಖ್ಯ ದ್ವಾರ, ಲಾಕಪ್‍ಗಳು, ಕಾರಿಡಾರ್‍ಗಳು, ಸ್ವಾಗತ ಕೌಂಟರ್ ಮತ್ತು ಲಾಕಪ್ ಕೊಠಡಿಗಳ ಹೊರಗಡೆಯ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳ ವಡಿಕೆಯನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಖಾತ್ರಿಪಡಿಸಿಕೊಳ್ಳಬೇಕು ಎಂದು ನ್ಯಾಯಾಧೀಶ ಆರ್.ಎಫ್.ನಾರಿಮನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಹೇಳಿದೆ. ಮಾನವ ಹಕ್ಕುಗಳ ಉಲ್ಲಂಘನೆ ಪರಿಶೀಲನೆಗಾಗಿ ಪೆÇಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವಂತೆ ಉನ್ನತ ನ್ಯಾಯಾಲಯ
2018ರಲ್ಲಿ ಆದೇಶಿಸಿತ್ತು. ರಾತ್ರಿಯಲ್ಲೂ ನೋಡಬಹುದಾದ ಸಾಧನಗಳನ್ನು ಸಿಸಿಟಿವಿ ವ್ಯವಸ್ಥೆಗಳು ಹೊಂದಿರಬೇಕು, ಆಡಿಯೋ, ವಿಡಿಯೋ ಫುಟೇಜ್ ಹೊಂದಿರಬೇಕು, ಕನಿಷ್ಠವೆಂದರೂ ಒಂದು ವರ್ಷದವರೆಗೂ ಮಾಹಿತಿಯನ್ನು ಸಂಗ್ರಹಿಸಿಡಬಲ್ಲಂತಹ ಸಿಸಿಟಿವಿ ಕ್ಯಾಮರಾಗಳನ್ನು ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕಡ್ಡಾಯ ವಾಗಿ ಖರೀದಿಸಬೇಕು ಎಂದು ನ್ಯಾಯಪೀಠ ಹೇಳಿತು. ಆರು ತಿಂಗಳಿಗೂ ಕಡಿಮೆ ಇಲ್ಲದ ರೀತಿಯಲ್ಲಿ ಒಂದು ನಿರ್ದಿಷ್ಠ ಸಮಯದವರೆಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಬೇಕು, ಮಾನವ ಹಕ್ಕುಗಳ ಉಲ್ಲಂಘನೆ ಸಂದರ್ಭದಲ್ಲಿ ಸಂತ್ರಸ್ತರು ತಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ ಎಂದು ನ್ಯಾಯಪೀಠ ತಿಳಿಸಿತು.

ಕಮರ್ಷಿಯಲ್ ಸಿಲಿಂಡರ್ ದರ 55 ರೂ. ಹೆಚ್ಚಳ
ನವದೆಹಲಿ,ಡಿ.2-ಕಚ್ಛಾತೈಲ ಬೆಲೆ ಏರಿಕೆ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್‍ಗಳ ಬೆಲೆಯಲ್ಲೂ ಏರಿಕೆಯಾಗಿದೆ. ಇದೀಗ ಎಲ್‍ಪಿಜಿ ಗ್ರಾಹಕರಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಳೆದ ತಿಂಗಳಷ್ಟೇ ವಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗಿತ್ತು. ಇದೀಗ ಮತ್ತೆ 19 ಕೆಜಿ ಕಮರ್ಷಿಯಲ್ ಎಲ್‍ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ ಬರೋಬ್ಬರಿ 55 ರೂಪಾಯಿ ಹೆಚ್ಚಿಸಲಾಗಿದೆ. ಆದರೆ, ಗೃಹಬಳಕೆಯ 14.2 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆ ಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಜುಲೈನಲ್ಲಿ ಗೃಹಬಳಕೆ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಿ 4 ರೂಪಾಯಿ ಹೆಚ್ಚಿಸಲಾಗಿತ್ತು. ಆದರೆ, ಕಳೆದ ಮೇ ನಲ್ಲಿ ಬರೋಬ್ಬರಿ 162 ರೂಪಾಯಿ ಇಳಿಕೆಯಾಗಿತ್ತು. ಇದೀಗ ತೈಲ ಕಂಪನಿಗಳು ಕಮರ್ಷಿಯಲ್ ಎಲ್‍ಪಿಜಿ ಸಿಲಿಂಡರ್ ಪರಿಷ್ಕೃತ ಬೆಲೆಗಳನ್ನು ಬಿಡುಗಡೆ ಮಾಡಿವೆ.

Translate »