ಮಣ್ಣಿನ ಸಮಗ್ರ ನಿರ್ವಹಣೆಯಿಂದ ಗುಣಮಟ್ಟದ ಇಳುವರಿ ಸಾಧ್ಯ
ಹಾಸನ

ಮಣ್ಣಿನ ಸಮಗ್ರ ನಿರ್ವಹಣೆಯಿಂದ ಗುಣಮಟ್ಟದ ಇಳುವರಿ ಸಾಧ್ಯ

July 23, 2019

ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎನ್.ದೇವಕುಮಾರ್
ಹಾಸನ, ಜು.22- ಮಣ್ಣಿನ ಸಮಗ್ರ ನಿರ್ವಹಣೆಯಿಂದ ತೆಂಗಿನಲ್ಲಿ ಸುಸ್ಥಿರ ಉತ್ಪಾದಕತೆ ಮತ್ತು ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯ ಎಂದು ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎನ್.ದೇವಕುಮಾರ್ ತಿಳಿಸಿದರು.

ಚನ್ನರಾಯಪಟ್ಟಣ ತಾಲೂಕಿನ ನುಗ್ಗೇ ಹಳ್ಳಿ ಹೋಬಳಿಯ `ಸ್ಮಾರ್ಟ್‍ಗ್ರಾಮ’ ಹೂವಿನಹಳ್ಳಿ ಗ್ರಾಮದಲ್ಲಿ ಕೃಷಿ ಮಹಾ ವಿದ್ಯಾಲಯ ಕಾರೇಕೆರೆ, ಹಾಸನ ವತಿ ಯಿಂದ ರೈತರಿಗೆ ಸುಸ್ಥಿರ ತೆಂಗಿನ ಉತ್ಪಾ ದಕತೆಯಲ್ಲಿ ಮಣ್ಣಿನ ಆರೋಗ್ಯ ಉಪ ಯುಕ್ತ ಸೂಕ್ಷ್ಮ ಜೀವಾಣುಗಳ ಬಳಕೆ ಹಾಗೂ ಫಲವತ್ತತೆಯ ಮಹತ್ವದ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ತೆಂಗಿನಲ್ಲಿ ಪೂರ್ವ ಮುಂಗಾರು ಅಥವಾ ಮುಂಗಾರಿನಲ್ಲಿ ಹಸಿರೆಲೆ ಗೊಬ್ಬರದ ಬೆಳೆಗಳಾದ ಸೆಣಬು, ಅಪ್ಸೆಣಬು ಅಥವಾ ದ್ವಿದಳ ಧಾನ್ಯಗಳಾದ ಅಲಸಂದೆ, ಹೆಸರು, ತೊಗರಿ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನಲ್ಲಿ ಸಾರಜನಕ ಸ್ಥಿರೀಕರಣಗೊಳ್ಳು ವುದರ ಜೊತೆಗೆ ಮಣ್ಣಿನಲ್ಲಿ ಸಾವಯವ ಅಂಶ ಅಧಿಕಗೊಳಿಸಬಹುದು ಎಂದರು.

ಮಣ್ಣಿನಲ್ಲಿ ತೇವಾಂಶದ ಕೊರತೆ ನೀಗಿ ಸಲು ಒಣಗಿದ ತೆಂಗಿನ ಗರಿಗಳು, ಕುರಂ ಬಳೆ ಮುಂತಾದವುಗಳನ್ನು ಕತ್ತರಿಸಿ ಕಾಂಡದ ಸುತ್ತಲೂ ಹೊದಿಕೆ ಹಾಕುವುದು ಅತ್ಯು ತ್ತಮ ಪದ್ಧತಿ. ಇದನ್ನು ಪಾಲಿಸುವಂತೆ ಕರೆ ನೀಡಿದರು.

ಕೃಷಿ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ಚನ್ನಕೇಶವ ಮಾತನಾಡಿ, ರೈತರು ಮಣ್ಣಿನ ಆರೋಗ್ಯದ ನಿರ್ವ ಹಣೆಗೆ ಉತ್ತಮ ಕೆರೆಗೋಡನ್ನು ಮಿತವಾಗಿ ಅಂದರೆ ಪ್ರತಿ ಎಕರೆಗೆ 20-25 ಟನ್ ಹಾಕಿ ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಗುಣ ಮಟ್ಟ ಹಾಗೂ ನೀರನ್ನು ಹಿಡಿದಿಡುವ ಸಾಮಥ್ರ್ಯ ಹೆಚ್ಚಿಸಲು ಸಾಧ್ಯ ಎಂದರು.

ಈ ವೇಳೆ ರೈತರಿಗೆ ತೆಂಗಿನಲ್ಲಿ ರಸ ಸೋರುವ ರೋಗದ ಪರಿಕರಗಳು ಹಾಗೂ ಸಿರಿಧಾನ್ಯ ಬೆಳೆಗಳ ಸುಧಾರಿತ ತಳಿಗಳ ಬಿತ್ತನೆ ಬೀಜವನ್ನು ಪ್ರಾತ್ಯಕ್ಷಿಕೆ ನೀಡ ಲಾಯಿತು. ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಬಿ.ಎಸ್.ಬಸವ ರಾಜು, ಡಾ. ಓ.ಆರ್.ನಟರಾಜ್, ಡಾ.ಎಸ್. ಟಿ.ಭೈರಪ್ಪನವರ್, ಡಾ.ಆರ್.ಜಯರಾಮಯ್ಯ, ಡಾ.ಚನ್ನಕೇಶವ, ಡಾ.ವಿಶ್ವನಾಥ್ ಅಂಗಡಿ, ಡಾ.ವಿನಯ್‍ಕುಮಾರ್ ಮತ್ತು ಡಾ.ಮಂಜುನಾಥ್ ಇತರರಿದ್ದರು.

Translate »