ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್‍ರಿಂದ ಹಣ್ಣುಗಳ ಗುಣಮಟ್ಟ ಪರಿಶೀಲನೆ
ಹಾಸನ

ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್‍ರಿಂದ ಹಣ್ಣುಗಳ ಗುಣಮಟ್ಟ ಪರಿಶೀಲನೆ

May 27, 2018

ಹಾಸನ :  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್ ಅವರಿಂದು ನಗರದ ಕಲಾ ಭವನದ ಬಳಿ ರಸ್ತೆಬದಿಯಲ್ಲಿ ಮಾರಾಟ ಮಾಡುತ್ತಿದ್ದ ಹಣ್ಣುಗಳ ಗುಣಮಟ್ಟ ಪರಿಶೀಲಿಸಿದರು.

ರಸ್ತೆ ಬದಿಯಲ್ಲಿ ಮಾರುವಂತಹ ಹಣ್ಣು ಗಳನ್ನು ಪೌಡರ್ ಮೂಲಕ ಹಣ್ಣು ಮಾಡ ಲಾಗುತ್ತದೆ ಎಂಬ ಸಂಶಯಾಸ್ಪದ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ತೆರಳಿದ ಅವರು, ರಸ್ತೆಬದಿ ವ್ಯಾಪಾರಿಗಳು ಮಾರಾಟ ಕ್ಕಿಟ್ಟಿದ್ದ ಹಣ್ಣಗಳನ್ನು ಪರಿಶೀಲಿಸಿದರಲ್ಲದೆ, ವ್ಯಾಪಾರ ಮಾಡುವ ವ್ಯಕ್ತಿ ಯಾರಿಂದ ಸರಕು ಪಡೆಯುತ್ತಾನೆ, ಮಾವಿನ ಹಣ್ಣುಗಳನ್ನು ಯಾವ ರೀತಿ ಹಣ್ಣು ಮಾಡಲಾಗುತ್ತದೆ ಹಾಗೂ ಹಣ್ಣು ಮಾಡಲು ಔಷಧಿ ಅಥವಾ ಪೌಡರ್‍ಗಳನ್ನು ಬಳಸಲಾಗುತ್ತದೆಯೇ ಎಂಬುದರ ಬಗ್ಗೆ ಸೂಕ್ತ ಮಾಹಿತಿ ಪಡೆದು ಕೊಂಡರು.

ರಸ್ತೆ ಬದಿಯಲ್ಲಿ ಮಾರಾಟ ಮಾಡುವ ವರ್ತಕರಿಗೆ ಶುಚಿತ್ವ ಕಾಪಾಡಿಕೊಳ್ಳಲು ತಿಳಿಸಿದ ಆರೋಗ್ಯಾಧಿಕಾರಿ, ಹಣ್ಣು ವ್ಯಾಪಾರಿಗಳು ನಗರಸಭೆಯಿಂದ ನಿಗದಿತ ಕಾಲದವರೆಗೂ ಪರವಾನಗಿ ಪಡೆಯ ಬೇಕು. ಇನ್ನೆರಡು ದಿನಗಳ ಒಳಗೆ ಪರವಾ ನಗಿ ಪಡೆಯದಿದ್ದಲ್ಲಿ ವ್ಯಾಪಾರ ರದ್ದು ಗೊಳಿಸುವುದಾಗಿ ಎಚ್ಚರಿಕೆ ನೀಡಿದ ರಲ್ಲದೆ, ಹಣ್ಣನ್ನ ಮಾಗಿಸಲು ಔಷಧಿ ಗಳನ್ನು ಬಳಸುವ ವ್ಯಾಪಾರಸ್ಥರಿಗೆ ವ್ಯಾಪಾರವನ್ನು ಮುಂದುವರೆಸದಂತೆ ನೋಟೀಸ್ ಜಾರಿಗೊಳಿಸುವಂತೆ ಜೊತೆ ಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ ವಿವಿಧೆಡೆ ಈಗಾಗಲೇ ಹರ ಡುತ್ತಿರುವ ನಿಫಾ ವೈರಸ್ ಬಗ್ಗೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಯಾವುದೇ ಪ್ರಾಣ ಪಕ್ಷಿಗಳು ಕಚ್ಚಿರುವ ಹಣ್ಣುಗಳ ಮಾರಾಟ ಮಾಡ ದಂತೆ ಹಾಗೂ ಪ್ರತೀ ಹಣ್ಣನ್ನು ಪರಿಶೀಲಿಸುವಂತೆ ವ್ಯಾಪಾರಿಗಳಿಗೆ ಸಲಹೆ ನೀಡಿದರು.

ನಂತರ ರಸ್ತೆಬದಿ ಮಾರಾಟ ಮಾಡುವ ವ್ಯಾಪಾರಿಗಳಿಗೆ ಹಣ್ಣನ್ನು ನೀಡುವಂತಹ ಹಣ ್ಣನ ಮಂಡಿಗಳಿಗೆ ತೆರಳಿ ಪರಿಶೀಲಿಸಿ ದರು. ಕೊಳೆತ ಹಣ್ಣುಗಳ ವಿಲೇವಾರಿ ಕುರಿತಂತೆ ಮಾಹಿತಿ ಪಡೆದು, ಕೊಳೆತ ಹಣ್ಣುಗಳ ತ್ಯಾಜ್ಯವನ್ನು ಬೀದಿಗೆ ಬಿಸಾಡದೆ ಕಸದ ವಾಹನಗಳ ಮೂಲಕವೇ ವಿಲೇ ವಾರಿ ಮಾಡುವಂತೆ ತಿಳಿಸಿದ ಅವರು, ಯಾವುದೇ ಸಾಂಕ್ರಾಮಿಕ ರೋಗಗಳಿಗೆ ಆಸ್ಪದ ನೀಡದೆ ಸ್ವಚ್ಛತೆ ಕಾಪಾಡಿಕೊಳ್ಳು ವಂತೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಆಹಾರ ಗುಣ ಮಟ್ಟ ಸುರಕ್ಷಿತಾಧಿಕಾರಿ ಡಾ.ಹಿರಣ್ಣಯ್ಯ, ಆಹಾರ ಸುರಕ್ಷತಾ ಅಧಿಕಾರಿ ಬಸವೇ ಗೌಡ ಹಾಗೂ ಸಿಬ್ಬಂದಿ ಹಾಜರಿದ್ದರು.

Translate »