ಗುಣಮಟ್ಟ ಪರಿಶೀಲಿಸಿದ ಲೋಕಾಯುಕ್ತ ತಂಡ
ಮಂಡ್ಯ

ಗುಣಮಟ್ಟ ಪರಿಶೀಲಿಸಿದ ಲೋಕಾಯುಕ್ತ ತಂಡ

July 15, 2021

ಕೆ.ಆರ್.ಪೇಟೆ, ಜು.14(ಆರ್.ಶ್ರೀನಿವಾಸ್)- ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂ ಗಲ, ಪಾಂಡವಪುರ ತಾಲೂಕಿನ ವಿವಿಧ ಭಾಗಗಳಿಗೆ ನೀರುಣಿಸುವ ಹೇಮಾವತಿ ನೀರಾವರಿ ಇಲಾಖೆಯ ಸಾಹುಕಾರ್ ಚನ್ನಯ್ಯ ಮುಖ್ಯ ನಾಲೆಯ 813 ಕೋಟಿ ರೂ. ವೆಚ್ಚ ದಲ್ಲಿ ಆಧುನೀಕರಣದ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ನೂರಾರು ಕೋಟಿ ರೂ. ಸಾರ್ವಜನಿಕರ ಹಣ ದುರುಪಯೋಗ ವಾಗಿದೆ ಎಂದು ತಾಲೂಕು ರೈತ ಸಂಘದ ಕಾರ್ಯಕರ್ತರ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಇಲಾಖೆಯ ಮುಖ್ಯ ಇಂಜಿನಿಯರ್ ಸೇರಿದಂತೆ ಗುಣಮಟ್ಟ ತಜ್ಞರ ತಂಡವು ನಾಲೆಗಳ ಮೇಲೆ ಸಂಚರಿಸಿ ಪರಿಶೀಲನೆ ಆರಂಭಿಸಿತು.

ಕರ್ನಾಟಕ ಲೋಕಾಯುಕ್ತ ಇಲಾಖೆಯ ಮುಖ್ಯ ಇಂಜಿನಿಯರ್ ಪ್ರಸಾದ್ ಮತ್ತು ನಿರಂಜನ್ ನೇತೃತ್ವದ ಅಧಿಕಾರಿಗಳ ತಂಡವು ಕೆ.ಆರ್.ಪೇಟೆ ತಾಲೂಕಿನ 52ನೇ ಸರಪಳಿ ಯಿಂದ ನಾಲೆಗಳ ಮೇಲೆ ಸಂಚರಿಸಿ ಚಟ್ಟಂಗೆರೆ ಸುರಂಗ ಮಾರ್ಗವಾಗಿ ಸಾಗಿ ಅಲ್ಲಲ್ಲಿ ಕಾಲುವೆಯೊಳಕ್ಕೆ ಇಳಿದು ಯಂತ್ರ ದಿಂದ ಕಾಮಗಾರಿಯನ್ನು ಲೈನಿಂಗ್ ಡ್ರಿಲ್ಲಿಂಗ್ ಮೂಲಕ ಅಳತೆ ಮಾಡಿ ಗುಣ ಮಟ್ಟವನ್ನು ಪರಿಶೀಲನೆ ನಡೆಸಿತು.

ಸುಮಾರು 813 ಕೋಟಿ ವೆಚ್ಚದ ನಾಲಾ ಆಧುನೀಕರಣ ಕಾಮಗಾರಿಯಲ್ಲಿ ಟರ್ಫಿಂಗ್, ಚರಂಡಿ ನಿರ್ಮಾಣ, ಗಡಿ ಕಲ್ಲುಗಳ ಅಳವ ಡಿಕೆ, ಶಾಶ್ವತವಾದ ಬೆಂಚ್ ಮಾರ್ಕ್ ಕಲ್ಲುಗಳ ಅಳವಡಿಕೆ, ಪ್ರತಿ.ಕಿ.ಮೀಗೆ ಒಂದರಂತೆ ಐ.ಆರ್.ಸಿ. ಗುಣಮಟ್ಟದಸ ಕಿಲೋಮೀಟರ್ ಕಲ್ಲುಗಳು, ಐ.ಆರ್.ಸಿ ಗುಣಮಟ್ಟದ ಹೆಕ್ಟೋ ಮೀಟರ್ ಕಲ್ಲುಗಳು, 10.50 ಕಿಲೋ ವ್ಯಾಟ್ ಸಾಮಥ್ರ್ಯದ ಜನರೇಟರ್‍ಗಳು, ತಡೆಗೋಡೆ ರಕ್ಷಣಾ ಕಲ್ಲುಗಳ ಅಳವಡಿಕೆ ಸೇರಿದಂತೆ ಹಲವು ಲೋಪಗಳ ಮೂಲಕ ಸಂಪೂರ್ಣವಾಗಿ ಕೆಲಸ ಮಾಡದೆ ಹನ್ನೊಂದು ಕೋಟಿ ಅರವೈತ್ತೈದು ಲಕ್ಷದ ಇಪ್ಪತೇಳು ಸಾವಿರದ ಎರಡು ನೂರ ತೊಂಬ ತ್ತಾರು (11,65,27,296) ರೂ ಹಣವನ್ನು ಬಿಲ್ಲು ಮಾಡಿಕೊಳ್ಳಲಾಗಿದ್ದು, ಕಾಲುವೆಯ ಲೈನಿಂಗ್ ಕಳಪೆಯಾಗಿದೆ. ಹಲವೆಡೆ ಸೋಪಾನ ಕಟ್ಟೆಗಳ ನಿರ್ಮಾಣ, ರ್ಯಾಂಪ್‍ಗಳ ನಿರ್ಮಾಣ ಮಾಡದೆ ಬಿಲ್ ಬರೆದುಕೊಳ್ಳಲಾಗಿದೆ. ಕಾಲುವೆ ಏರಿ ಮೇಲೆ ಗ್ರಾವಲ್ ಮಣ್ಣು ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡದಿದ್ದರೂ ದೂರದ ಟಿ.ನರಸೀಪುರ ಮತ್ತಿತರ ಭಾಗದಿಂದ ಗ್ರ್ಯಾವಲ್ ಮಣ್ಣು ತರಲಾಗಿದೆ ಎಂದು ಸುಳ್ಳು ಲೆಕ್ಕ ತೋರಿಸ ಲಾಗಿದೆ. ತೂಬುಗಳ ರಿಪೇರಿ ಮತ್ತಿತರ ಹೆಸರಿನಲ್ಲೂ ಹಣ ದೋಚಲಾಗಿದೆ. 813 ಕೋಟಿ ಅಂದಾಜಿನ ಕಾಮಗಾರಿ ಯೋಜನೆ ಯನ್ನು 1200 ಕೋಟಿಗೂ ಅಧಿಕ ಹಣಕ್ಕೆ ವಿಸ್ತರಿಸಿಕೊಂಡು ಭಾರೀ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿ ರೈತಸಂಘ ಟನೆಯ ಕಾರ್ಯಕರ್ತರು ಭ್ರಷ್ಟಾಚಾರ ನಿಗ್ರಹ ದಳ, ಲೋಕಾಯುಕ್ತ ಕಛೇರಿ, ನೀರಾ ವರಿ ಸಚಿವರು, ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರಿಗೂ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಲೋಕಾಯುಕ್ತ ಇಲಾಖೆಯ ಗುಣಮಟ್ಟ ತಜ್ಞರ ತಂಡ ಪರಿಶೀಲನೆ ಆರಂಭಿಸಿದೆ.
ತಾಲೂಕಿನುದ್ದಕ್ಕೂ ಸಂಚರಿಸಿದ ಲೋಕಾ ಯುಕ್ತ ತಂಡ ಕಿತ್ತು ಹೋಗುತ್ತಿರುವ ಲೈನಿಂಗ್, ರ್ಯಾಂಪ್‍ಗಳು, ಸೋಪಾನಕಟ್ಟೆಗಳು, ಶಿಥಿಲಾವಸ್ಥೆಯ, ತಡೆಗೋಡೆಯಿಲ್ಲದ ಸೇತುವೆ ಮತ್ತು ಕಾಲುವೆ ಏರಿಗಳು, ಅಳವಡಿಕೆಯಾ ಗದ ಗಡಿ ಕಲ್ಲುಗಳು ಮತ್ತಿತರ ಲೋಪಗಳು ಕಂಡುಬಂದವು. ಕಳಪೆ ಲೈನಿಂಗ್ ಕಾಮಗಾರಿ ಮತ್ತಿತರ ಸ್ಯಾಂಪಲ್‍ಗಳನ್ನು ಲೋಕಾಯು ಕ್ತರ ತಂಡ ಹೆಚ್ಚಿನ ತನಿಖೆಗೆ ವಶಕ್ಕೆ ತೆಗೆದು ಕೊಂಡಿತು. ಕಾಲುವೆ ಏರಿಯ ಮೇಲೆ ಗ್ರ್ಯಾವಲ್ ಹಾಕಿದ್ದೇವೆಂದು ಸುಮಾರು 28 ಕೋಟಿ ಬಿಲ್ಲ ಬರೆಯಲಾಗಿದೆ. ಆದರೆ ಗ್ರ್ಯಾವಲ್ ಹಾಕದ ಪರಿಣಾಮ ಕಾಲುವೆ ಏರಿಯ ಮೇಲಿನ ರಸ್ತೆ ಸಂಚರಿಸಲಾರದಷ್ಟು ಹಾಳಾಗಿದ್ದು, ಲೋಕಾಯುಕ್ತರ ತಂಡದ ವಾಹನಗಳು ಸಂಚರಿಸಲಾರದೆ ಪರ್ಯಾಯ ಮಾರ್ಗದ ಮೂಲಕ ಕಾಲುವೆ ಏರಿ ಪ್ರವೇ ಶಿಸಬೇಕಾಯಿತು. 115 ಕಿ.ಮಿ ವ್ಯಾಪ್ತಿಯಲ್ಲಿ ಕಾಲುವೆ ಏರಿಯೇ ಗುಂಡಿ ಬಿದ್ದಿದ್ದು, ಲೋಕಾಯುಕ್ತ ತಂಡದ ಜೊತೆ ಬಂದಿದ್ದ ಸ್ಥಳೀಯ ಇಂಜಿನಿಯರುಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.

ಲೋಕಾಯುಕ್ತ ಇಲಾಖೆಯ ಮುಖ್ಯ ಇಂಜಿನಿಯರ್ ಪ್ರಸಾದ್, ಕಾರ್ಯಪಾಲಕ ಇಂಜಿನಿಯರ್ ನಿರಂಜನ್, ಚನ್ನರಾಯಪಟ್ಟಣ ಹೇಮಾವತಿ ವಿಭಾಗದ ಅಧೀಕ್ಷಕ ಇಂಜಿ ನಿಯರ್ ಮಂಜುನಾಥ್, ಕೆ.ಆರ್.ಪೇಟೆ ಹೆಚ್‍ಎಲ್‍ಬಿಸಿ ವಿಭಾಗದ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್, ನಾಗಮಂಗಲ ತಾಲೂಕು ಇಇ ಶಿಲ್ಪಾ, ಪಾಂಡವಪುರ ತಾಲೂಕು ಇಇ ಗಂಗಾಧರಮೂರ್ತಿ, ಮೈಸೂರು ಗುಣ ನಿಯಂತ್ರಣಾಧಿಕಾರಿ ಲೋಕೇಶ್, ಮಹೇಶ್, ಎಂಜಿನಿಯರುಗಳಾದ ಗುರು ಪ್ರಸಾದ್ ಸೇರಿದಂತೆ ಹಲವು ಇಂಜಿನಿಯರು ಗಳು, ಪರಿಶೀಲನೆ ವೇಳೆ ಉಪಸ್ಥಿತರಿದ್ದರು.
ರೈತ ಮುಖಂಡರಾದ ನಾಗೇಗೌಡ, ಮುದ್ದುಕುಮಾರ್, ನೀತಿಮಂಗಲ ಮಹೇಶ್, ಮಾಕವಳ್ಳಿ ರವಿ, ಎಲ್.ಬಿ.ಜಗದೀಶ್, ಹಿರೀಕಳಲೆ ಬಸವರಾಜು, ಮುಖಂಡರಾದ ಬಸ್ ಕೃಷ್ಣೇ ಗೌಡ, ದೇವರಾಜು ಮತ್ತಿತರರು ಹಾಜರಿದ್ದು ಕಳಪೆ ಕಾಮಗಾರಿ ಬಗ್ಗೆ ವಿವರ ನೀಡಿದರು.

Translate »